ರಾಮನ ಪಾಲಾದ ಅಯೋಧ್ಯೆ: ಮಂದಿರ ನಿರ್ಮಾಣಕ್ಕೆ 'ಸುಪ್ರೀಂ' ವಿಧಿಸಿದ ಷರತ್ತುಗಳೇನು? 

ಸಾಕಷ್ಟು ಹೋರಾಟದ ಬಳಿಕ ವಿವಾದಿತ ಅಯೋಧ್ಯೆ ಭೂಮಿ ಕೊನೆಗೂ ರಾಮನ ಪಾಲಾಗಿದ್ದು, ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಕೆಲ ಷರತ್ತುಗಳನ್ನು ವಿಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಸಾಕಷ್ಟು ಹೋರಾಟದ ಬಳಿಕ ವಿವಾದಿತ ಅಯೋಧ್ಯೆ ಭೂಮಿ ಕೊನೆಗೂ ರಾಮನ ಪಾಲಾಗಿದ್ದು, ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಕೆಲ ಷರತ್ತುಗಳನ್ನು ವಿಧಿಸಿದೆ. 

ಕೇವಲ ನಂಬಿಕೆಗಳಿಂದಷ್ಟೇ ಭೂಮಿಯ ಹಕ್ಕುದಾರಿಕೆ ನೀಡಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂಕೋರ್ಟ್, ಹಿಂದೂಗಳಿಗೆ ಕೆಲ ಷರತ್ತುಗಳನ್ನು ವಿಧಿಸಿ ಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದೆ. 

ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿರುವ ನ್ಯಾಯಾಲಯ, ಮುಸ್ಲಿಂ ಸಮುದಾಯಕ್ಕೆ ಬದಲಿ ಜಾಗ ನೀಡಲು ಆದೇಶಿಸಿದೆ. 

ವಿವಾದಿತ ಅಯೋಧಅಯೆ ಜಾಗವನ್ನು ರಾಮಲಲ್ಲಾಗೆ ನೀಡಿರುವ ನ್ಯಾಯಾಲಯ, ರಾಮಲಲ್ಲಾಗೆ ಮಂದಿರ ನಿರ್ಮಾಣದ ಹಕ್ಕಿಲ್ಲ ಎಂದು ಹೇಳಿದೆ. 

ವಿವಾದಿತ ಜಾಗವನ್ನು ಕೇಂದ್ರ ಸರ್ಕಾರಕ್ಕೆ ಒಪ್ಪಿಸಬೇಕು. ಕೇಂದ್ರ ಸರ್ಕಾರ ಮೂರು ತಿಂಗಳ ಒಳಗೆ ಟ್ರಸ್ಟ್ ರಚಿಸಬೇಕು. ಬಳಿಕ ಈ ಪ್ರದೇಶ ಟ್ರಸ್ಟ್'ಗೆ ಹಸ್ತಾಂತರವಾಗಲಿದೆ. ಟ್ರಸ್ಟ್ ಮೇಲುಸ್ತುವಾರಿಯಲ್ಲೇ ಮಂದಿರ ನಿರ್ಮಾಣವಾಗಬೇಕು. ಇದರಲ್ಲಿ ಬೇರೆ ಯಾರೂ ತಲೆ ಹಾಕುವಂತಿಲ್ಲ ಎಂತು ತಿಳಿಸಿದೆ. 

ಜಾಗದ ಹಕ್ಕುದಾರಿಕೆಗೆ ಅರ್ಜಿ ಹಾಕಿದ್ದ ಸುನ್ನಿ ವಕ್ಫ್ ಬೋರ್ಡ್'ಗೆ 5 ಎಕರೆ ಪರ್ಯಾಯ ಜಾಗ ನೀಡಬೇಕು. ಇಲ್ಲಿ ಮಸೀದಿ ನಿರ್ಮಾಣ ಮಾಡಬೇಕೋ ಅಥವಾ ಬೇಡವೋ ಎಂಬುದು ಸುನ್ನು ವಕ್ಫ್ ಬೋರ್ಡ್'ಗೆ ಬಿಟ್ಟಿದ್ದು, ಪರ್ಯಾಯ ಜಾಗವನ್ನು ಸುನ್ನಿ ಅವಶ್ಯಕತೆಗೂ ಬಳಸಿಕೊಳ್ಳಬಹುದು ಎಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com