ಸುಪ್ರೀಂ ಕೋರ್ಟ್ ನಿಂದ ಇಂದು ಶಬರಿಮಲೆ ತೀರ್ಪು: ಭಕ್ತರಲ್ಲಿ, ಕಾರ್ಯಕರ್ತರಲ್ಲಿ ಆತಂಕ 

ಯುವತಿಯರು ಮತ್ತು ಮಹಿಳೆಯರು ಶಬರಿಮಲೆ ದೇವಾಲಯ ಪ್ರವೇಶಿಸಬಹುದು ಎಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆದು ಗುರುವಾರ ಸುಪ್ರೀಂ ಕೋರ್ಟ್ ನಿಂದ ತೀರ್ಪು ಹೊರಬರುತ್ತಿದ್ದು ಎಲ್ಲರೂ ಕೋರ್ಟ್ ತೀರ್ಪು ಯಾವ ರೀತಿ ಹೊರಬರಲಿದೆ ಎಂದು ಕಾಯುತ್ತಿದ್ದಾರೆ.
ಶಬರಿಮಲೆ
ಶಬರಿಮಲೆ

ಕೊಚ್ಚಿ: ಯುವತಿಯರು ಮತ್ತು ಮಹಿಳೆಯರು ಶಬರಿಮಲೆ ದೇವಾಲಯ ಪ್ರವೇಶಿಸಬಹುದು ಎಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆದು ಗುರುವಾರ ಸುಪ್ರೀಂ ಕೋರ್ಟ್ ನಿಂದ ತೀರ್ಪು ಹೊರಬರುತ್ತಿದ್ದು ಎಲ್ಲರೂ ಕೋರ್ಟ್ ತೀರ್ಪು ಯಾವ ರೀತಿ ಹೊರಬರಲಿದೆ ಎಂದು ಕಾಯುತ್ತಿದ್ದಾರೆ.


ಶಬರಿಮಲೆ ದೇವಾಲಯ ಭಕ್ತರು, ಟ್ರವಂಕೂರು ದೇವಸ್ವಮ್ ಮಂಡಳಿ(ಟಿಡಿಬಿ) ತೀರ್ಪು ಹೊರಬಂದ ನಂತರದ ಪರಿಸ್ಥಿತಿ ಬಗ್ಗೆ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. 


ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ನಿಂದ ತೀರ್ಪು ಹೊರಬಿದ್ದು ಸತತ ಪ್ರತಿಭಟನೆಗಳು ನಡೆದ ನಂತರ ದೇವಸ್ಥಾನದ ಆದಾಯ ತೀವ್ರವಾಗಿ ಇಳಿಕೆಯಾಗಿತ್ತು. ಈ ವರ್ಷದ ಸಂಕ್ರಾಂತಿ ಸಮಯದ 60 ದಿನಗಳ ಶಬರಿಮಲೆ ಯಾತ್ರೆಯ ಸಮಯವಿದು. ಕಳೆದ ವರ್ಷ ತೀವ್ರ ಪ್ರತಿಭಟನೆ, ಪೊಲೀಸರ ಲಾಠಿಚಾರ್ಚ್ ಇತ್ಯಾದಿಗಳಿಂದಾಗಿ ಹಲವರು ಶಬರಿಮಲೆಗೆ ಹೋಗಿರಲಿಲ್ಲ. 60 ದಿನಗಳ ಶಬರಿಮಲೆ ವ್ರತ, ಯಾತ್ರೆ ಇದೇ ಭಾನುವಾರ ಆರಂಭವಾಗುತ್ತಿದೆ. ಭಕ್ತರಲ್ಲಿ ಸಹಜವಾಗಿ ಆತಂಕ ಮನೆಮಾಡಿದೆ.

ಶಾಂತಿಯನ್ನು ಕಾಪಾಡಲು ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಪಾಡಬಹುದು ಎಂದು ನಾವು ನಂಬುತ್ತೇವೆ. ಕಳೆದ ವರ್ಷ  ಸುಪ್ರೀಂ ಕೋರ್ಟ್ ತೀರ್ಪು ಹೊರಬಂದ ಮೇಲೆ ವ್ಯಾಪಕ ಪ್ರತಿಭಟನೆ ನಡೆಯಿತು. ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸಬಾರದು ಎಂದು ವರ್ಷಗಳಿಂದ ಇರುವ ಸಂಪ್ರದಾಯವನ್ನು ಮುರಿದರೆ ಪ್ರತಿಭಟನೆ ಮುಂದುವರಿಸಬೇಕಾಗುತ್ತದೆ ಎಂದು ಭಕ್ತರು ಹೇಳುತ್ತಾರೆ.


ಈ ಮಧ್ಯೆ ಶಬರಿಮಲೆ ಸುತ್ತಮುತ್ತ ಇರುವ ವ್ಯಾಪಾರಸ್ಥರು ತೀವ್ರ ಆತಂಕದಲ್ಲಿದ್ದಾರೆ. ಕಾರ್ಯಕರ್ತರು ದೇವಾಲಯದ ಹತ್ತಿರ ಬಂದು ಪ್ರತಿಭಟನೆ ಆರಂಭಿಸಿದರೆ ದೇವಸ್ಥಾನಕ್ಕೆ ಬರುವ ಯಾತ್ರಿಕರ ಸಂಖ್ಯೆ ಕಡಿಮೆಯಾಗುತ್ತದೆ. ಸಹಜವಾಗಿ ನಮ್ಮ ವ್ಯಾಪಾರದಲ್ಲಿ ನಷ್ಟವಾಗುತ್ತದೆ ಎಂದು ಶಬರಿಮಲೆಯ ವ್ಯಾಪಾರಿ ವ್ಯವಸಾಯಿ ಏಕೊಪಾನ ಸಮಿತಿಯ ಅಧ್ಯಕ್ಷ ಜಿ ಅನಿಲ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com