ಲಿಂಗಪರಿವರ್ತಿತ ಸಮುದಾಯದವರಿಗೆ ಆಶ್ರಯ ಮನೆ ನಿರ್ಮಾಣಕ್ಕೆ ಮುಂದಾದ ಕೇಂದ್ರ

ಲಿಂಗಪರಿವರ್ತಿತ ಸಮುದಾಯಕ್ಕೆ ಆಶ್ರಯ ಮನೆಗಳ ಕೊರತೆ ಇರುವುದನ್ನು ಗಮನಿಸಿದ ಕೇಂದ್ರ ಸರ್ಕಾರ ಲಿಂಗಪರಿವರ್ತಿತ ಸಮುದಾಯಕ್ಕಾಗಿ ವಿಶೇಷ ಆಶ್ರಯ ಮನೆಗಳನ್ನು ತೆರೆಯುವ ಪ್ರಸ್ತಾವನೆ ಹೊಂದಿದೆ.

Published: 08th November 2019 03:10 PM  |   Last Updated: 08th November 2019 03:10 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : The New Indian Express

ನವದೆಹಲಿ: ಲಿಂಗಪರಿವರ್ತಿತ ಸಮುದಾಯಕ್ಕೆ ಆಶ್ರಯ ಮನೆಗಳ ಕೊರತೆ ಇರುವುದನ್ನು ಗಮನಿಸಿದ ಕೇಂದ್ರ ಸರ್ಕಾರ ಲಿಂಗಪರಿವರ್ತಿತ ಸಮುದಾಯಕ್ಕಾಗಿ ವಿಶೇಷ ಆಶ್ರಯ ಮನೆಗಳನ್ನು ತೆರೆಯುವ ಪ್ರಸ್ತಾವನೆ ಹೊಂದಿದೆ.

ಕನಿಷ್ಠ ಒಂದು ವರ್ಷದವರೆಗೆ ಪ್ರಾಯೋಗಿಕ ಆಧಾರದ ಮೇಲೆ ನಡೆಯುವ ಈ ಯೋಜನೆಯನ್ನು ಮೂರರಿಂದ ಐದು ರಾಜ್ಯಗಳಲ್ಲಿ ಕೈಗೊಳ್ಳಲಾಗುವುದು. ಪ್ರತಿ ಆಶ್ರಯ ಮನೆ 25 ನಿವಾಸಿಗಳಿಗೆ ಅವಕಾಶ ಕಲ್ಪಿಸುತ್ತದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಶೀಘ್ರದಲ್ಲೇ (ಎಂಎಸ್ ಜೆಇ) ಆಸಕ್ತಿ ಹೊಂದಿರುವ ಎನ್ಜಿಒಗಳಿಗೆ ಆಶ್ರಯ ಮನೆಗಳನ್ನು ನಡೆಸಲು ಕೇಳಿದೆ. ಮೊದಲಿಗೆ ಇದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಾರಂಭವಾಗಲಿದೆ.

"ಆಶ್ರಯ ಮನೆಗಳು ಮನೆ ತೊರೆದು ಬೀದಿಪಾಲಾಗಿರುವವರ ಆಶ್ರಯಗಳಾಗಿರಲಿದೆ.ಲಿಂಗಪರಿವರ್ತಿತ ಸಮುದಾಯದ ಜನರನ್ನು ಅವರ ಕುಟುಂಬದವರು ತ್ಯಜಿಸಿರುವುದು ಸಾಮಾನ್ಯ. ಹಾಗಾಗಿ ಅವರು ಅಪಾಯಕ್ಕೆ ಸಿಕ್ಕುವ ಸಂಭವವಿದೆ.  ಅಲ್ಲದೆ ಭಿಕ್ಷಾಟನೆಗಿಳಿಯುವ  ಪ್ರಕರಣಗಳನ್ನು ಕಾಣುತ್ತೇವೆ. ಆದರೆ ಇಂತಹಾ ಆಶ್ರಯ ಮನೆಗಳು  ಅವರಿಗೆ ಮೂಲಸೌಕರ್ಯ ಒದಗಿಸುವುದರೊಡನೆ ರಕ್ಷಣೆ ಕಲ್ಪಿಸುತ್ತದೆ. "  ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಲಿಂಗಪರಿವರ್ತಿತ ಜನರಿಗೆ  ತಮ್ಮ ಜೀವನೋಪಾಯಕ್ಕಾಗಿ  ನಡೆಸಲು ಅನುಕೂಲವಾಗುವ ಹಲವು ಉದ್ಯೋಗಗಳಿಗೆ ಸೇರಿಕೊಳ್ಲಲು ಅದಕ್ಕೆ ತಕ್ಕ ಕೌಶಲ್ಯ ತರಬೇತಿ ಕಾರ್ಯಕ್ರಮಗಳಿಗೆ ಪ್ರವೇಶ ಒದಗಿಸಲಾಗುವುದು.ಆಶ್ರಯ ಮನೆಗಳ ನಿವಾಸಿಗಳಿಗೆ ಕೌಶಲ್ಯವನ್ನು ನೀಡುವ ಸಲುವಾಗಿ ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆ ಮತ್ತು ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಚಿವಾಲಯ ಯೋಜಿಸುತ್ತಿದೆ., ಕೋರ್ಸ್‌ನ ಕೊನೆಯಲ್ಲಿ ಲಿಂಗಪರಿವರ್ತಿತ ಸಮುದಾಯದ ಜನರಿಗೆ ಸರ್ಕಾರಿ ಕಚೇರಿಗಳಿಂದ ಪ್ರಾರಂಭಿಸಿ ಎಲ್ಲಾ ಸಂಘಟನೆ, ಸಂಸ್ಥೆಗಳಲ್ಲಿ ಉದ್ಯೋಗ ಅವಕಾಶ ನೀಡುವುದು ಇದರ ಉದ್ದೇಶವಾಗಿದೆ.

ಆದರೆ ಇದೇ ವೇಳೆ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯೋಗ ನೀಡಿಕೆಯು ಅಷ್ಟೇನೂ ಸುಲಭವಾದ ಕೆಲಸವಲ್ಲ ಎಂದೂ ಅಧಿಕಾರಿಗಳು ಹೇಳಿದ್ದಾರೆ. "ಸಮುದಾಯದ ಜನರು ಕೋರ್ಸ್ ಮುಗಿದ ನಂತರ ಜೀವನೋಪಾಯದ ಕಾರ್ಯಸಾಧ್ಯತೆಯನ್ನು ಕಂಡುಕೊಳ್ಲಬೇಕಿದೆ. ಅವರಿಗೆ ಉದ್ಯೋಗವನ್ನು ಹುಡುಕುವುದು ಮತ್ತೊಂದು ಸವಾಲಾಗಿದೆ. ಕೌಶಲ್ಯಗಳನ್ನು ನೀಡುವುದರ ಜೊತೆಗೆ, ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯ, ಇದರಿಂದಾಗಿ ಲಿಂಗಪರಿವರ್ತಿತ ಜನರು ಸಾಮಾಜಿಕ ಕಳಂಕ ಮತ್ತು ತಾರತಮ್ಯವನ್ನು ಎದುರಿಸುವುದಿಲ್ಲ ”ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp