ಅಯೋಧ್ಯೆ ತೀರ್ಪು ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ: 90 ಮಂದಿಯ ಬಂಧನ

ಆಯೋಧ್ಯೆ ತೀರ್ಪು ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದ ಆರೋಪದ ಹಿನ್ನಲೆಯಲ್ಲಿ ಪೊಲೀಸರು ಸುಮಾರು 90 ಮಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಆಯೋಧ್ಯೆ ತೀರ್ಪು ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದ ಆರೋಪದ ಹಿನ್ನಲೆಯಲ್ಲಿ ಪೊಲೀಸರು ಸುಮಾರು 90 ಮಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಅಯೋಧ್ಯೆ ತೀರ್ಪು ಹೊರಬಿದ್ದ ಬಳಿಕ ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದು, ಕೋಮು ಸೌಹಾರ್ಧ ಕದಡುವಂತಹ ಪೋಸ್ಚ್ ಗಳ ಮೇಲೆ ಹದ್ದಿನಕಣ್ಣಿದ್ದಾರೆ. ಪರಿಣಾಮ ಈ ವರೆಗೂ ಪ್ರಚೋದನಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದ ಸುಮಾರು 90 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ತೀರ್ಪು ಹೊರಬಿದ್ದ ಶನಿವಾರದಿಂದ ಈ ವರೆಗೂ 90 ಮಂದಿಯನ್ನು ಬಂಧಿಸಲಾಗಿದ್ದು, ಉತ್ತರ ಪ್ರದೇಶವೊಂದರಲ್ಲೇ 77 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಭಾನುವಾರ ಒಂದೇ ದಿನ 40 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಆಯೋಧ್ಯ ತೀರ್ಪಿನ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದ ಸುಮಾರು 8,275 ಪೋಸ್ಟ್ ಗಳನ್ನು ಪೊಲೀಸರು ಶೋಧಿಸಿದ್ದು, ಈ ಪೈಕಿ ಭಾನುವಾರ ಒಂದೇ ದಿನ 4,563 ಪೋಸ್ಟ್ ಗಳನ್ನು ವೀಕ್ಷಿಸಿದ್ದಾರೆ.

ಇದಲ್ಲದೆ ಮಧ್ಯ ಪ್ರದೇಶದ ಸಿಯೋನಿಯಲ್ಲಿ 8 ಮಂದಿಯನ್ನು, ಗ್ವಾಲಿಯರ್ ನಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಅಂತೆಯೇ ಗ್ವಾಲಿಯರ್ ನಲ್ಲಿ ಅಯೋಧ್ಯೆ ತೀರ್ಪು ಹೊರ ಬಿದ್ದ ಬೆನ್ನಲ್ಲೇ ಪಟಾಕಿ ಸಿಡಿಸಿ ಸಂಭಮಿಸಿದ್ದ ಜೈಲು ವಾರ್ಡನ್ ಮಹೇಶ್ ಎಂಬುವವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಗ್ವಾಲಿಯರ್ ನಲ್ಲಿ ಸಂಭ್ರಮಾಚರಣೆ ನಿಷೇಧದ ಹೊರತಾಗಿಯೂ ಮಹೇಶ್ ಪಟಾಕಿ ಸಿಡಿಸಿ ಹಿರಿಯ ಅಧಿಕಾರಿಗಳ ಆಕ್ರೋಶಕ್ಕೆ ತುತ್ತಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com