ಅಜಿತ್ ಪವಾರ್
ಅಜಿತ್ ಪವಾರ್

ಮಹಾರಾಷ್ಟ್ರ: ರಾಷ್ಟ್ರಪತಿ ಆಳ್ವಿಕೆಗೆ ಕಾರಣವಾಯ್ತಾ ಎನ್ ಸಿಪಿ ನಾಯಕನ ಫೋನ್ ಕಾಲ್?

ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ರಾಜ್ಯದಲ್ಲಿ ನೂತನ ಸರ್ಕಾರ ರಚಿಸುವಂತೆ ಮೊದಲ ಬಿಜೆಪಿಗೆ ನಂತರ ಶಿವಸೇನಾಗೆ ಆಹ್ವಾನಿ ನೀಡಿದ್ದರು. ಆದರೆ ಆ ಎರಡು ಪಕ್ಷಗಳು ರಾಜ್ಯಪಾಲರು ನೀಡಿದ...

ಮುಂಬೈ: ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ರಾಜ್ಯದಲ್ಲಿ ನೂತನ ಸರ್ಕಾರ ರಚಿಸುವಂತೆ ಮೊದಲ ಬಿಜೆಪಿಗೆ ನಂತರ ಶಿವಸೇನಾಗೆ ಆಹ್ವಾನಿ ನೀಡಿದ್ದರು. ಆದರೆ ಆ ಎರಡು ಪಕ್ಷಗಳು ರಾಜ್ಯಪಾಲರು ನೀಡಿದ ಗಡುವಿನೊಳಗೆ ಸರ್ಕಾರ ರಚಿಸಲು ವಿಫಲವಾದ ಹಿನ್ನೆಲೆಯಲ್ಲಿ ನಿನ್ನೆ ಸರ್ಕಾರ ರಚನೆಗೆ ಎನ್​ಸಿಪಿಗೆ ಆಹ್ವಾನ ನೀಡಿದ್ದರು. ಅಲ್ಲದೆ ಎನ್ ಸಿಪಿಗೆ ಸರ್ಕಾರ ರಚಿಸಲು ಇಂದು ರಾತ್ರಿ 8:30ರವರೆಗೆ ಗಡುವು ನೀಡಿದ್ದರು. ಆದರೆ ರಾಜ್ಯಪಾಲರು ಇಂದು ಬೆಳಗ್ಗೆ ಏಕಾಏಕಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿರುವುದು ಈಗ ರಾಜಕೀಯ ವಲದಲ್ಲಿ ತೀವ್ರ ಅಚ್ಚರಿ ಮೂಡಿಸಿದೆ.

ರಾಜ್ಯಪಾಲ ಕೊಶ್ಯಾರಿ ಅವರು ಏಕಾಏಕಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಲು ಎನ್ ಸಿಪಿ ನಾಯಕ ಅಜಿತ್ ಪವಾರ್ ಅವರ ಫೋನ್ ಕಾಲ್ ಕಾರಣ ಎನ್ನಲಾಗುತ್ತಿದೆ.

ರಾಜ್ಯಪಾಲರನ್ನು ಭೇಟಿ ಮಾಡಿ, ಸರ್ಕಾರ ರಚನೆಯ ಹಕ್ಕು ಮಂಡಿಸಲು ಮುಂದಾಗಿದ್ದ ಎನ್ ಸಿಪಿ ನಾಯಕ ಅಜಿತ್ ಪವಾರ್ ಅವರು ರಾಜಭವನಕ್ಕೆ ಕರೆ ಮಾಡಿ, ಶಾಸಕರ ಪಟ್ಟಿ ನೀಡಲು ಸಮಯ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಸಮಯ ನೀಡಲು ನಿರಾಕರಿಸಿದ ರಾಜ್ಯಪಾಲರು ಕೂಡಲೇ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದಾರೆ.

ನಿನ್ನೆ ರಾತ್ರಿ 8.30ರ ಸುಮಾರಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ್ದ ಎನ್ ಸಿಪಿಗೆ 24 ಗಂಟೆಗಳಲ್ಲಿ ಸರ್ಕಾರ ರಚಿಸುವಂತೆ ಕೊಶ್ಯಾರಿ ಅವರು ಗಡುವು ನೀಡಿದ್ದರು. ಆದರೆ ಎನ್ ಸಿಪಿ ಗಡುವಿನೊಳಗೆ ಸರ್ಕಾರ ರಚಿಸಲು ಮುಂದಾಗದೇ ಮತ್ತಷ್ಟು ಸಮಯ ಕೇಳಿದೆ.

ಇಂದು ಬೆಳಗ್ಗೆ ರಾಜಭವನಕ್ಕೆ ಕರೆ ಮಾಡಿದ ಎನ್ ಸಿಪಿ ಶಾಸಕಾಂಗ ಪಕ್ಷದ ನಾಯಕ ಅಜಿತ್ ಪವಾರ್ ಅವರು, ಶಾಸಕರ ಪಟ್ಟಿ ನೀಡಲು ಎರಡು ದಿನ ಕಾಲಾವಕಾಶ ಸಿಗಬಹುದೇ ಎಂದು ಕೇಳಿದ್ದಾರೆ. 

ಮೂಲಗಳ ಪ್ರಕಾರ, ಎನ್ ಸಿಪಿ ನಾಯಕನ ಈ ದೂರವಾಣಿ ಕರೆ, ಪಕ್ಷ ಸರ್ಕಾರ ರಚಿಸಲು ಸಮರ್ಥವಾಗಿಲ್ಲ ಎಂಬುದನ್ನು ಸ್ಪಷ್ಟವಾಗಿ ಸೂಚಿಸಿದ್ದು, ರಾಜ್ಯಪಾಲರು ಕೂಡಲೇ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದಾರೆ.

ಕೇಂದ್ರ ಸಚಿವ ಸಂಪುಟ ರಾಜ್ಯಪಾಲರ ಶಿಫಾರಸಿಗೆ ಒಪ್ಪಿಗೆ ಸಿಕ್ಕಿದ್ದು, ಅದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಈ ಮೂಲಕ ಬಿಜೆಪಿ, ಶಿವಸೇನೆ, ಕಾಂಗ್ರೆಸ್​ ಮತ್ತು ಎನ್​ಸಿಪಿ ನಡುವಿನ ಹಗ್ಗಜಗ್ಗಾಟಕ್ಕೆ ರಾಷ್ಟ್ರಪತಿ ಆಡಳಿತದ ಅಂಕುಶದ ಅಂತ್ಯ ಸಿಕ್ಕಿದೆ.

Related Stories

No stories found.

Advertisement

X
Kannada Prabha
www.kannadaprabha.com