ವಾಯುಮಾಲಿನ್ಯದಲ್ಲಿ ದೆಹಲಿ ಮೀರಿಸಿದ ಚೆನ್ನೈ!

ಕಳೆದ ವರ್ಷ ದೇಶದ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರಿ ಉಸಿರಾಡಲೂ ಕಷ್ಟವಾಗಿದ್ದ ಪರಿಸ್ಥಿತಿ ನಿರ್ಮಾಣವಾಗಿದ್ದ ಬಗ್ಗೆ ಎಲ್ಲರಿಗೂ ತಿಳಿದಿದೆ. ದೆಹಲಿಯಲ್ಲಿ ವ್ಯಾಪಕ ನಿಯಂತ್ರಣ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿದ ಬಳಿಕ ಮಾಲಿನ್ಯ ಪ್ರಮಾಣ ತುಸು ಕಡಿಮೆಯಾಗಿತ್ತು. ಆದರೆ...
ವಾಯುಮಾಲಿನ್ಯದಲ್ಲಿ ದೆಹಲಿ ಮೀರಿಸಿದ ಚೆನ್ನೈ!
ವಾಯುಮಾಲಿನ್ಯದಲ್ಲಿ ದೆಹಲಿ ಮೀರಿಸಿದ ಚೆನ್ನೈ!

ಚೆನ್ನೈ: ಕಳೆದ ವರ್ಷ ದೇಶದ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರಿ ಉಸಿರಾಡಲೂ ಕಷ್ಟವಾಗಿದ್ದ ಪರಿಸ್ಥಿತಿ ನಿರ್ಮಾಣವಾಗಿದ್ದ ಬಗ್ಗೆ ಎಲ್ಲರಿಗೂ ತಿಳಿದಿದೆ. ದೆಹಲಿಯಲ್ಲಿ ವ್ಯಾಪಕ ನಿಯಂತ್ರಣ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿದ ಬಳಿಕ ಮಾಲಿನ್ಯ ಪ್ರಮಾಣ ತುಸು ಕಡಿಮೆಯಾಗಿತ್ತು. ಆದರೆ, ಇದೀಗ ದೇಶದ ಎರಡನೇ ವಾಹನ ರಾಜಧಾನಿ ಎಂಬ ಬಿರುದು ಪಡೆದುಕೊಂಡಿರುವ ಚೆನ್ನೈ ವಾಯುಮಾಲಿನ್ಯದಲ್ಲಿ ದೆಹಲಿಯನ್ನು ಮೀರಿಸಿದೆ. 

ಇಂದು ಬೆಳಿಕ್ಕೆ ಚೆನ್ನೈ ನಗರದ ವಾಯುಮಾಲಿನ್ಯದ ಮಟ್ಟ 264ಕ್ಕೆ ತಲುಪಿದೆ. ಈ ಹೊತ್ತಿಗೆ ರಾಜಧಾನಿ ದೆಹಲಿಯ ವಾಯುಮಾಲಿನ್ಯದ ಮಟ್ಟ 254 ದಾಖಲಾಗಿರುವುದು ಕಂಡು ಬಂದಿದೆ. 

ತಮಿಳುನಾಡಿನ ಹಲವು ಭಾಗಗಳಲ್ಲಿ ಹೆಚ್ಚಿನ ವಾಯುಮಾಲಿನ್ಯ ಕಂಡು ಬಂದಿದೆ. ವೇಲಾಚೆರಿ, ರಾಮಪುರಂ, ಮನಾಲಿ, ಕೊಡುಂಗೈಯುರ್, ಅಣ್ಣ ನಗರ, ಚೆನ್ನೈ ವಿಮಾನ ನಿಲ್ದಾಣ ರಸ್ತೆಗಳಲ್ಲಿ ವಾಯುಮಾಲಿನ್ಯದ ಮಟ್ಟ 341ಕ್ಕೆ ತಲುಪಿರುವುದು ಕಂಡು ಬಂದಿದೆ. 

ಶುಕ್ರವಾರದವರೆಗೂ ಇದೇ ರೀತಿಯ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಚೆನ್ನೈ ನಗರದಲ್ಲಿ ಗಾಳಿಯ ಗುಣಮಟ್ಟದ ಮೇಲ್ವಿಚಾರಣಾ ಕೇಂದ್ರಗಳಿಲ್ಲದ ಕಾರಣ ಮಾಲಿನ್ಯದ ಮಟ್ಟವನ್ನು ಸರಿಯಾಗಿ ಮ ಅಂದಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಚೆನ್ನೈನಲ್ಲಿ ಅರ್ಬನ್ಎಮಿಷನ್.ಕಾಂ ಅಧ್ಯಯನ ನಡೆಸಿದ್ದು, ನಗರದಲ್ಲಿ ಪ್ರಾದೇಶಿಕ ಹಾಗೂ ತಾತ್ಕಾಲಿಕವಾಗಿ ಕನಿಷ್ಟ 38 ಮೇಲ್ವಿಚಾರಣಾ ಕೇಂದ್ರಗಳ ಅಗತ್ಯವಿದೆ ಎಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com