ಗಾಂಧಿ ಕುಟುಂಬದ ಎಸ್ ಪಿಜಿ ಭದ್ರತೆ ಕಳಚಿದ ಕೇಂದ್ರ: ಝಡ್ ಪ್ಲಸ್ ಗೆ ಇಳಿಕೆ!

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ , ಅವರ ಪುತ್ರ ರಾಹುಲ್ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲಾಗಿದ್ದ  ವಿಶೇಷ ಭದ್ರತಾ ವ್ಯವಸ್ಥೆ ( ಎಸ್ ಪಿಜಿ) ಯನ್ನು ಕೇಂದ್ರ ಸರ್ಕಾರ  ವಾಪಸ್ ಪಡೆದುಕೊಂಡಿದೆ. 
ಗಾಂಧಿ ಕುಟುಂಬ
ಗಾಂಧಿ ಕುಟುಂಬ

ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ , ಅವರ ಪುತ್ರ ರಾಹುಲ್ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲಾಗಿದ್ದ  ವಿಶೇಷ ಭದ್ರತಾ ವ್ಯವಸ್ಥೆ ( ಎಸ್ ಪಿಜಿ) ಯನ್ನು ಕೇಂದ್ರ ಸರ್ಕಾರ  ವಾಪಸ್ ಪಡೆದುಕೊಂಡಿದೆ. 

 ಇದೀಗ ಗಾಂಧಿ ಕುಟುಂಬಕ್ಕೆ ಅಖಿಲ ಭಾರತ ಆಧಾರದ ಮೇಲೆ ಸಿಆರ್ ಪಿಎಫ್ ನಿಂದ ಝಡ್ ಪ್ಲಸ್ ಭದ್ರತೆಯನ್ನು ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

1984ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಅಂಗರಕ್ಷಕರೇ ಗುಂಡು ಹಾರಿಸಿ ಹತ್ಯೆಗೈದಿದ್ದರು. ಆ ಬಳಿಕ 1985ರಲ್ಲಿ ಹಾಲಿ ಪ್ರಧಾನಿಗೆ ಮತ್ತು ಮಾಜಿ ಪ್ರಧಾನ ಮಂತ್ರಿಗಳಿಗೆ ಮತ್ತು ಅವರ ನಿಕಟ ಕುಟುಂಬಕ್ಕೆ ಎಸ್ ಪಿಜಿ ಭದ್ರತೆ ಕೊಡುವ ವ್ಯವಸ್ಥೆ ಜಾರಿಯಾಗಿತ್ತು.

 ನಂತರ ತಮಿಳುನಾಡಿನ ಶ್ರೀಪೆರುಂಬುದೂರಿನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಎಲ್ ಟಿಟಿಇ ಆತ್ಮಹತ್ಯಾ ಬಾಂಬ್ ದಾಳಿ ಮೂಲಕ ಹತ್ಯೆಗೈದ ನಂತರ ಎಸ್ ಪಿಜಿ ಭದ್ರತೆಯಲ್ಲಿ ಮತ್ತಷ್ಟು ಬದಲಾವಣೆ ಮಾಡಲಾಗಿತ್ತು.

ಇತ್ತೀಚಿಗೆ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರಿಗೆ ನೀಡಲಾಗಿದ್ದ ಎಸ್ ಪಿಜಿ ಭದ್ರತೆಯನ್ನು ಸಹ ಕೇಂದ್ರ ಸರ್ಕಾರ ವಾಪಾಸ್ ಪಡೆದುಕೊಂಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com