ಟಿಇಟಿ ಪರೀಕ್ಷೆ ಬರೆಯಲು ಹೋದ ತಾಯಂದಿರು: ಮಕ್ಕಳನ್ನು ಆರೈಕೆ ಮಾಡಿದ ಮಹಿಳಾ ಪೇದೆಗಳು!

ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯಲು ಹೋದ ತಾಯಂದಿರ ಮಕ್ಕಳನ್ನು ಆರೈಕೆ ಮಾಡುತ್ತಿರುವ ಕರ್ತವ್ಯ ನಿರತ ಅಸ್ಸಾಂನ ಮಹಿಳಾ ಪೇದೆಗಳ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಮಕ್ಕಳೊಂದಿಗೆ ಮಹಿಳಾ ಪೊಲೀಸರು
ಮಕ್ಕಳೊಂದಿಗೆ ಮಹಿಳಾ ಪೊಲೀಸರು

ದಾರಂಗ್ : ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯಲು ಹೋದ ತಾಯಂದಿರ ಮಕ್ಕಳನ್ನು ಆರೈಕೆ ಮಾಡುತ್ತಿರುವ ಕರ್ತವ್ಯ ನಿರತ ಅಸ್ಸಾಂನ ಮಹಿಳಾ ಪೇದೆಗಳ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ತಾಯಂದಿರು ಪರೀಕ್ಷೆ ಬರೆಯಲು ಹೋದಾಗ ಕರ್ತವ್ಯನಿರತವಾಗಿದ್ದ  ಇಬ್ಬರು ಮಹಿಳಾ ಪೇದೆಗಳು ಮಕ್ಕಳು ಎತ್ತಿಕೊಂಡು ಸಂತೈಸುತ್ತಿರುವ ಪೋಟೋವನ್ನು ಅಸ್ಸಾಂ ಪೊಲೀಸರು ಟ್ವೀಟ್ ಮಾಡಿದ್ದಾರೆ. ಅಲ್ಲದೇ ತಾಯಿಯಾಗುವುದು  ಒಂದು  ಕ್ರಿಯೆ. ನೀವು ಅದನ್ನು ಮಾಡಬೇಕಾಗುತ್ತದೆ ಎಂದು ಬರೆಯಲಾಗಿದೆ. 

ಈ ಪೋಟೋಗಳು ಸಾಕಷ್ಟು ಶೇರ್ ಆಗುತ್ತಿದ್ದು, ಅನೇಕರು ಪೇದೆಗಳ ಈ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com