ಚಾರಿತ್ರಿಕ ತೀರ್ಪು: ನ್ಯಾಯಾಲಯ ವೈವಿಧ್ಯತೆಯಲ್ಲಿ ಏಕತೆಯ ಸಂದೇಶ ನೀಡಿದೆ- ಹಿಂದೂ ಮಹಾಸಭಾ ವಕೀಲರು 

ಹಲವು ದಶಕಗಳಿಂದ ಇತ್ಯರ್ಥಗೊಳದೆ ಕಗ್ಗಂಟಾಗಿ ಉಳಿದಿದ್ದ ರಾಮ ಜನ್ಮ ಭೂಮಿ ಹಾಗೂ ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ಚಾರಿತ್ರಿಕ ತೀರ್ಪು ನೀಡಿದೆ ಎಂದು  ಹಿಂದೂ ಮಹಾಸಭಾ ವಕೀಲ ವರುಣ್ ಕುಮಾರ್ ಸಿನ್ಹಾ ಹೇಳಿದ್ದಾರೆ.
ಹಿಂದೂ ಮಹಾಸಭಾ ವಕೀಲರು
ಹಿಂದೂ ಮಹಾಸಭಾ ವಕೀಲರು

ನವದೆಹಲಿ: ಹಲವು ದಶಕಗಳಿಂದ ಇತ್ಯರ್ಥಗೊಳದೆ ಕಗ್ಗಂಟಾಗಿ ಉಳಿದಿದ್ದ ರಾಮ ಜನ್ಮ ಭೂಮಿ ಹಾಗೂ ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ಚಾರಿತ್ರಿಕ ತೀರ್ಪು ನೀಡಿದೆ ಎಂದು  ಹಿಂದೂ ಮಹಾಸಭಾ ವಕೀಲ ವರುಣ್ ಕುಮಾರ್ ಸಿನ್ಹಾ ಹೇಳಿದ್ದಾರೆ.

ತೀರ್ಪಿನ ಬಳಿಕ ಸುಪ್ರೀಂಕೋರ್ಟ್ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯ ವೈವಿಧ್ಯತೆಯಲ್ಲಿ ಏಕತೆಯ ಸಂದೇಶವನ್ನು ಸಾರಿದೆ ಎಂದು ಹೇಳಿದರು. ಇದೇ ವೇಳೆ ಅಲ್ಲಿ  ಸೇರಿದ ಕೆಲ ವಕೀಲರ ಗುಂಪಿನಿಂದ  ಜೈ ಶ್ರೀ ರಾಮ್ ಘೋಷಣೆ ಮೊಳಗಿಸಲಾಯಿತು. ನಂತರ ಇತರ ವಕೀಲರು ಹಾಗೆ ಮಾಡದಂತೆ ತಡೆದರು.
 
ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಮಹಾಸಭಾದ ಮತ್ತೋರ್ವ ವಕೀಲ, ವಿಷ್ಣು ಶಂಕರ್ ಜೈನ್, ಅಯೋಧ್ಯೆಯಲ್ಲಿನ ಪ್ರಮುಖ ಸ್ಥಳದಲ್ಲಿ ಪರ್ಯಾಯವಾಗಿ ಮುಸ್ಲಿಂರಿಗೆ 5 ಎಕರೆ ಜಮೀನು ನೀಡುವಂತೆ ಕೋರ್ಟ್ ಆದೇಶಿಸಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com