ನ. 22ರಂದು ಶಿವಸೇನೆ ಶಾಸಕರು, ನಾಯಕರ ಸಭೆ: ಸರ್ಕಾರ ರಚನೆ ಕುರಿತು ಮಾತುಕತೆ 

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕುರಿತಂತೆ ಕಾಂಗ್ರೆಸ್ ಹಾಗೂ ಎನ್ ಸಿಪಿ ಎಚ್ಚರಿಕೆಯ ನಡೆ ಅನುಸರಿಸುತ್ತಿರುವಂತೆಯೇ ನವೆಂಬರ್ 22 ರಂದು ಶಿವಸೇನಾ ಶಾಸಕರು ಹಾಗೂ ನಾಯಕರ ಸಭೆಯನ್ನು ಕರೆಯಲಾಗಿದೆ.
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕುರಿತಂತೆ ಕಾಂಗ್ರೆಸ್ ಹಾಗೂ ಎನ್ ಸಿಪಿ ಎಚ್ಚರಿಕೆಯ ನಡೆ ಅನುಸರಿಸುತ್ತಿರುವಂತೆಯೇ ನವೆಂಬರ್ 22 ರಂದು ಶಿವಸೇನಾ ಶಾಸಕರು ಹಾಗೂ ನಾಯಕರ ಸಭೆಯನ್ನು ಕರೆಯಲಾಗಿದೆ.

ಪ್ರಸ್ತುತ ರಾಷ್ಟ್ರಪತಿ ಆಡಳಿತವಿರುವ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕುರಿತ ಪ್ರಮುಖ ಮೂರು ಪ್ರಮುಖ ಬಿಜೆಪಿಯೇತರ ರಾಜಕೀಯ ಪಕ್ಷಗಳು ಪ್ರಯತ್ನ ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಉದ್ದವ್ ಠಾಕ್ರೆ ಮಾತನಾಡುವ ಸಾಧ್ಯತೆ ಇದೆ. 

ನವೆಂಬರ್ 22ರಂದು ಮುಂಬೈಯಲ್ಲಿ ನಡೆಯಲಿರುವ ಪಕ್ಷದ ಶಾಸಕರು ಹಾಗೂ ಹಿರಿಯ ಮುಖಂಡರ ಸಭೆಯಲ್ಲಿ ಉದ್ದವ್ ಠಾಕ್ರೆ ಮಾತನಾಡಲಿದ್ದಾರೆ ಎಂದು ಸೇನಾ ಮುಖಂಡರೊಬ್ಬರು ತಿಳಿಸಿದ್ದಾರೆ. 

ಮುಂದೆ ಅನುಸರಿಸಬೇಕಾದ ಕ್ರಮದ ಕುರಿತಂತೆ ನೂತನ ಶಾಸಕರೊಂದಿಗೆ ಉದ್ದವ್ ಠಾಕ್ರೆ ಸಂವಾದ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ , ಎನ್ ಸಿಪಿ ಹಾಗೂ ಶಿವಸೇನೆಯ ನಾಯಕರು ದೆಹಲಿ ಹಾಗೂ ಮುಂಬೈಯಲ್ಲಿ ಅನೇಕ ಸುತ್ತಿನ ಸಭೆಗಳನ್ನು ನಡೆಸಿದ್ದರೂ ಸೇನಾ ನೇತೃತ್ವದಲ್ಲಿನ ಸರ್ಕಾರ ರಚನೆಯಾಗುವ ಸಾಧ್ಯತೆ ಕಾಣುತ್ತಿಲ್ಲ. 

ಇಂದಿರಾ ಗಾಂಧಿ ಜನ್ಮ ದಿನದ ಅಂಗವಾಗಿ ಇಂದು ನಡೆಯಬೇಕಾದ ಕಾಂಗ್ರೆಸ್ ನಾಯಕರ ಜೊತೆಗಿನ ಸಭೆಯನ್ನು ರದ್ದುಗೊಳಿಸಲಾಗಿದೆ. ಬುಧವಾರ ಸಭೆ ನಡೆಸಲು ಕಾಂಗ್ರೆಸ್ ಮುಖಂಡರು ಮನವಿ ಮಾಡಿಕೊಂಡಿದ್ದಾರೆ ಎಂದು ಎನ್ ಸಿಪಿ ಮುಖಂಡ ನವಾಬ್ ಮಲ್ಲಿಕ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com