92 ವರ್ಷದ ತಾಯಿಗೆ ನಮಸ್ಕಾರ; ಇನ್ನೂ ಹಲವು ವಿಶೇಷತೆಗಳಿಗೆ ಸಾಕ್ಷಿಯಾದ ಸಿಜೆಐ ಬೊಬ್ಡೆ ಪದಗ್ರಹಣ ಕಾರ್ಯಕ್ರಮ! 

ಸುಪ್ರೀಂ ಕೋರ್ಟ್ ನ 47ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿರುವ  ಅರವಿಂದ್ ಬೊಬ್ಡೆ ಕಾರ್ಯಕ್ರಮದ ವೇಳೆ ತಮ್ಮ ತಾಯಿಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. 
92 ವರ್ಷದ ತಾಯಿಗೆ ನಮಸ್ಕಾರ; ಇನ್ನೂ ಹಲವು ವಿಶೇಷತೆಗಳಿಗೆ ಸಾಕ್ಷಿಯಾದ ಸಿಜೆಐ ಬೊಬ್ಡೆ ಪದಗ್ರಹಣ ಕಾರ್ಯಕ್ರಮ!
92 ವರ್ಷದ ತಾಯಿಗೆ ನಮಸ್ಕಾರ; ಇನ್ನೂ ಹಲವು ವಿಶೇಷತೆಗಳಿಗೆ ಸಾಕ್ಷಿಯಾದ ಸಿಜೆಐ ಬೊಬ್ಡೆ ಪದಗ್ರಹಣ ಕಾರ್ಯಕ್ರಮ!

ಪದಗ್ರಹಣ ಕಾರ್ಯಕ್ರಮದಲ್ಲಿ 92 ವರ್ಷ ವಯಸ್ಸಿನ ತಾಯಿಯ ಆಶೀರ್ವಾದ ಪಡೆದ ಸಿಜೆಐ ಎಎಸ್ ಬೊಬ್ಡೆ

ನವದೆಹಲಿ: ಸುಪ್ರೀಂ ಕೋರ್ಟ್ ನ 47ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿರುವ  ಅರವಿಂದ್ ಬೊಬ್ಡೆ ಕಾರ್ಯಕ್ರಮದ ವೇಳೆ ತಮ್ಮ ತಾಯಿಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. 

ಬೊಬ್ಡೆ ಅವರ ತಾಯಿಗೆ 92 ವರ್ಷ ವಯಸ್ಸಾಗಿದ್ದು, ಮಗನ ಸಿಜೆಐ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬೊಬ್ಡೆ ಅವರ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೊಬ್ಡೆ ಅವರ ಕಾಲಾವಧಿ 18 ತಿಂಗಳ ಕಾಲ ಇರಲಿದೆ. 

ಸಿಜೆಐ ಪದಗ್ರಹಣ ಕಾರ್ಯಕ್ರಮ ಇನ್ನೂ ಕೆಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಇದೇ ಮೊದಲ ಬಾರಿಗೆ ಸಿಜೆಐ ಬೊಬ್ಡೆ ನೇತೃತ್ವದ, ನ್ಯಾ.ಬಿಆರ್ ಗವಾಯಿ, ನ್ಯಾ.ಸೂರ್ಯಕಾಂತ್ ಅವರಿದ್ದ ಪೀಠ, ಜಮಾಯ್ಕಾದ ಮುಖ್ಯನ್ಯಾಯಮೂರ್ತಿ ಬ್ರಿಯಾನ್ ಸೈಕ್ಸ್ ಹಾಗೂ ಭೂತಾನ್ ನ ಸುಪ್ರೀಂ ಕೋರ್ಟ್ ನ ಅತಿ ಹಿರಿಯ ನ್ಯಾಯಮೂರ್ತಿ ಕುಯೆನ್ಲೆ ತ್ಸೆರಿಂಗ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com