ಅಯೋಧ್ಯೆ ತೀರ್ಪು:'ಮೌನ'ಕ್ಕೆ ಶರಣಾದ ಟಿಎಂಸಿ 

ಅಯೋಧ್ಯೆ ವಿವಾದ ಸಂಬಂಧ ಶನಿವಾರ ಸುಪ್ರೀಂ ಕೋರ್ಟ್ ತೀರ್ಪು ಹೊರಬಂದಿದ್ದು ಈ ಬಗೆಗೆ ಕಾಂಗ್ರೆಸ್, ಬಿಜೆಪಿ, ಸಿಪಿಐ೯ಎಂ) ಸೇರಿ ರಾಷ್ಟ್ರದ ಪ್ರಮುಖ ಪಕ್ಷಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರೂ ಇದುವರೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಾತ್ರ ಯಾವ ಪ್ರತಿಕ್ರಿಯೆ ನೀಡದೆ ಮೌನ ಕಾಯ್ದುಕೊಂಡಿದೆ. 
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಅಯೋಧ್ಯೆ ವಿವಾದ ಸಂಬಂಧ ಶನಿವಾರ ಸುಪ್ರೀಂ ಕೋರ್ಟ್ ತೀರ್ಪು ಹೊರಬಂದಿದ್ದು ಈ ಬಗೆಗೆ ಕಾಂಗ್ರೆಸ್, ಬಿಜೆಪಿ, ಸಿಪಿಐ೯ಎಂ) ಸೇರಿ ರಾಷ್ಟ್ರದ ಪ್ರಮುಖ ಪಕ್ಷಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರೂ ಇದುವರೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಾತ್ರ ಯಾವ ಪ್ರತಿಕ್ರಿಯೆ ನೀಡದೆ ಮೌನ ಕಾಯ್ದುಕೊಂಡಿದೆ. ಪಕ್ಷದ ಮುಖ್ಯಸ್ಥ ಮಮತಾ ಬ್ಯಾನರ್ಜಿ ಸೇರಿದಂತೆ ಆಡಳಿತಾರೂಢ  ಟಿಎಂಸಿಯ ಒಬ್ಬ ನಾಯಕರೂ ಸಹ ಈ ತೀರ್ಪಿನ ಬಗ್ಗೆ ಸಂಜೆ 5 ಗಂಟೆಯವರೆಗೂ ಯಾವ ಪ್ರತಿಕ್ರಿಯೆ ನೀಡಿಲ್ಲ.

ತೀರ್ಪಿನ ನಂತರ ಪಶ್ಚಿಮ ಬಂಗಾಳ ರಾಜ್ಯಾದ್ಯಂತ ಪರಿಸ್ಥಿತಿ ಶಾಂತಿಯುತವಾಗಿದೆ. ರಾಜ್ಯದ ಯಾವುದೇ ಭಾಗದಲ್ಲಿಯೂ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಟಿಎಂಸಿ ಮೂಲಗಳ ಪ್ರಕಾರ, ಪಕ್ಷದ ಉನ್ನತ ನಾಯಕರಿಂದ "ಕಟ್ಟುನಿಟ್ಟಿನ ಸೂಚನೆ" ಬಂದಿದ್ದು, ತೀರ್ಪಿನ ಬಗ್ಗೆ "ಒಂದೇ ಒಂದು ಮಾತನ್ನು" ಆಡಬಾರದೆಂದು ಸೂಚಿಸಿದೆ

"ಈ ವಿಷಯದ ಬಗ್ಗೆ ಮಾತನಾಡಬಾರದೆಂದು ನಮಗೆ ಸೂಚನೆ ಇದೆ. ನಮ್ಮ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮಾತ್ರ ಅಗತ್ಯವಿದ್ದರೆ ಅದರ ಬಗ್ಗೆ ಮಾತನಾಡುತ್ತಾರೆ. ಅಥವಾ ಅವರಿಂದ ನಿಯೋಜಿತರಾದ ಇತರೆ ನಾಯಕರು ಅದರ ಕುರಿತಂತೆ ಮಾತನಾಡಬಹುದು. " ಹೆಸರು ಬಹಿರಂಗಪಡಿಸಲು ಇಚ್ಚಿಸದ ಟಿಎಂಸಿಯ ಹಿರಿಯ ಮುಖಂಡರೊಬ್ಬರು ಪಿಟಿಐಗೆ ತಿಳಿಸಿದ್ದಾರೆ. - .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com