ಚಳಿಗಾಲ ಅಧಿವೇಶನ: ವಿಪಕ್ಷ ಸಾಲಿನಲ್ಲಿ ಶಿವಸೇನೆಗೆ ಸೀಟು- ಬಿಜೆಪಿ ವಿರುದ್ಧ ಹರಿಹಾಯ್ದ ಸಂಜಯ್ ರಾವತ್

ಸಂಸತಿನಲ್ಲಿ ಚಳಿಗಾಲ ಅಧಿವೇಶನ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಸಾಲಿನಲ್ಲಿ ಶಿವಸೇನೆ ಸಂಸದರಿಗೆ ಸೀಟು ನೀಡಿರುವುದಕ್ಕೆ ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಬಿಜೆಪಿ ವಿರುದ್ಧ ಸೋಮವಾರ ತೀವ್ರವಾಗಿ ಕಿಡಿಕಾರಿದ್ದಾರೆ. 
ಶಿವಸೇನೆ ನಾಯಕ ಸಂಜಯ್ ರಾವತ್
ಶಿವಸೇನೆ ನಾಯಕ ಸಂಜಯ್ ರಾವತ್

ನವದೆಹಲಿ: ಸಂಸತಿನಲ್ಲಿ ಚಳಿಗಾಲ ಅಧಿವೇಶನ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಸಾಲಿನಲ್ಲಿ ಶಿವಸೇನೆ ಸಂಸದರಿಗೆ ಸೀಟು ನೀಡಿರುವುದಕ್ಕೆ ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಬಿಜೆಪಿ ವಿರುದ್ಧ ಸೋಮವಾರ ತೀವ್ರವಾಗಿ ಕಿಡಿಕಾರಿದ್ದಾರೆ. 

ಎನ್'ಡಿಎ ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಕೆಲವರು ತಮ್ಮಷ್ಟಕ್ಕೆ ತಾವೇ ತಮ್ಮನ್ನು ದೇವರೆಂದುಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವವನ್ನು ಕಾಪಾಡಬೇಕು. ಒಬ್ಬನು ತನ್ನನ್ನು ತಾನೇ ದೇವರೆಂದು ಪರಿಗಣಿಸಬಾರದು. ಅಹಂ ಹಾಗೂ ಗರ್ವದಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಪರಿಸ್ಥಿತಿ ಸೃಷ್ಟಿಯಾಗಿದೆ. ಎನ್'ಡಿಎ ಸ್ಥಾಪಿತಗೊಳ್ಳುವಲ್ಲಿ ನಾವೂ ಒಬ್ಬರಾಗಿದ್ದೇವೆ. ಎನ್'ಡಿಎ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಕೆಲವರು ಕೆಲವೊಮ್ಮೆ ತಮ್ಮನ್ನು ತಾವು ದೇವರೆಂದುಕೊಂಡು ಬಿಡುತ್ತಿದ್ದಾರೆಂದು ಹೇಳಿದ್ದಾರೆ. 

ಒಪ್ಪಂದಕ್ಕೆ ವಿರುದ್ಧವಾಗಿ ನೀವು ನಿರ್ಧಾರ ತೆಗೆದುಕೊಂಡರೆ ಅದು ಸರಿಯಲ್ಲ. ಎನ್'ಡಿಎ ಸ್ಥಾಪನೆಗೊಳ್ಳುವಲ್ಲಿ ಬಾಬಾಸಾಹೇಬ್ ಠಾಕ್ರೆ ಕೂಡ ನಾಲ್ವರಲ್ಲಿ ಒಬ್ಬರಾಗಿದ್ದರು. ಸಾಕಷ್ಟು ಸಂದರ್ಭದಲ್ಲಿ ಎನ್'ಡಿಎಯನ್ನು ನಾವು ರಕ್ಷಿಸಿದ್ದೇವೆ. ಎಂದಿಗೂ ಎನ್'ಡಿಎ ಕೈಬಿಟ್ಟಿಲ್ಲ. ಆದರೆ, ಇಂದು ಅವರು ತಮ್ಮನ್ನು ತಾವು ದೇವರೆಂದುಕೊಳ್ಳುತ್ತಿದ್ದಾರೆ. ಎನ್'ಡಿಎಯಿಂದ ನೀವು ಶಿವಸೇನೆಯನ್ನು ತೆಗೆದುಹಾಕಿದ ಮಾತ್ರಕ್ಕೆ ನೀವೇನು ದೇವರಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ. 

ಬಿಜೆಪಿಯ ಈ ವರ್ತನೆ ಕೆಲಸಕ್ಕೆ ಬರುವುದಿಲ್ಲ. ಸಂಸತ್ತಿನಲ್ಲಿ ಎಲ್ಲಿ ಕುಳಿತುಕೊಳ್ಳುತ್ತೇವೆ ಎಂಬುದು ಮುಖ್ಯವಲ್ಲ. ದೇಶದ ಅಭಿವೃದ್ಧಿಗೆ ಶಿವಸೇನೆ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಮಹಾರಾಷ್ಟ್ರದಲ್ಲಿ ಎನ್'ಸಿಪಿ, ಕಾಂಗ್ರೆಸ್ ಜೊತೆಗಿನ ಮೈತ್ರಿ ಕುರಿತ ಪ್ರಶ್ನೆಗೆ ಉತ್ತರಿಸಿರುವ ಅವರು, ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಖಚಿತ. ಮುಖ್ಯಮಂತ್ರಿ ಶಿವಸೇನೆಯಿಂದಲೇ ಆಗುತ್ತಾರೆ. ಸಾಮಾನ್ಯ ಕನಿಷ್ಟ ಯೋಜನೆಗಳೊಂದಿಗೆ ಹಾಗೂ ಒಪ್ಪಂದಗಳ ನಡುವೆ ಸರ್ಕಾರ ನಡೆಯಲಿದೆ ಎಂದಿದ್ದಾರೆ. 

ಮಹಾರಾಷ್ಟ್ರ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿದ್ದು, ಸ್ಥಿರ ಸರ್ಕಾರ ರಚನೆಗೊಳ್ಳಲಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಬಹುಮತ ಪಡೆದುಕೊಂಡಿದೆ. ಆದರೆ, ಅಧಿಕಾರ ಹಂಚಿಕೆಯಲ್ಲಿ ಮೂಡಿಬಂದ ವೈಮನಸ್ಸಿನಿಂದ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com