ಮಹಾತ್ಮ ಗಾಂಧಿ ಸಾವು ಆಕಸ್ಮಿಕ!: ವಿವಾದಕ್ಕೆ ಕಾರಣವಾಯ್ತು ಒಡಿಶಾ ಶಾಲಾ ಕೈಪಿಡಿ

ರಾಷ್ಟ್ರಪಿತ ಮಹಾತ್ಮ ಗಾಂಧಿ ಮೃತಪಟ್ಟಿದ್ದು ಹೇಗೆ ಎಂಬುದು ಇಡೀ ಪ್ರಪಂಚಕ್ಕೆ ಗೊತ್ತು. ಆದರೆ, ಒಡಿಶಾದ ಶಾಲಾ ಕೈಪಿಡಿಯಲ್ಲಿ ಗಾಂಧಿ ಸಾವು ಆಕಸ್ಮಿಕ ಎಂದು ಹೇಳಲಾಗಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ಮಹಾತ್ಮ ಗಾಂಧಿ
ಮಹಾತ್ಮ ಗಾಂಧಿ

ಭುವನೇಶ್ವರ: ರಾಷ್ಟ್ರಪಿತ ಮಹಾತ್ಮ ಗಾಂಧಿ ಮೃತಪಟ್ಟಿದ್ದು ಹೇಗೆ ಎಂಬುದು ಇಡೀ ಪ್ರಪಂಚಕ್ಕೆ ಗೊತ್ತು. ಆದರೆ, ಒಡಿಶಾದ ಶಾಲಾ ಕೈಪಿಡಿಯಲ್ಲಿ ಗಾಂಧಿ ಸಾವು ಆಕಸ್ಮಿಕ ಎಂದು ಹೇಳಲಾಗಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಮಹಾ ಪ್ರಮಾದಕ್ಕೆ ಓಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ರಾಜಕೀಯ ನಾಯಕರು ಮತ್ತು ಹೋರಾಟಗಾರರು ಆಗ್ರಹಿಸಿದ್ದಾರೆ.

ಕಳೆದ ಅಕ್ಟೋಬರ್ 2 ರಂದು ಮಹಾತ್ಮ ಗಾಂಧೀಜಿಯ 150ನೇ ಜಯಂತಿಯ ಅಂಗವಾಗಿ ಒಡಿಶಾ ಸರ್ಕಾರ ಸಿದ್ಧಪಡಿಸಿದ ಎರಡು ಪುಟಗಳ ಶಾಲಾ ಕೈಪಿಡಿಯಲ್ಲಿ ಗಾಂಧಿ ಸಾವು ಅನಿರೀಕ್ಷಿತ ಕಾರಣಗಳಿಂದ ಸಂಭವಿಸಿದೆ ಎಂದು ಪ್ರಕಟಿಸಲಾಗಿದೆ.

ಕೂಡಲೇ ಎಚ್ಚೆತ್ತುಕೊಂಡ ನವೀನ್‌ ಪಾಟ್ನಾಯಕ್ ಅವರು ಈ ಕುರಿತು ಪರಿಶೀಲಿಸುವಂತೆ ಆದೇಶ ನೀಡಿದ್ದಾರೆ. ಆದರೂ ಗಾಂಧಿ ಕುರಿತು ಇಂತಹ ಗೊಂದಲ ಮೂಡಿಸುವ ಮಾಹಿತಿ ಪ್ರಕಟಿಸಿರುವುದು ಹಲವರ ಕೋಪಕ್ಕೆ ಕಾರಣವಾಗಿದೆ.

'ನಮ್ಮ ಬಾಪೂಜಿ: ಮಿನುಗು ನೋಟ' ಎಂಬ ಹೆಸರಿನಲ್ಲಿ ಪ್ರಕಟವಾದ ಈ ಕೈಪಿಡಿಯನ್ನು ಒಡಿಶಾ ರಾಜ್ಯದ 'ಶಾಲಾ ಮತ್ತು ಸಮೂಹ ಶಿಕ್ಷಣ ಇಲಾಖೆ ಸಿದ್ದಪಡಿಸಿದೆ. 1948ರ ಜನವರಿ 30 ರಂದು ದೆಹಲಿಯ ಬಿರ್ಲಾ ಹೌಸ್‌ನಲ್ಲಿ ಉಂಟಾದ ಅನಿರೀಕ್ಷಿತ ಕಾರಣಗಳಿಂದ ಗಾಂಧಿ ಸಾವಿಗೀಡಾದರು ಎಂದು ಈ ಕೈಪಿಡಿಯಲ್ಲಿ ಹೇಳಲಾಗಿದೆ.

ಈ ಕೈಪಿಡಿಯಲ್ಲಿ ಗಾಂಧಿ ಅವರ ಸಂದೇಶಗಳು, ಗಾಂಧಿ ಮತ್ತು ಒಡಿಶಾ ನಡುವಿನ ಸಂಬಂಧಗಳ ಬಗ್ಗೆಯೂ ತಿಳಿಸಲಾಗಿದೆ. ಕಳೆದ ಅಕ್ಟೋಬರ್‌ 2ರ 150ನೇ ಗಾಂಧಿ ಜಯಂತಿಯಂದು ಒಡಿಶಾದ ಎಲ್ಲ ಸರಕಾರಿ ಶಾಲೆಗಳಿಗೆ ಈ ಕೈಪಿಡಿಯನ್ನು ವಿತರಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com