ಚಿನ್ಮಯಾನಂದ ಕೇಸ್: ರೇಪ್ ಸಂತ್ರಸ್ತೆ ಕುಟುಂಬಕ್ಕೆ ಎಸ್ ಐಟಿಯಿಂದ ಕಿರುಕುಳ

ರಾಷ್ಟ್ರಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಚಿನ್ಮಯಾನಂದ ಅತ್ಯಾಚಾರ ಕೇಸ್ ನ ರೇಪ್ ಸಂತ್ರಸ್ತೆ ಕುಟುಂಬಕ್ಕೆ ವಿಚಾರಣೆ ವೇಳೆ ವಿಶೇಷ ತನಿಖಾ ತಂಡ ದೈಹಿಕ ಕಿರುಕುಳ ನೀಡಿದೆ.
ಸಂತ್ರಸ್ತ ಯುವತಿ
ಸಂತ್ರಸ್ತ ಯುವತಿ

ಲಕ್ನೋ: ರಾಷ್ಟ್ರಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಚಿನ್ಮಯಾನಂದ ಅತ್ಯಾಚಾರ ಕೇಸ್ ನ ರೇಪ್ ಸಂತ್ರಸ್ತೆ ಕುಟುಂಬಕ್ಕೆ ವಿಚಾರಣೆ ವೇಳೆ ವಿಶೇಷ ತನಿಖಾ ತಂಡ ದೈಹಿಕ ಕಿರುಕುಳ ನೀಡಿದೆ ಎಂದು ಅಲಹಾಬಾದ್ ಹೈಕೋರ್ಟ್ ಗೆ ಸಂತ್ರಸ್ತೆಯ ಕುಟುಂಬ ಸದಸ್ಯರು 15 ಪುಟಗಳ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಜೊತೆಗೆ ತನಿಖಾ ತಂಡದ ಮೇಲೆ ತಮಗೆ ವಿಶ್ವಾಸವಿಲ್ಲ, ನ್ಯಾಯಯುತ ತನಿಖೆ ನಡೆಯುವುದಿಲ್ಲ ಎಂದು ಕುಟುಂಬಸ್ಥರು ಆತಂಕ ವ್ಯಕ್ತ ಪಡಿಸಿದ್ದಾರೆ. ಸಂತ್ರಸ್ತೆಯ ಸಹೋದರ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಎಸ್ ಐಟಿ ತಂಡ ತಮಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದೆ ಹಾಗೂ ಕುಟುಂಬದ ಎಲ್ಲಾ ಸದಸ್ಯರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡಿದೆ ಎಂದು ಆರೋಪಿಸಲಾಗಿದೆ. 

ನವೆಂಬರ್ 1 ರಂದು ಶಹಜಹಾನ್ಪುರದ ಎಸ್ಐಟಿ ಕಚೇರಿಯಲ್ಲಿ ತಾಯಿ, ತಂದೆ ಮತ್ತು ಸಹೋದರನನ್ನು ದೈಹಿಕವಾಗಿ ನಿಂದಿಸಲಾಗಿದೆ ಎಂದು ಆರೋಪಿಸಿದ ನಂತರ   ಭಯದಿಂದ ಕುಟುಂಬ ಭೂಗತವಾಗಿತ್ತು.

ರಾಷ್ಟ್ರಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಚಿನ್ಮಯಾನಂದ ಅತ್ಯಾಚಾರ ಕೇಸ್ ನ ರೇಪ್ ಸಂತ್ರಸ್ತೆ ಕುಟುಂಬಕ್ಕೆ ವಿಚಾರಣೆ ವೇಳೆ ವಿಶೇಷ ತನಿಖಾ ತಂಡ ದೈಹಿಕ ಕಿರುಕುಳ ನೀಡಿದೆ ಎಂದು ಅಲಹಾಬಾದ್ ಹೈಕೋರ್ಟ್ ಗೆ ಸಂತ್ರಸ್ತೆಯ ಕುಟುಂಬ ಸದಸ್ಯರು 15 ಪುಟಗಳ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಜೊತೆಗೆ ತನಿಖಾ ತಂಡದ ಮೇಲೆ ತಮಗೆ ವಿಶ್ವಾಸವಿಲ್ಲ, ನ್ಯಾಯಯುತ ತನಿಖೆ ನಡೆಯುವುದಿಲ್ಲ ಎಂದು ಕುಟುಂಬಸ್ಥರು ಆತಂಕ ವ್ಯಕ್ತ ಪಡಿಸಿದ್ದಾರೆ. ಸಂತ್ರಸ್ತೆಯ ಸಹೋದರ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಎಸ್ ಐಟಿ ತಂಡ ತಮಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದೆ ಹಾಗೂ ಕುಟುಂಬದ ಎಲ್ಲಾ ಸದಸ್ಯರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡಿದೆ ಎಂದು ಆರೋಪಿಸಲಾಗಿದೆ. 

ನವೆಂಬರ್ 1 ರಂದು ಶಹಜಹಾನ್ಪುರದ ಎಸ್ಐಟಿ ಕಚೇರಿಯಲ್ಲಿ ತಾಯಿ, ತಂದೆ ಮತ್ತು ಸಹೋದರನನ್ನು ದೈಹಿಕವಾಗಿ ನಿಂದಿಸಲಾಗಿದೆ ಎಂದು ಆರೋಪಿಸಿದ ನಂತರ   ಭಯದಿಂದ ಕುಟುಂಬ ಭೂಗತವಾಗಿತ್ತು..
 
ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com