ಮೋದಿಯವರ 'ತುಘಲಕಿ ಪ್ರಮಾದ'ವನ್ನು ರಾಷ್ಟ್ರವೆಂದೂ ಮರೆಯಲ್ಲ: ಅಪನಗದೀಕರಣ ಕುರಿತು ಸೋನಿಯಾ ವಾಗ್ದಾಳಿ

120 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡ ಮತ್ತು ಭಾರತದ ಮಧ್ಯಮ ಮತ್ತು ಸಣ್ಣ ಉದ್ಯಮಗಳಿಗೆ ಕಂಟಕವಾದ "ಅಪನಗದೀಕರಣ" ಮೋದಿ ಸರ್ಕಾರ "ತುಘಲಕಿ ಪ್ರಮಾದ" ಆಗಿದ್ದು ದೇಶ ಅದನ್ನೆಂದಿಗೂ ಮರೆಯುವುದಿಲ್ಲ, ಕ್ಷಮಿಸುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ನವದೆಹಲಿ: 120 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡ ಮತ್ತು ಭಾರತದ ಮಧ್ಯಮ ಮತ್ತು ಸಣ್ಣ ಉದ್ಯಮಗಳಿಗೆ ಕಂಟಕವಾದ "ಅಪನಗದೀಕರಣ" ಮೋದಿ ಸರ್ಕಾರ "ತುಘಲಕಿ ಪ್ರಮಾದ" ಆಗಿದ್ದು ದೇಶ ಅದನ್ನೆಂದಿಗೂ ಮರೆಯುವುದಿಲ್ಲ, ಕ್ಷಮಿಸುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಅಪನಗದೀಕರಣದ ವೈಫಲ್ಯ ಬಗೆಗೆ ಮೋದಿ ಸರ್ಕಾರ ಹಾಗೂ ಅವರ ಸಚಿವ ಸಹೋದ್ಯೋಗಿಗಳು ಇಂದೂ ತಾವು ಜವಾಬ್ದಾರಿ ತೆಗೆದುಕೊಂಡಿಲ್ಲ. "ಈ ಹಾಸ್ಯಾಸ್ಪದ ಮತ್ತು ದೂರದೃಷ್ಟಿ ಕೊರತೆಯ ನಿರ್ಧಾರದ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಇಂದಿಗೂ ಹೊತ್ತುಕೊಳ್ಳುತ್ತಿಲ್ಲ, ಮೋದಿ ಸರ್ಕಾರ ತನ್ನ ವೈಫಲ್ಯತೆಯನ್ನು ಮುಚ್ಚಿಟ್ಟುಕೊಳ್ಲಲು, ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ರಾಷ್ಟ್ರದ ಜನತೆ ಅದನ್ನು ಮರೆಯುವುದಿಲ್ಲ, ಅವರನ್ನು ಕ್ಷಮಿಸುವುದಿಲ್ಲ"ಸೋನಿಯಾ ಹೇಳಿದ್ದಾರೆ.

"ಪ್ರಧಾನಿ ಮತ್ತು ಅವರ ಸಹೋದ್ಯೋಗಿಗಳು 2017ರಿಂದ ಅಪನಗದೀಕರಣದ ಬಗೆಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ,  ರಾಷ್ಟ್ರವು ದನ್ನು ಮರೆಯುತ್ತದೆ ಎಂಬ ಆಶಯ ಅವರಿದ್ದಿದೆ. ಆದರೆ ದುರದೃಷ್ಟವಶಾತ್ ಕಾಂಗ್ರೆಸ್ ರಾಷ್ಟ್ರದ ಜನತೆ ಅವರನ್ನು ಕ್ಷಮಿಸುವುದಿಲ್ಲ ನಮಗೂ ರಾಷ್ಟ್ರೀಯ ಹಿತಾಸಕ್ತಿ ಮುಖ್ಯವಾಗುತ್ತದೆ ಆದರೆ ಜೆಪಿಗಿಂತ ಭಿನ್ನವಾಗಿ ನಾವು ಸೇವೆ ಸಲ್ಲಿಸುತ್ತೇವೆ " ಅವರು ಹೇಳಿದ್ದಾರೆ.

