ಈರುಳ್ಳಿ ಬೆಲೆ ಏರಿಕೆ: ಎಚ್ಚೆತ್ತ ಸರಕಾರದಿಂದ ಬಿಗಿ ಕ್ರಮ: ರಾಮ್ ವಿಲಾಸ್ ಪಾಸ್ವಾನ್

ದೇಶಾದ್ಯಂತ ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದಂತೆ  ಎಚ್ಚರಗೊಂಡ ಕೇಂದ್ರ ಸರಕಾರ ಬೆಲೆ ಏರಿಕೆ ತಡೆಯಲು, ಅಕ್ರಮ ದಾಸ್ತಾನು ಮಾಡದಂತೆ ಹಲವು ಬಿಗಿ ಕ್ರಮ ಕೈಗೊಂಡಿದೆ.
ಈರುಳ್ಳಿ
ಈರುಳ್ಳಿ

ನವದೆಹಲಿ: ದೇಶಾದ್ಯಂತ ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದಂತೆ  ಎಚ್ಚರಗೊಂಡ ಕೇಂದ್ರ ಸರಕಾರ ಬೆಲೆ ಏರಿಕೆ ತಡೆಯಲು, ಅಕ್ರಮ ದಾಸ್ತಾನು ಮಾಡದಂತೆ ಹಲವು ಬಿಗಿ ಕ್ರಮ ಕೈಗೊಂಡಿದೆ.

ರಾಷ್ಟ್ರ ರಾಜಧಾನಿಯಲ್ಲಿಈರುಳ್ಳಿ ಬೆಲೆ ಕೆಜಿಗೆ 80 ರೂಪಾಯಿ  ತಲುಪುತ್ತಿದ್ದಂತೆ ಯೇ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಬುಧವಾರ ದೇಶಾದ್ಯಂತ  ಬೆಲೆ ಮತ್ತು ಪೂರೈಕೆ ಲಭ್ಯತೆಯನ್ನು ಪರಿಶೀಲಿಸಿದ್ದಾರೆ.

ಕಾರ್ಯದರ್ಶಿ ಗ್ರಾಹಕ ವ್ಯವಹಾರಗಳ ಅವಿನಾಶ್ ಕೆ ಶ್ರೀವಾಸ್ತವ ಮತ್ತು ಆಹಾರ ಇಲಾಖೆ  ಕಾರ್ಯದರ್ಶಿ  ರವಿ ಕಾಂತ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಮಾಡಿ ಬೆಲೆ  ಏರಿಕೆಯನ್ನು ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳ ಜೊತೆಗೆ ಬೆಲೆಗಳ ಹೆಚ್ಚಳಕ್ಕೆ ಕಾರಣಗಳನ್ನು ಹುಡುಕಿದೆ.

ಸಭೆಯ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಚಿವ ಪಾಸ್ವಾನ್, ಬೆಲೆ ಏರಿಕೆ ತಡೆಯಲು  56,700 ಟನ್ ಈರುಳ್ಳಿಯ ಕಾಪು ದಸ್ತಾನು ಮಾಡಲು ಮುಂದಾಗಿದೆ ಜೊತೆಗೆ 1,525 ಟನ್ ಈರುಳ್ಳಿ ನಫೆಡ್ ನಲ್ಲಿ  ಲಭ್ಯವಿದೆ .  ಈರುಳ್ಳಿ ರಫ್ತು ಮಾಡುವುದನ್ನು ನಿಷೇಧಿಸುವ ಮೂಲಕ ಬೆಲೆ ಏರಿಕೆ ತಡೆಯಲು ಕೇಂದ್ರ ಸರ್ಕಾರ ಎಲ್ಲ ಕ್ರಮ ತೆಗೆದುಕೊಂಡಿದೆ ಎಂದರು.

ದೇಶೀಯ ಬಳಕೆಗಾಗಿ ದಾಸ್ತಾನು  ಉಳಿಸಿಕೊಂಡು  ಮತ್ತು ಮಾರುಕಟ್ಟೆಗೆ ದಾಸ್ತಾನು ಪೂರೈಕೆ   ಖಚಿತಪಡಿಸಿಕೊಳ್ಳಲು, ಚಿಲ್ಲರೆ ವ್ಯಾಪಾರಿಗಳಿಗೆ 10 ಮೆ.ಟನ್ ಮತ್ತು ಸಗಟು ವ್ಯಾಪಾರಿಗಳಿಗೆ 50 ಮೆ.ಟನ್ ದಾಸ್ತಾನು  ಮಿತಿ ಹಾಕುವುದಾಗಿ ಹೇಳಿದರು.

ಬೆಲೆ ಏರಿಕೆಯ ಕಾರಣ  ವಿವರಿಸಿದ ಅವರು, ಜನರಿಗೆ ಹೊರೆಯಾಗದಂತೆ ಎಲ್ಲ  ಕ್ರಮಗಳನ್ನು ಕೈಗೊಳ್ಳಲಾಗಿದೆ ಆದರೆ ಈರುಳ್ಳಿ ಉತ್ಪಾದನೆಯಲ್ಲಿ ಶೇಕಡಾ 30-40 ರಷ್ಟು ಕಡಿಮೆಯಾಗಿದೆ  ಕೆಲವು ರಾಜ್ಯದಲ್ಲಿ ವಿಪರೀತ ಮಳೆಯಿಂದಾಗಿ ಸರಬರಾಜಿಗೆ  ಬಹಳ ಅಡ್ಡಿಯಾಗಿದೆ ಎಂದು ಹೇಳಿದರು. ದೆಹಲಿ ಮಂಡಿಗೆ ದಾಸ್ತಾನು ಪೂರೈಕೆ   ಹಿಂದಿನ ವರ್ಷಗಳಿಗಿಂತ  25 ಶೇಕಡಾ ಕಡಿಮೆಯಾಗಿದೆ.

ಮುಂಗಾರು ಆಗಮನ ಮತ್ತು ಬಿತ್ತನೆ ವಿಳಂಬ ಮತ್ತು ಕೆಲವೆಡೆ ಸುರಿದ ಮಳೆಯ ಕಾರಣ ವ್ಯಾಪಾರಿಗಳು ದಳ್ಳಾಳಿಗಳು  ಕಾಳಸಂತೆಯ  ಲಾಭ ಮಾಕೊಳ್ಳದಂತೆ  ಕ್ರಮ ಕೈಗೊಳ್ಳಲಾಗಿದೆಎಂದು ಅವರು ಹೇಳಿದರು.

ಅಕಾಲಿಕ ಮಳೆ ಮತ್ತು ಎರಡು ಚಂಡಮಾರುತಗಳು ಒಟ್ಟಾರೆ ಉತ್ಪಾದನೆಯ ಮೇಲೆ ಪರಿಣಾಮ ಬೀರಿದ್ದು, ಮತ್ತು ವಿಶೇಷವಾಗಿ ಮಹಾರಾಷ್ಟ್ರದಿಂದ ಈರುಳ್ಳಿ ಸಾಗಣೆಗೆ ದೊಡ್ಡ ಅಡ್ಡಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com