ಛತ್ತೀಸ್ ಗಢ: ಎನ್ ಕೌಂಟರ್ ನಲ್ಲಿ ಸಿಆರ್ ಪಿಎಫ್ ಯೋಧ ಹುತಾತ್ಮ 

ಛತ್ತೀಸ್ ಗಢ ರಾಜ್ಯದ ಬಿಜಾಪುರ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ನಡೆದ ಎನ್ ಕೌಂಟರ್ ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ(ಸಿಆರ್ ಪಿಎಫ್)ನ ಯೋಧ ಹುತಾತ್ಮರಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯ್ ಪುರ(ಛತ್ತೀಸ್ ಗಢ): ಛತ್ತೀಸ್ ಗಢ ರಾಜ್ಯದ ಬಿಜಾಪುರ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ನಡೆದ ಎನ್ ಕೌಂಟರ್ ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ(ಸಿಆರ್ ಪಿಎಫ್)ನ ಯೋಧ ಹುತಾತ್ಮರಾಗಿದ್ದಾರೆ.


ಇಂದು ಬೆಳಗ್ಗೆ ನಕ್ಸಲೀಯರು ಇದ್ದಕ್ಕಿದ್ದಂತೆ ಗುಂಡಿನ ಚಕಮಕಿ ಆರಂಭಿಸಿದರು. ಇದಕ್ಕೆ ಪ್ರತ್ಯುತ್ತರ ನೀಡುವ ಸಂದರ್ಭದಲ್ಲಿ ಜವಾನ ಹುತಾತ್ಮರಾಗಿದ್ದಾರೆ. ಎನ್ ಕೌಂಟರ್ ನಲ್ಲಿ ಕೆಲವು ಮಾವೋವಾದಿಗಳು ಸಹ ಹತ್ಯೆಯಾಗಿರಬಹುದು ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾರೆ.


ನಕ್ಸಲರು ಅಡಗಿರುವ ಶಂಕೆಯಿಂದ ಯೋಧರು ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇಂದು ನಸುಕಿನ ಜಾವ 4 ಗಂಟೆ ಹೊತ್ತಿಗೆ ಕೇಂದ್ರ ಮೀಸಲು ಪೊಲೀಸ್ ಪಡೆಯ ಕೋಬ್ರಾ ಘಟಕದ ಸಿಬ್ಬಂದಿ ಪಮೇಡ್ ಪ್ರದೇಶದಲ್ಲಿ ಶೋಧಕಾರ್ಯ ನಡೆಸುತ್ತಿದ್ದಾಗ ನಕ್ಸಲರು ಏಕಾಏಕಿ ದಾಳಿ ಮಾಡಲು ಆರಂಭಿಸಿದರು ಎಂದು ಉಪ ಪೊಲೀಸ್ ಮಹಾ ನಿರ್ದೇಶಕ ಸುಂದರ್ ರಾಜ್ ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.


ಭದ್ರತಾ ಸಿಬ್ಬಂದಿ ಸುತ್ತುವರಿದ ತಕ್ಷಣ ನಕ್ಸಲೀಯರು ಸ್ಥಳ ಬಿಟ್ಟು ಪರಾರಿಯಾಗಿದ್ದಾರೆ. ಚಕಮಕಿಯಲ್ಲಿ ಕಾನ್ಸ್ಟೇಬಲ್ ಕಮ್ಟಾ ಪ್ರಸಾದ್ ತೀವ್ರ ಗಾಯಗೊಂಡಿದ್ದರು. ಅವರನ್ನು ನೆರೆಯ ತೆಲಂಗಾಣದ ಚೆರ್ಲಾ ಆಸ್ಪತ್ರೆಗೆ ವರ್ಗಾಯಿಸುತ್ತಿದ್ದ ವೇಳೆ ಹುತಾತ್ಮರಾದರು. 


ದಂತೇವಾಡ ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ನಕ್ಸಲೀಯರು ಹತ್ಯೆಗೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com