ಶಶಿ ತರೂರ್
ಶಶಿ ತರೂರ್

ಕೇರಳ ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ದ  ಬಂಧನ ವಾರೆಂಟ್

ಕೇರಳ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ವಿರುದ್ಧ ದೆಹಲಿ ರೋಸ್ ಅವೆನ್ಯೂ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ.

ನವದೆಹಲಿ: ಕೇರಳ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ವಿರುದ್ಧ ದೆಹಲಿ ರೋಸ್ ಅವೆನ್ಯೂ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ.

ಪ್ರಧಾನಿ  ನರೇಂದ್ರ ಮೋದಿ ಅವರನ್ನು ಶಿವಲಿಂಗದ ಮೇಲೆ ಕುಳಿತಿರುವ ಚೇಳಿಗೆ ಹೋಲಿಸಿ ಶಶಿ ತರೂರ್ ಕಳೆದ ವರ್ಷ ನೀಡಿದ್ದ ಅಪಮಾನಕಾರಿ ಹೇಳಿಕೆ ವಿರುದ್ದ ದಾಖಲಿಸಲಾಗಿದ್ದ ಮಾನನಷ್ಟ ಮೊಕದ್ದಮೆ ಸಂಬಂಧ ಈ ವಾರೆಂಟ್ ಹೊರಡಿಸಲಾಗಿದೆ.

ಪ್ರಕರಣ ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದ ತರೂರ್ ವಿರುದ್ದ ಜಾಮೀನು ಸಹಿತ ವಾರೆಂಟ್ ಅನ್ನು ನ್ಯಾಯಾಲಯ ಹೊರಡಿಸಿದೆ. ಕಳೆದ ವರ್ಷದ ಅಕ್ಟೋಬರ್ 8ರಂದು ಬೆಂಗಳೂರಿನಲ್ಲಿ ನಡೆದ ಸಾಹಿತ್ಯೋತ್ಸವ ಉದ್ದೇಶಿಸಿ  ಮಾತನಾಡುವ ವೇಳೆ ಶಶಿ ತರೂರ್, ಪ್ರಧಾನಿ  ನರೇಂದ್ರ ಮೋದಿ ಅವರನ್ನು ಶಿವಲಿಂಗದ ಮೇಲೆ ಕುಳಿತಿರುವ ಚೇಳು ಎಂದು ಬಣ್ಣಿಸಿ, ಅದನ್ನು ಕೈಯಿಂದ ತೆಗೆದು ಹೊರ ಎಸೆಯಲು ಸಾಧ್ಯವಿಲ್ಲ. ಅದೇ ರೀತಿ ಚಪ್ಪಲಿಯಿಂದ ಚೇಳನ್ನು ಹೊಡೆದು ಹಾಕಲು ಸಾಧ್ಯವಿಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ತರೂರ್ ನೀಡಿದ್ದ ಹೇಳಿಕೆ ವಿರುದ್ದ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತಗೊಂಡಿತ್ತು. ಶಶಿ ತರೂರ್ ಅವರ ವಿರುದ್ದ ಮಾನನಷ್ಟದಾವೆ ಹೂಡಲಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com