ಶರದ್ ಪವಾರ್ ಹೇಳಿಕೆ ಅರ್ಥ ಮಾಡಿಕೊಳ್ಳಲು ನೂರು ಜನ್ಮ ಹುಟ್ಟಿ ಬರಬೇಕು: ಸಂಸದ ಸಂಜಯ್ ರಾವತ್

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಹಗ್ಗ ಜಗ್ಗಾಟ ಇನ್ನು ಮುಂದುವರೆದಿದ್ದು ಎನ್ಸಿಪಿ ಬೆಂಬಲದೊಂದಿಗೆ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದ್ದ ಶಿವಸೇನೆಗೆ ಪಿಕಲಾಟ ಶುರುವಾಗಿದೆ. ಈ ಮಧ್ಯೆ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಎನ್ಸಿಪಿ ಮುಖಂಡ ಶರದ್ ಪವಾರ್ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಲು 100 ಜನ್ಮ ಎತ್ತಿ ಬರಬೇಕು ಎಂದರು.
ಶರದ್ ಪವಾರ್-ಸಂಜಯ್ ರಾವತ್
ಶರದ್ ಪವಾರ್-ಸಂಜಯ್ ರಾವತ್

ನವದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಹಗ್ಗ ಜಗ್ಗಾಟ ಇನ್ನು ಮುಂದುವರೆದಿದ್ದು ಎನ್ಸಿಪಿ ಬೆಂಬಲದೊಂದಿಗೆ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದ್ದ ಶಿವಸೇನೆಗೆ ಪಿಕಲಾಟ ಶುರುವಾಗಿದೆ. ಈ ಮಧ್ಯೆ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಎನ್ಸಿಪಿ ಮುಖಂಡ ಶರದ್ ಪವಾರ್ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಲು 100 ಜನ್ಮ ಎತ್ತಿ ಬರಬೇಕು ಎಂದರು.

ಮಾಧ್ಯಮಗಳ ಜೊತೆ ಮಾತನಾಡಿದ ಸಂಜಯ್ ರಾವತ್ ಅವರು ಮಹಾರಾಷ್ಟ್ರದಲ್ಲಿ ಶಿವಸೇನೆ ಶೀಘ್ರದಲ್ಲಿಯೇ ಸರ್ಕಾರ ರಚನೆ ಮಾಡಲಿದೆ. ರಚನೆಗೊಳ್ಳುವ ಸರ್ಕಾರ ಬಲ, ಸ್ಥಿರ ಹಾಗೂ ಪರಿಣಾಮಕಾರಿ ಸರ್ಕಾರವಾಗಲಿದೆ. ಉದ್ಧವ್ ಠಾಕ್ರೆಯವರೇ ಸರ್ಕಾರವನ್ನು ಮುನ್ನಡೆಸಬೇಕೆಂದು ನಾವು ಇಚ್ಛಿಸಿದ್ದೇವೆಂದು ಹೇಳಿದ್ದಾರೆ. 

ಡಿಸೆಂಬರ್ ಮೊದಲ ವಾರದಲ್ಲೇ ಸರ್ಕಾರ ರಚನೆ ಮಾಡುತ್ತೇವೆ. ಯಾರು ಯೋಚನೆ ಮಾಡುವ ಸಂಗತಿ ಇಲ್ಲ ಎಂದರು.

ಶಿವಸೇನೆ ನೇತೃತ್ವದ ಸರ್ಕಾರಕ್ಕೆ ವಿಧಾನಸಭೆಯಲ್ಲಿ 170 ಶಾಸಕರ ಬೆಂಬಲವಿರಲಿದೆ. ದೇಶದಲ್ಲಿಯೇ ಶಿವಸೇನೆ ಅತ್ಯಂತ ದೊಡ್ಡ ಪಕ್ಷವಾಗಿದೆ. ನಮ್ಮ ಪಕ್ಷ 18 ಸಂಸದರನ್ನು ಹೊಂದಿದ್ದು, ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡುತ್ತೇವೆ. ನಮ್ಮೊಂದಿಗೆ ಯಾರೂ ಮಧ್ಯಪ್ರವೇಶ ಮಾಡುವ ಅಗತ್ಯವೇ ಇಲ್ಲ. ನಮಗೆ 170 ಶಾಸಕರ ಬೆಂಬಲವಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com