ಕೃಷಿ ತ್ಯಾಜ್ಯ ಸುಡದೇ ಇದ್ದರೆ 2,500 ರೂಪಾಯಿ ಪರಿಹಾರ ಧನ!

ಕೃಷಿ ತ್ಯಾಜ್ಯ ಸುಡುತ್ತಿರುವುದರ ಪರಿಣಾಮ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಂಜಾಬ್ ಸರ್ಕಾರ ಕ್ರಮ ಕೈಗೊಂಡಿದೆ. 
ಕೃಷಿ ತ್ಯಾಜ್ಯ ಸುಡದೇ ಇದ್ದರೆ 2,500 ರೂಪಾಯಿ ಪರಿಹಾರ ಧನ!
ಕೃಷಿ ತ್ಯಾಜ್ಯ ಸುಡದೇ ಇದ್ದರೆ 2,500 ರೂಪಾಯಿ ಪರಿಹಾರ ಧನ!

ಚಂಡೀಗಢ: ಕೃಷಿ ತ್ಯಾಜ್ಯ ಸುಡುತ್ತಿರುವುದರ ಪರಿಣಾಮ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಂಜಾಬ್ ಸರ್ಕಾರ ಕ್ರಮ ಕೈಗೊಂಡಿದೆ. 

ರೈತರಿಗೆ ಪರಿಹಾರ ಧನ ಘೋಷಿಸಿರುವ ಪಂಜಾಬ್ ಸರ್ಕಾರ ಕೃಷಿ ತ್ಯಾಜ್ಯ ಸುಡದಂತೆ ಮನವಿ ಮಾಡಿದೆ. ಕೃಷಿ ತ್ಯಾಜ್ಯವನ್ನು ಸುಡದೇ ಇರುವುದಕ್ಕೆ ಪ್ರತಿ ಎಕರೆಗೆ 2,500 ರೂಪಾಯಿ ನೀಡುವುದಾಗಿ ಹೇಳಿದೆ. 

ಕೃಷಿ ಇಲಾಖೆಯ ಕಾರ್ಯದರ್ಶಿ ಕಹಾನ್ ಸಿಂಗ್ ಪನ್ನು ಮಾಹಿತಿ ನೀಡಿದ್ದು, ಬಾಸ್ ಮತಿಯೇತರ ಭತ್ತದ ಬೆಳೆಯನ್ನು ಬೆಳೆಯುವ, 5 ಎಕರೆ ಜಮೀನು ಹೊಂದಿರುವವರುಗೆ ಪ್ರತಿ ಎಕರೆಗೆ 2,500 ರೂಪಾಯಿ ನೀಡಲಾಗುವುದು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com