ಶನಿವಾರವೇ ತೀರ್ಪು ಏಕೆ ಪ್ರಕಟ?

ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಾಯ್ ಇದೇ 17 ರಂದು ಅಧಿಕಾರದಿಂದ ನಿವೃತ್ತರಾಗಲಿದ್ದು ಮುಂದಿನ ವಾರ ಪ್ರಕಟವಾಗಬೇಕಿದ್ದ ಅಯೋಧ್ಯೆ ಭೂ ವಿವಾದದ ತೀರ್ಪು ಶನಿವಾರವೇ ಪ್ರಕಟವಾಗುತ್ತಿರುವುದು ಏಕೆ?
ಶನಿವಾರವೇ ತೀರ್ಪು ಏಕೆ ಪ್ರಕಟ?

ನವದೆಹಲಿ: ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಾಯ್ ಇದೇ 17 ರಂದು ಅಧಿಕಾರದಿಂದ ನಿವೃತ್ತರಾಗಲಿದ್ದು ಮುಂದಿನ ವಾರ ಪ್ರಕಟವಾಗಬೇಕಿದ್ದ ಅಯೋಧ್ಯೆ ಭೂ ವಿವಾದದ ತೀರ್ಪು ಶನಿವಾರವೇ ಪ್ರಕಟವಾಗುತ್ತಿರುವುದು ಏಕೆ?

ನವೆಂಬರ್ 17 ಭಾನುವಾರ. ಅಂದೇ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತರಾಗುತ್ತಿದ್ದಾರೆ. ಇನ್ನು 16 ನೇ ತಾರೀಖು ಶನಿವಾರ. ನ್ಯಾಯಮೂರ್ತಿಗಳು ನಿವೃತ್ತರಾಗುವ ಹಿಂದಿನ ದಿನ ಮಹತ್ವದ ತೀರ್ಪನ್ನು ನೀಡುವ ಪರಿಪಾಠ ಇಲ್ಲ. ಮೇಲಾಗಿ ಶನಿವಾರ. ಇನ್ನು ನವೆಂಬರ್ 15 ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯ್ ಅವರ ಕೊನೆಯ ಕೆಲಸದ ದಿನವಾಗಿದೆ.

ಈ ಮೊದಲು ನಿರೀಕ್ಷೆ ಮಾಡಿದ್ದಂತೆ ಇದೇ 14 ಮತ್ತು 15 ರಂದು ಸಂವಿಧಾನ ನ್ಯಾಯಪೀಠದಿಂದ ಪ್ರಕರಣವನ್ನು ವಿಚಾರಣೆ ಒಳಪಡಿಸಬಹುದು ಎಂಬ ಊಹಾಪೋಹ ಸಹ ಹಬ್ಬಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com