ಹೈದ್ರಾಬಾದ್ : ಕಾಚಿಗೂಡು ನಿಲ್ದಾಣದಲ್ಲಿ ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ, ರಕ್ಷಣಾ ಕಾರ್ಯ ಪ್ರಗತಿಯಲ್ಲಿ

ಕಾಚಿಗೂಡು ರೈಲು ನಿಲ್ದಾಣದಲ್ಲಿ ಎರಡು ರೈಲುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 
ಅಪಘಾತದ ಚಿತ್ರ
ಅಪಘಾತದ ಚಿತ್ರ

ಹೈದ್ರಾಬಾದ್ :  ಕಾಚಿಗೂಡು ರೈಲು ನಿಲ್ದಾಣದಲ್ಲಿ ಎರಡು ರೈಲುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಪಾಲಾಕ್ನೂಮ್ ಕಡೆಗೆ ತೆರಳುತ್ತಿದ್ದ ಎಂಎಂಟಿಸ್ ರೈಲು ಕರ್ನೂಲ್ ಕಡೆಯಿಂದ ಬರುತ್ತಿದ್ದ ಎಕ್ಸ್ ಪ್ರೆಸ್ ಗೆ ಬೆಳಗ್ಗೆ 10-30ರ ಸುಮಾರಿನಲ್ಲಿ ಡಿಕ್ಕಿ ಹೊಡೆದಿದೆ.ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರೈಲ್ವೆ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿ ನಜುಗುಜ್ಜಾದ ಬೋಗಿಯಲ್ಲಿ ಸಿಲುಕಿದ್ದ ಚಾಲಕನನ್ನು ರಕ್ಷಿಸಲಾಗಿದೆ. 

ಸಿಗ್ನಲ್ ಲೋಪದಿಂದಾಗಿ ಎಂಎಂಟಿಎಸ್ ರೈಲು ಎಕ್ಸ್ ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಗಾಯಾಳುಗಳನ್ನು ಒಸ್ಮಾನಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸಾವು- ನೋವಿನ ವಿವರಗಳು ತಿಳಿದುಬಂದಿದೆ. ಸದ್ಯ, ದಕ್ಷಿಣ ಕೇಂದ್ರ ರೈಲ್ವೆ ಅಪಘಾತದ ತನಿಖೆಗೆ ಆದೇಶಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com