
ಮಿಗ್-29 ಯುದ್ಧ ವಿಮಾನ
ಪಣಜಿ: ಭಾರತೀಯ ನೌಕಾಪಡೆಯ ಮಿಗ್ ತರಬೇತಿ ವಿಮಾನ ಗೋವಾದ ಗ್ರಾಮವೊಂದರಲ್ಲಿ ಶನಿವಾರ ಬೆಳಗ್ಗೆ ಅಪ್ಪಳಿಸಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದಲ್ಲಿದ್ದ ಇಬ್ಬರೂ ಪೈಲಟ್ ಗಳು ಸುರಕ್ಷಿತವಾಗಿದ್ದಾರೆ ಎಂದು ಗೋವಾ ವಿಭಾಗದ ಭಾರತೀಯ ನೌಕಾಪಡೆ ಅಧಿಕಾರಿ ರೇರ್ ಅಡ್ಮರಲ್ ಫಿಲಿಪೊಸ್ ಜಾರ್ಜ್ ಪೈನುಮೂಟಿಲ್ ತಿಳಿಸಿದ್ದಾರೆ.
ದುರ್ಘಟನೆ ನಡೆಯುವ ಹೊತ್ತಿಗೆ ವಿಮಾನ ಎಂದಿನಂತೆ ತರಬೇತಿ ಕಾರ್ಯದಲ್ಲಿ ನಿರತವಾಗಿತ್ತು. ಗೋವಾದಲ್ಲಿನ ದಬೋಲಿಮ್ ಹತ್ತಿರ ಐಎನ್ಎಸ್ ಹನ್ಸಾಗೆ ತರಬೇತಿ ವಿಮಾನ ಸೇರಿಕೊಂಡಿದೆ.