ಮೂರು ವರ್ಷಗಳ ನಂತರ, ಬಿಜೆಪಿಯ "ಕೆಟ್ಟ ಕಲ್ಪನೆಯ ಆಡಳಿತ ಮಾದರಿ" ಗೆ ಅಪನಗದೀಕರಣವು ಅತ್ಯಂತ ಸೂಕ್ತವಾದ ಒಂದು ರೂಪಕವಾಗಿದೆ ಎಂದು ಅವರು ಹೇಳಿದರು."ಇದು ಸುಳ್ಳು ಪ್ರಚಾರದಿಂದ ಉತ್ತೇಜಿಸಲ್ಪಟ್ಟ ಒಂದು ಪೂರ್ವಭಾವಿ ಕ್ರಮವಾಗಿದ್ದು, ಇದು ಮುಗ್ಧ ಮತ್ತು ನಂಬಿಕಸ್ಥ ದೇಶವಾಸಿಗಳಿಗೆ ಹೇಳಲಾಗದಷ್ಟು ಹಾನಿಯನ್ನುಂಟುಮಾಡಿತುಸಂಕ್ಷಿಪ್ತವಾಗಿ ಹೇಳುವುದಾದರೆ, ಮೋದಿ ಸರ್ಕಾರದ ಆಡಳಿತದ ವಿಧಾನದ ಸಾರಾಂಶವಾಗಿದೆ.

"ಆದರೂ, ತನ್ನನ್ನು ತಾನು ಹೊಣೆಗಾರನನ್ನಾಗಿ ಮಾಡುವ  ಇಂತಹಾ ಕ್ರಮದ ಕುರಿತು ಮೋದಿ ಹಾಗೂ ಅವರ ಸಹೋದ್ಯೋಗಿಗಳು ಎಲ್ಲಾ ವಾಕ್ಚಾತುರ್ಯಗಳನ್ನು ಬಳಸಿದರೂ  ಎಂದಿಗೂ ಜವಾಬ್ದಾರಿಯನ್ನು ತೆಗೆದುಕೊಳ್ಳಲಿಲ್ಲ - ಅಥವಾ ಒಪ್ಪಿಕೊಂಡಿಲ್ಲ - ನೂರ ಇಪ್ಪತ್ತು ಜೀವಗಳನ್ನು (ಅಂದಾಜಿನ ಪ್ರಕಾರ) ಬಲಿ ತೆಗೆದುಕೊಂಡ ಈ ಕ್ರಮ  ಭಾರತದ ಮಧ್ಯಮ ಮತ್ತು ಸಣ್ಣ ಉದ್ಯಮಗಳಿಗೆ ಕಂಟಕವಾಗಿತ್ತು. ಭಾರತದ ರೈತರ ಜೀವನೋಪಾಯವನ್ನು ಕಸಿದುಕೊಂಡಿತು. ಲಕ್ಷಾಂತರ ಕುಟುಂಬಗಳನ್ನು ಬಡತನದ ಅಂಚಿಗೆ ಇಳಿಸಿತು." ಸೋನಿಯಾ ಗಾಂಧಿ ವಿವರಿಸಿದರು.

ನವೆಂಬರ್ 8, 2016 ರಂದು ಪ್ರಧಾನಿ ಮೋದಿ ಅವರು 500 ಮತ್ತು 1,000 ರೂ. ಕರೆನ್ಸಿ ನೋಟುಗಳನ್ನು ನಿಷೇಧಿಸಿ "ಅಪನಗದೀಕರಣ" ಆದೇಶ ಹೊರಡಿಸಿದರು. ಕಪ್ಪು ಹಣವನ್ನು ಬಯಲಿಗೆ ತರುವುದಕ್ಕಾಗಿ,  ನಕಲಿ ಕರೆನ್ಸಿಯನ್ನು ತೊಡೆದು ಹಾಕುವುದಕ್ಕಾಗಿ ಯೋತ್ಪಾದನೆ ಮತ್ತು ನಕ್ಸಲಿಸಂ ಅನ್ನು ಕಿತ್ತೊಗೆಯುವುದಕ್ಕಾಗಿ ಈ ಉಪಕ್ರಮ ಎಮ್ದು ಅವರು ಭರವಸೆ ಇತ್ತರು.

