ಕಾಶ್ಮೀರ  ಲೆಫ್ಟಿನೆಂಟ್ ಗೌರ್ನರ್  ಮೇಲೆ ದಾಳಿಗೆ ಪಾಕ್ ಉಗ್ರರ  ಸಂಚು!

ಗಿರೀಶ್ ಚಂದ್ರ ಮುರ್ಮು ಅವರನ್ನು ಗುರಿಯಾಗಿಸಿ ದಾಳಿ ಮಾಡಲು ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ ಐ(ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್) ಸಂಚು ಮಾಡಿದೆ ಎಂದು ಬೇಹುಗಾರಿಕೆ ಮೂಲಗಳು ತಿಳಿಸಿರುವುದು ವರದಿಯಾಗಿದೆ.
ಕಾಶ್ಮೀರ  ಲೆಫ್ಟಿನೆಂಟ್ ಗೌರ್ನರ್  ಮೇಲೆ ದಾಳಿಗೆ ಪಾಕ್ ಉಗ್ರರ  ಸಂಚು!
ಕಾಶ್ಮೀರ  ಲೆಫ್ಟಿನೆಂಟ್ ಗೌರ್ನರ್  ಮೇಲೆ ದಾಳಿಗೆ ಪಾಕ್ ಉಗ್ರರ  ಸಂಚು!

ಶ್ರೀನಗರ: ಜಮ್ಮು-ಕಾಶ್ಮೀರದ ನೂತನ ಲೆಫ್ಟಿನೆಂಟ್ ಗೌರ್ನರ್ ಅಗಿ ನೇಮಕವಾಗಿರುವ ಗಿರೀಶ್ ಚಂದ್ರ ಮುರ್ಮು ಅವರನ್ನು ಗುರಿಯಾಗಿಸಿ ದಾಳಿ ಮಾಡಲು ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ ಐ(ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್) ಸಂಚು ಮಾಡಿದೆ ಎಂದು ಬೇಹುಗಾರಿಕೆ ಮೂಲಗಳು ತಿಳಿಸಿರುವುದು ವರದಿಯಾಗಿದೆ.

ವರದಿಯ ಪ್ರಕಾರ, ಉಗ್ರ ಸಂಘಟನೆಗಳಾದ ಲಷ್ಕರ್ ಎ ತಯ್ಬಾ, ಹಿಜ್ಬುಲ್ ಮುಜಾಹಿದೀನ್ ಹಾಗೂ ಐಎಸ್ ಐ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕೋಟ್ಲಿ ಪ್ರದೇಶದಲ್ಲಿ ಈ ಸಂಬಂಧ ಸಭೆ ನಡೆಸಿದ್ದು, ಜಮ್ಮು-ಕಾಶ್ಮೀರದ ನೂತನ ರಾಜ್ಯಪಾಲರನ್ನು ಗುರಿಮಾಡಿಕೊಂಡು ದಾಳಿ ನಡೆಸುವ ಹುನ್ನಾರ, ಸಂಚು ರೂಪಿಸುತ್ತಿರುವುದಾಗಿ ವಿವರಿಸಿದೆ.

ಇತ್ತೀಚೆಗೆ ಮುಗಿದ  ಜಮ್ಮು-ಕಾಶ್ಮೀರದಲ್ಲಿ ನಡೆದ ಸ್ಥಳೀಯ ಬ್ಲಾಕ್ ಡೆವಲಪ್ ಮೆಂಟ್ ಕೌನ್ಸಿಲ್ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಅಭ್ಯರ್ಥಿಗಳ ಮೇಲೂ ಉಗ್ರರು ವಕ್ರ ದೃಷ್ಟಿ ನೆಟ್ಟಿದ್ದಾರೆಂದೂ ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com