2018-19ರಲ್ಲಿ ಟಾಟಾ ಗ್ರೂಪ್ ನಿಂದ ಬಿಜೆಪಿಗೆ 350 ಕೋಟಿ ರೂ. ದೇಣಿಗೆ

2018-2019ನೇ ಆರ್ಥಿಕ ಸಾಲಿನಲ್ಲಿ ಆಡಳಿತರೂಢ ಬಿಜೆಪಿಗೆ ಕೋಟಿ ಕೋಟಿ ಅನುದಾನ ಹರಿದು ಬಂದಿದ್ದು, ಟಾಟಾ ಗ್ರೂಪ್ ಒಂದೇ ಬರೋಬ್ಬರಿ 350 ಕೋಟಿ ರೂಪಾಯಿ ದೇಣಿಗೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 2018-2019ನೇ ಆರ್ಥಿಕ ಸಾಲಿನಲ್ಲಿ ಆಡಳಿತರೂಢ ಬಿಜೆಪಿಗೆ ಕೋಟಿ ಕೋಟಿ ಅನುದಾನ ಹರಿದು ಬಂದಿದ್ದು, ಟಾಟಾ ಗ್ರೂಪ್ ಒಂದೇ ಬರೋಬ್ಬರಿ 350 ಕೋಟಿ ರೂಪಾಯಿ ದೇಣಿಗೆ ನೀಡಿದೆ.

ಕಳೆದ ಅಕ್ಟೋಬರ್ 31ರಂದು ಬಿಜೆಪಿ ಚುನಾವಣಾ ಆಯೋಗಕ್ಕೆ ನೀಡಿರುವ ದಾಖಲೆಗಳ ಪ್ರಕಾರ, ಕೇಸರಿ ಪಕ್ಷಕ್ಕೆ ಈ ವರ್ಷ ಒಟ್ಟು 700 ಕೋಟಿ ರೂಪಾಯಿ ದೇಣಿಗೆ ಹರಿದು ಬಂದಿದ್ದು, ಈ ಪೈಕಿ ಅರ್ಧದಷ್ಟು ಅಂದರೆ 350 ಕೋಟಿ ರೂಪಾಯಿ ಟಾಟಾ ಗ್ರೂಪ್ ನಿಯಂತ್ರಣದ ಪ್ರಗತಿಶೀಲ ಚುನಾವಣಾ ಟ್ರಸ್ಟ್ ನಿಂದ ಪಡೆದುಕೊಂಡಿದೆ.

ಭಾರತದ ಅತಿ ಶ್ರೀಮಂತ ಟ್ರಸ್ಟ್ ವಿವೇಕಯುತ ಚುನಾವಣಾ ಟ್ರಸ್ಟ್ ಬಿಜೆಪಿ 54.25 ಕೋಟಿ ರೂಪಾಯಿ ದೇಣಿಗೆ ನೀಡಿದೆ.

ಕೇಂದ್ರ ಹಾಗೂ ದೇಶದ ಹಲವು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಕಳೆದ ಸಾಲಿನಲ್ಲಿ ಬರೋಬ್ಬರಿ 700 ಕೋಟಿ ರೂಪಾಯಿ ದೇಣಿಗೆ ಹರಿದು ಬಂದಿದೆ. ಪಕ್ಷಕ್ಕೆ ಚೆಕ್ ಹಾಗೂ ಆನ್ ಲೈನ್ ಮೂಲಕವೇ ಇಷ್ಟೊಂದು ಮೊತ್ತದ ದೇಣಿಗೆ ಬಂದಿದೆ ಎಂದು ಬಿಜೆಪಿ ಕೇಂದ್ರ ಚುನಾವಣಾ ಆಯೋಗಕ್ಕೆ ಲೆಕ್ಕ ಕೊಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com