"ಮೂರು ವರ್ಷಗಳ ನಂತರ, ಪ್ರಧಾನಿ ಮೋದಿ ಈ ಎಲ್ಲ ಅಂಶಗಳಲ್ಲಿ ಅದ್ಭುತವಾಗಿ ವಿಫಲರಾಗಿದ್ದಾರೆ" ಅಪಮೌಲ್ಯಗೊಂಡ ಎಲ್ಲಾ 500 ಮತ್ತು 1000 ರೂ. ಕರೆನ್ಸಿ ನೋಟುಗಳಲ್ಲಿ 99.3 ಶೇಕಡಾವನ್ನು  ಮರುಠೇವಣಿ ಮಾಡಲಾಗಿದೆ ಎಂದು  ಆರ್‌ಬಿಐ ಖಚಿತಪಡಿಸಿದೆ ಎಂದು ಕಾಂಗ್ರೆಸ್ ಮುಖ್ಯಸ್ಥರು ತಿಳಿಸಿದ್ದಾರೆ. ನಕಲಿ ನೋಟುಗಳು  ಚಲಾವಣೆಯಲ್ಲಿರುವ ನೋಟುಗಳ ಸಣ್ಣ ಮತ್ತು ನಗಣ್ಯ ಶೇಕಡಾವಾರು  ಪ್ರಮಾಣವಾಗಿದೆ"ಸರ್ಕಾರದ ಸ್ವಂತ ಪ್ರಕಟಿತ ಮಾಹಿತಿಯ ಪ್ರಕಾರ ಭಯೋತ್ಪಾದನೆ ಮತ್ತು ನಕ್ಸಲೈಟ್ ಚಟುವಟಿಕೆಗಳು ಅಪನಗದೀಕರಣದ ನಂತರ ಹೆಚ್ಚಳವನ್ನು ಕಂಡಿದೆ ಮತ್ತು ಚಲಾವಣೆಯಲ್ಲಿರುವ ಕರೆನ್ಸಿಯು ಅಪನಗದೀಕರಣದ ಪೂರ್ವ ಮಟ್ಟಕ್ಕಿಂತ 22 ಶೇಕಡಾ ಹೆಚ್ಚಳವನ್ನು ಕಂಡಿದೆ ಎಂದು ಸೋನಿಯಾ ಹೇಳಿದ್ದಾರೆ.

"ಪ್ರತಿಯೊಬ್ಬ ಭಾರತೀಯನು ಕೇಳುವ ಸರಳ ಪ್ರಶ್ನೆಯೆಂದರೆ -ಅಪನಗದೀಕರಣದಿಂದ ಏನನ್ನು ಸಾಧಿಸಲಾಗಿದೆ? ಆರ್ಥಿಕತೆಯ ಒಂದು ಕೋಟಿ ಉದ್ಯೋಗ ನಷ್ಟ, ಜಿಡಿಪಿ ಬೆಳವಣಿಗೆಯಲ್ಲಿ ಕುಂಠಿತ,  ಭಾರತದ ಅಂತರರಾಷ್ಟ್ರೀಯ ರೇಟಿಂಗ್ 'ಸ್ಥಿರ'ದಿಂದ' ನಕಾರಾತ್ಮಕ'ಕ್ಕೆ  ಬದಲಾವಣೆಗೆ ಇದು ಕಾರಣವಾಗಿದೆ. ಇಂದು ಮೋದಿ ಸರ್ಕಾರದ ಈ ಕ್ರಮವನ್ನು ಅರ್ಥಶಾಸ್ತ್ರಜ್ಞರು ಭೀಕರ ಪ್ರಮಾದವೆಂದು ವ್ಯಾಪಕವಾಗಿ ಅಂಗೀಕರಿಸಿದ್ದಾರೆ ಮತ್ತು ಪ್ರಪಂಚದಾದ್ಯಂತ 'ಸರ್ಕಾರಗಳು ಏನು ಮಾಡಬಾರದು' ಎಂಬ ಎಚ್ಚರಿಕೆಯ ಕಥೆಯಾಗಿ ಇದನ್ನು ಕಲಿಸಲಾಗುತ್ತಿದೆ "ಎಂದು ಅವರು ಹೇಳಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com