ಸಚಿವೆ ಸ್ಮೃತಿ ಇರಾನಿ ತಲ್ವಾರ್ ಡ್ಯಾನ್ಸ್ ವೈರಲ್

ಸಚಿವೆ ಸ್ಮೃತಿ ಇರಾನಿ ರಾಜಕೀಯಕ್ಕೂ ಬರುವ ಮೊದಲು ಕಿರುತೆರೆಯಲ್ಲಿ ನಾಯಕಿಯಾಗಿ ಮಿಂಚಿದವರು. ಮೆಗಾ ಧಾರಾವಾಹಿಯ ನಟಿಯಾಗಿ ಅಭಿನಯಿಸಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಅವರು ತಮ್ಮ ಖ್ಯಾತಿಯನ್ನೇ ಬಳಸಿಕೊಂಡು ಚುನಾವಣೆಯಲ್ಲಿ ಗೆಲುವು ಸಾಧಿಸಿದವರು.

Published: 16th November 2019 01:54 PM  |   Last Updated: 16th November 2019 01:56 PM   |  A+A-


Smriti Irani

ಸ್ಮೃತಿ ಇರಾನಿ

Posted By : Shilpa D
Source : ANI

ಗುಜರಾತ್ : ಕೇಂದ್ರ ಸಚಿವೆ ರಾಜಕೀಯಕ್ಕೂ ಬರುವ ಮೊದಲು ಕಿರುತೆರೆಯಲ್ಲಿ ನಾಯಕಿಯಾಗಿ ಮಿಂಚಿದವರು. ಮೆಗಾ ಧಾರಾವಾಹಿಯ ನಟಿಯಾಗಿ ಅಭಿನಯಿಸಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಅವರು ತಮ್ಮ ಖ್ಯಾತಿಯನ್ನೇ ಬಳಸಿಕೊಂಡು ಚುನಾವಣೆಯಲ್ಲಿ ಗೆಲುವು ಸಾಧಿಸಿದವರು.

ಸ್ಮೃತಿ ಇರಾನಿ ಅವರು ಗುಜರಾತಿನ ಭಾವನನಗರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಖಡ್ಗ ಹಿಡಿದು ಡ್ಯಾನ್ಸ್ ಮಾಡಿದ್ದಾರೆ.

ಶುಕ್ರವಾರ ಆಯೋಜನೆ ಮಾಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಸ್ಮೃತಿ ಇರಾನಿ ಅವರು, ಮಕ್ಕಳ ಜೊತೆ ಗುಜರಾತಿನ ಸಂಪ್ರಾದಾಯಿಕ ನೃತ್ಯ ಪ್ರಕಾರವಾದ ತಲ್ವಾರ್ ರಾಸ್‍ನ್ನು ಎರಡು ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಲ್ವಾರ್ ರಾಸ್ ಕುಣಿತವು ಸಾಂಪ್ರದಾಯಿಕ ಜಾನಪದ ನೃತ್ಯವಾಗಿದ್ದು, ಇದು ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ಜನಪ್ರಿಯವಾಗಿದೆ. ಶ್ರೀ ಸ್ವಾಮಿನಾರಾಯಣ ಗುರುಕುಲ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಕೇಂದ್ರ ಜವಳಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಭಾಗವಹಿಸಿ ಮಕ್ಕಳ ಜೊತೆ ಖಡ್ಗ ಹಿಡಿದು ಡ್ಯಾನ್ಸ್ ಮಾಡಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp