ಭಾರತದಲ್ಲಿ ಉಗ್ರ ಚಟುವಟಿಕೆಗೆ ಹಣಕಾಸು ನೆರವು: ಲಷ್ಕರ್‌ ಭಯೋತ್ಪಾದಕ ಬಂಧನ

ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಕಾರ್ಯಕರ್ತ ಶೇಖ್ ಅಬ್ದುಲ್ ನಯೀಮ್ ಅಲಿಯಾಸ್ ಸುಹೈಲ್ ಖಾನ್ ಎಂಬಾತನಿಗೆ  ಧನಸಹಾಯ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಪರಾರಿಯಾಗಿದ್ದ ಆರೋಪಿ ಜಾವೇದ್ ಅಲಿಯಾಸ್ ಜಾವೇದ್ ಅಲಿ ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ಬಂಧಿಸಿದೆ. 
ಭಯೋತ್ಪಾದಕರು
ಭಯೋತ್ಪಾದಕರು

ನವದೆಹಲಿ: ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಕಾರ್ಯಕರ್ತ ಶೇಖ್ ಅಬ್ದುಲ್ ನಯೀಮ್ ಅಲಿಯಾಸ್ ಸುಹೈಲ್ ಖಾನ್ ಎಂಬಾತನಿಗೆ  ಧನಸಹಾಯ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಪರಾರಿಯಾಗಿದ್ದ ಆರೋಪಿ ಜಾವೇದ್ ಅಲಿಯಾಸ್ ಜಾವೇದ್ ಅಲಿ ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ಬಂಧಿಸಿದೆ. 

ತನ್ನ ಸಹಚರರೊಂದಿಗೆ ಭಾರತದಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಕ್ರಿಮಿನಲ್ ಪಿತೂರಿ ನಡೆಸಿದ ಸುಹೈಲ್‌ನನ್ನು ಈಗಾಗಲೇ ಬಂಧಿಸಲಾಗಿದ್ದು, ಆತನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 

ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ಪಾಕಿಸ್ತಾನ ಮತ್ತು ಇತರ ದೇಶಗಳಲ್ಲಿ ನೆಲೆಸಿರುವ ಕಾರ್ಯಕರ್ತರ ಮೂಲಕ ಹಣಕಾಸು ಸಂಗ್ರಹ ಮಾಡಿದ ಆರೋಪದಲ್ಲಿ ಭಯೋತ್ಪಾದಕ ತನಿಖಾ ಸಂಸ್ಥೆ(ಎನ್‌ಐಎ) ಅಧಿಕಾರಿಗಳು ಐಪಿಸಿಯ ಸೆಕ್ಷನ್ 120 ಬಿ, 121, 121 ಎ ಮತ್ತು ಯುಎ(ಪಿ) ಕಾಯ್ದೆಯ ಸೆಕ್ಷನ್ 17, 18, 19, 20, 38, 39 ಮತ್ತು 40 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com