ಅಯೋಧ್ಯೆ ರಾಮಜನ್ಮಭೂಮಿ ತೀರ್ಪು ಪ್ರಕಟಿಸಿದ್ದ ನ್ಯಾ.ಅಬ್ದುಲ್ ನಜೀರ್ ಗೆ ಪಿಎಫ್ಐ ನಿಂದ ಜೀವ ಬೆದರಿಕೆ ಹಿನ್ನೆಲೆ ಝೆಡ್ ಪ್ಲಸ್ ಭದ್ರತೆ

ಅಯೋಧ್ಯೆ ರಾಮಜನ್ಮಭೂಮಿ ತೀರ್ಪನ್ನು ಪ್ರಕಟಿಸಿದ್ದ ಪಂಚಸದಸ್ಯ ಪೀಠದಲ್ಲಿದ್ದ ನ್ಯಾ. ಅಬ್ದುಲ್ ನಜೀರ್ ಅವರಿಗೆ ಪಿಎಫ್ಐ ನಿಂದ ಬೆದರಿಕೆ ಬಂದಿದೆ. 

Published: 17th November 2019 09:04 PM  |   Last Updated: 17th November 2019 09:04 PM   |  A+A-


Posted By : Srinivas Rao BV
Source : ANI

ನವದೆಹಲಿಛ ಅಯೋಧ್ಯೆ ರಾಮಜನ್ಮಭೂಮಿ ತೀರ್ಪನ್ನು ಪ್ರಕಟಿಸಿದ್ದ ಪಂಚಸದಸ್ಯ ಪೀಠದಲ್ಲಿದ್ದ ನ್ಯಾ. ಅಬ್ದುಲ್ ನಜೀರ್ ಅವರಿಗೆ ಪಿಎಫ್ಐ ನಿಂದ ಬೆದರಿಕೆ ಬಂದಿದೆ. 

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯಿಂದ ನ್ಯಾಯಮೂರ್ತಿಗಳಿಗೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಅವರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಝೆಡ್ ಶ್ರೇಣಿಯ ಭದ್ರತೆಯನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 

ನ್ಯಾಯಾಧೀಶರಿಗೆ ಭದ್ರತೆ ಒದಗಿಸುವ ಸಂಬಂಧ ಕೇಂದ್ರ ಗೃಹ ಇಲಾಖೆ ಕೇಂದ್ರ ಮೀಸಲು ಪೊಲೀಸ್ ಪಡೆ ಹಾಗೂ ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡಿದ್ದು, ಪಿಎಫ್ಐ ಹಾಗೂ ಇತರ ಸಂಘಟನೆಗಳಿಂದ ಅವರಿಗೆ ಜೀವ ಬೆದರಿಕೆ ಇರುವುದರ ಬಗ್ಗೆ ಎಚ್ಚರಿಸಿದೆ. 

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp