ಕಾರ್ತಿಕ ಪೂರ್ಣಿಮೆ: ಸರಯೂ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ ನೂರಾರು ಭಕ್ತರು

ಕಾರ್ತಿಕ ಪೂರ್ಣಿಮೆಯ ಶುಭದಿನವಾದ ಮಂಗಳವಾರ ಮುಂಜಾನೆ ಅಯೋಧ್ಯೆಯ ಸರಯೂ ನದಿಯಲ್ಲಿ ನೂರಾರು ಭಕ್ತರು ಪವಿತ್ರ ಸ್ನಾನ ಮಾಡಿದರು. 

ಅಯೋಧ್ಯೆ: ಕಾರ್ತಿಕ ಪೂರ್ಣಿಮೆಯ ಶುಭದಿನವಾದ ಮಂಗಳವಾರ ಮುಂಜಾನೆ ಅಯೋಧ್ಯೆಯ ಸರಯೂ ನದಿಯಲ್ಲಿ ನೂರಾರು ಭಕ್ತರು ಪವಿತ್ರ ಸ್ನಾನ ಮಾಡಿದರು. 

ಕಾರ್ತಿಕ ಪೂರ್ಣಿಮೆಯ ದಿನ ಹಿಂದೂಗಳು ನದಿಗಳಲ್ಲಿ ಪವಿತ್ರ ಸ್ನಾನ ಮಾಡುವುದು ವಿಶೇಷವಾಗಿದ್ದು, ಇದರಂತೆ ವಾರಣಾಸಿಯ ಗಂಗಾ ನದಿ ತೀರದ ಘಾಟ್ ನಲ್ಲಿಯೂ ನೂರಾರು ಭಕ್ತರು ಪವಿತ್ರ ಸ್ನಾನ ಮಾಡಿದರು. 

ಕಾರ್ತಿಕ ಪೂರ್ಣಿಮೆಯು ಪ್ರಭೋದಿನಿ ಏಕಾದಶಿಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಇದು ಚಾತುರ್ಮಾಸಗಳ ಮುಕ್ತಾಯವನ್ನು ಸೂಚಿಸುತ್ತದೆ. ಚಾತುರ್ಮಾಸ ಎಂದರೆ ವಿಷ್ಣು ನಿದ್ರೆ ಮಾಡುತ್ತಾನೆಂದು ನಂಬಲಾದ ನಾಲ್ಕು ತಿಂಗಳುಗಳ ಅವಧಿ. ಪ್ರಬೋಧಿನಿ ಏಕಾದಶಿ ದೇವರ ಜಾಗೃತಿಯನ್ನು ಸೂಚಿಸುತ್ತದೆ. ಈ ದಿನದಂದು ಚಾತುರ್ಮಾಸ ತಪಸ್ಸು ಕೊನೆಗೊಳ್ಳುತ್ತದೆ. 

ವಿಷ್ಣುವಿನ ಅವತಾರವಾದ ಕೃಷ್ಣನ ಗೆಳತಿ ರಾಧಾಗೆ ಈ ದಿನವನ್ನು ವಿಶೇಷವೆಂದು ಪರಿಗಣಿಸಲಾಗಿದೆ. ಕೃಷ್ಣ ಮತ್ತು ರಾಧಾ ಈ ದಿನ ರಾಸಲೀಲೆ ನೃತ್ಯ ಮಾಡಿದರು. ಮತ್ತು ಕೃಷ್ಣ ಈ ದಿನ ರಾಧೆಯನ್ನು ಆರಾಧಿಸಿದ ಎಂದು ನಂಬಲಾಗಿದೆ. 

ಅಯೋಧ್ಯೆ ವಿವಾದ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಸರಯೂ ನದಿಯಲ್ಲಿ ನಡೆಯುತ್ತಿರುವ ಮೊದಲ ಪವಿತ್ರ ಸ್ನಾನ ಇದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com