ನವ ಭಾರತದಲ್ಲಿ ಲಂಚ, ಅಕ್ರಮ ಹಣಗಳು ಚುನಾವಣಾ ಬಾಂಡ್ ಗಳಾಗಿವೆ: ರಾಹುಲ್ ಗಾಂಧಿ 

ಚುನಾವಣಾ ಬಾಂಡ್ ಗಳನ್ನು ಜಾರಿಗೆ ತರಲು ಸರ್ಕಾರ ಆರ್ ಬಿಐಯ ನಿಯಮವನ್ನು ಮೀರಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನವ ಭಾರತದಲ್ಲಿ ಲಂಚ ಮತ್ತು ಅಕ್ರಮ ಕಮಿಷನ್ ಗಳು ಚುನಾವಣಾ ಬಾಂಡ್ ಗಳಾಗಿವೆ ಎಂದು ಆರೋಪಿಸಿದ್ದಾರೆ. 
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಚುನಾವಣಾ ಬಾಂಡ್ ಗಳನ್ನು ಜಾರಿಗೆ ತರಲು ಸರ್ಕಾರ ಆರ್ ಬಿಐಯ ನಿಯಮವನ್ನು ಮೀರಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನವ ಭಾರತದಲ್ಲಿ ಲಂಚ ಮತ್ತು ಅಕ್ರಮ ಕಮಿಷನ್ ಗಳು ಚುನಾವಣಾ ಬಾಂಡ್ ಗಳಾಗಿವೆ ಎಂದು ಆರೋಪಿಸಿದ್ದಾರೆ.


ಕಪ್ಪು ಹಣ ಬಿಜೆಪಿಯ ಬೊಕ್ಕಸಕ್ಕೆ ಸೇರಲು ಮೋದಿ ಸರ್ಕಾರ ಆರ್ ಬಿಐ ನಿಯಮವನ್ನು ಗಾಳಿಗೆ ತೂರಿ ಚುನಾವಣಾ ಬಾಂಡ್ ಗಳನ್ನು ಜಾರಿಗೆ ತಂದಿದೆ. ಈ ಯೋಜನೆ ಕೂಡಲೇ ತೆಗೆದುಹಾಕುವಂತೆ ಒತ್ತಾಯಿಸಿದೆ ಎಂದು ಕಾಂಗ್ರೆಸ್ ನಿನ್ನೆ ಆಪಾದಿಸಿತ್ತು.
ಈ ಬಗ್ಗೆ ನಿನ್ನೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನವ ಭಾರತದಲ್ಲಿ ಲಂಚ ಮತ್ತು ಅಕ್ರಮ ಕಮಿಷನ್ ಗಳು ಚುನಾವಣಾ ಬಾಂಡ್ ಗಳಾಗಿವೆ ಎಂದು ಹೇಳಿದ್ದಾರೆ.


ಕಪ್ಪು ಹಣ ಬಿಜೆಪಿ ಬೊಕ್ಕಸಕ್ಕೆ ಹೋಗಲು ರಾಷ್ಟ್ರೀಯ ಭದ್ರತೆಯನ್ನು ಬದಿಗೊತ್ತಿ ಆರ್ ಬಿಐ ನಿಯಮಗಳನ್ನು ಅಲ್ಲಗಳೆದು ಬಿಜೆಪಿ ಚುನಾವಣಾ ಬಾಂಡ್ ಗಳನ್ನು ಜಾರಿಗೆ ತಂದಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಈ ಹಿಂದೆ ವಾಗ್ದಾಳಿ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com