ಮಹಾರಾಷ್ಟ್ರ ಬಳಿಕ ಬಿಜೆಪಿಗೆ ಮತ್ತೊಂದು ಮರ್ಮಾಘಾತ! 

ಮಹಾರಾಷ್ಟ್ರದಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ-ಶಿವಸೇನೆ ನಡುವೆ ಫಲಿತಾಂಶದ ನಂತರ ಬಿರುಕುಂಟಾಗಿದ್ದರೆ, ಚುನಾವಣೆ ಹೊಸ್ತಿಲಿನಲ್ಲಿರುವ ಜಾರ್ಖಂಡ್ ನಲ್ಲಿ ಚುನಾವಣೆಗೂ ಮುನ್ನವೇ ಬಿಜೆಪಿಗೆ ಶಾಕ್ ಎದುರಾಗಿದೆ. 

Published: 11th November 2019 11:20 PM  |   Last Updated: 11th November 2019 11:20 PM   |  A+A-


Jharkhand assembly election 2019: AJSU breaks alliance with BJP?

ಮಹಾರಾಷ್ಟ್ರ ಬಳಿಕ ಬಿಜೆಪಿಗೆ ಮತ್ತೊಂದು ಮರ್ಮಾಘಾತ!

Posted By : Srinivas Rao BV
Source : UNI

ರಾಂಚಿ: ಮಹಾರಾಷ್ಟ್ರದಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ-ಶಿವಸೇನೆ ನಡುವೆ ಫಲಿತಾಂಶದ ನಂತರ ಬಿರುಕುಂಟಾಗಿದ್ದರೆ, ಚುನಾವಣೆ ಹೊಸ್ತಿಲಿನಲ್ಲಿರುವ ಜಾರ್ಖಂಡ್ ನಲ್ಲಿ ಚುನಾವಣೆಗೂ ಮುನ್ನವೇ ಬಿಜೆಪಿಗೆ ಶಾಕ್ ಎದುರಾಗಿದೆ. 

ಜಾರ್ಖಂಡ್‍ನಲ್ಲಿ ಬಿಜೆಪಿಯ ಪ್ರಾದೇಶಿಕ ಮೈತ್ರಿ ಪಕ್ಷವಾದ ಎಜೆಎಸ್‌ಯು ಸೋಮವಾರ ರಾಜ್ಯ ವಿಧಾನಸಭೆ ಚುನಾವಣೆಗೆ 11 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪೈಕಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧವೇ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಬೆಳವಣಿಗೆಯನ್ನು  ಬಿಜೆಪಿ-ಎಜೆಎಸ್ ಯು ಮೈತ್ರಿಕೂಟದ ನಡುವಿನ ಬಿರುಕು ಎಂದೇ ವಿಶ್ಲೇಷಿಸಲಾಗುತ್ತಿದ್ದು, ಜಾರ್ಖಂಡ್ ನಲ್ಲಿ ಬಿಜೆಪಿ-ಎಸ್ ಜೆಎಸ್ ಯು ನಡುವಿನ ಮೈತ್ರಿ ಅಂತ್ಯಗೊಳ್ಳುವುದು ಸನ್ನಿಹಿತವಾಗಿದೆ ಎಂದು ಹೇಳಲಾಗುತ್ತಿದೆ. 

ಕುತೂಹಲಕಾರಿ ಸಂಗತಿ ಎಂದರೆ ರಾಜ್ಯ ಬಿಜೆಪಿ ಅಧ್ಯಕ್ಷ ಲಕ್ಷ್ಮಣ್‍ ಗಿಲುವಾ ಕಣಕ್ಕಿಳಿದಿರುವ ಚಕರ್‌ಧರಪುರ ಕ್ಷೇತ್ರದಲ್ಲೇ ಎಜೆಎಸ್‍ಯು ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp