ಮಹಾ ಬಿಕ್ಕಟ್ಟು: ಕಾಂಗ್ರೆಸ್ ಜೊತೆಗೆ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನ- ಶರದ್ ಪವಾರ್ 

ಮಹಾರಾಷ್ಟ್ರ ರಾಜಕಾರಣ ದಿನಕ್ಕೊಂದು ರೀತಿಯಲ್ಲಿ ಪ್ರಹಸನಕ್ಕೆ ಸಾಕ್ಷಿಯಾಗುವಂತಿರುವಂತೆ ಶಿವಸೇನಾ ಮುಖಂಡ ಹಾಗೂ ಕೇಂದ್ರ ಭಾರೀ ಕೈಗಾರಿಕಾ ಸಚಿವ ಅರವಿಂದ್ ಸಾವಂತ್ ತಮ್ಮ ಸಚಿವ ಸ್ಥಾನ ತೊರೆಯುವುದಾಗಿ ಹೇಳಿಕೆ ನೀಡಿದ್ದಾರೆ.
ಶರದ್ ಪವಾರ್
ಶರದ್ ಪವಾರ್

ಮುಂಬೈ:ಮಹಾರಾಷ್ಟ್ರ ರಾಜಕಾರಣ ದಿನಕ್ಕೊಂದು ರೀತಿಯಲ್ಲಿ ಪ್ರಹಸನಕ್ಕೆ ಸಾಕ್ಷಿಯಾಗುವಂತಿರುವಂತೆ ಶಿವಸೇನಾ ಮುಖಂಡ ಹಾಗೂ ಕೇಂದ್ರ ಭಾರೀ ಕೈಗಾರಿಕಾ ಸಚಿವ ಅರವಿಂದ್ ಸಾವಂತ್ ತಮ್ಮ ಸಚಿವ ಸ್ಥಾನ ತೊರೆಯುವುದಾಗಿ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಎನ್ ಸಿಎ ಮುಖ್ಯಸ್ಥ ಶರದ್ ಪವಾರ್,  ಯಾರೊಬ್ಬರ ರಾಜೀನಾಮೆ ಬಗ್ಗೆ ಕೇಳಿಲ್ಲ, ಕಾಂಗ್ರೆಸ್ ಪಕ್ಷದೊಂದಿಗೆ ಚರ್ಚಿಸಿದ ಬಳಿಕವಷ್ಟೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಬಿಜೆಪಿ ಅತಿದೊಡ್ಡ ಪಕ್ಷವಾಗಿದ್ದರೂ ಶಿವಸೇನೆ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಸರ್ಕಾರ ರಚಿಸಲು ವಿಫಲವಾದ ನಂತರ  ಶರದ್ ಪವಾರ್ ನೇತೃತ್ವದಲ್ಲಿ ಎನ್ ಸಿಪಿ ಮುಖಂಡರ ಸಭೆ ನಡೆದಿದ್ದು, ಪ್ರಸ್ತುತದಲ್ಲಿನ ರಾಜಕೀಯ ಬೆಳವಣಿಗೆಗಳ ಕುರಿತಂತೆ ಚರ್ಚೆ ನಡೆಸಲಾಗಿದೆ.

ಫ್ರುಪುಲ್ ಪಟೇಲ್, ಅಜಿತ್ ಪವಾರ್, ಜಯಂತ್ ಪಟೇಲ್ , ಸುಪ್ರಿಯಾ ಸುಳೆ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದು, ಶಿವಸೇನೆ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಕಾ ಅಥವಾ ಬೇಡವೇ ಎಂಬುದರ ಕುರಿತಾಗಿ ಚರ್ಚಿಸಲಾಗಿದೆ. ಬಿಜೆಪಿ ಜೊತೆಗಿನ ಸಖ್ಯ ತೊಡೆದು ಬಂದರಷ್ಟೇ ಮಾತ್ರ ಮೈತ್ರಿ ಮಾಡಿಕೊಳ್ಳುವುದಾಗಿ ಎನ್ ಸಿಪಿ ಷರತ್ತು ವಿಧಿಸಿದೆ. 

ಒಟ್ಟಾರೇ , ಮಹಾರಾಷ್ಟ್ರ ರಾಜಕಾರಣ ದಿನಕ್ಕೊಂದು ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತಿದ್ದು, ಮುಂದಿನ ಬೆಳವಣಿಗೆಗಳು ತೀವ್ರ ಕುತೂಹಲ ಮೂಡಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com