'ಮಹಾ' ಟ್ವಿಸ್ಟ್: ಶಿವಸೇನೆ-ಬಿಜೆಪಿ ನಡುವೆ ಹೊಸ ಸೂತ್ರ..! ರಚನೆಯಾಗುತ್ತಾ ಮೈತ್ರಿ ಸರ್ಕಾರ?

ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ಸಂಬಂಧ ಸುಮಾರು 25 ದಿನಗಳಿಂದ ನಡೆದಿರುವ ರಾಜಕೀಯ ಬಿಕ್ಕಟ್ಟು ಸೋಮವಾರ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ರಾಮದಾಸ್ ಅತಾವಳೆ
ರಾಮದಾಸ್ ಅತಾವಳೆ

ನವದೆಹಲಿ: ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ಸಂಬಂಧ ಸುಮಾರು 25 ದಿನಗಳಿಂದ ನಡೆದಿರುವ ರಾಜಕೀಯ ಬಿಕ್ಕಟ್ಟು ಸೋಮವಾರ ಹೊಸ ತಿರುವು ಪಡೆದುಕೊಳ್ಳುತ್ತಿದೆ.

ಅತ್ತ .. ಎನ್ಸಿಪಿ  ಪರಮೋಚ್ಛ ನಾಯಕ ಶರದ್ ಪವಾರ್,  ಕಾಂಗ್ರೆಸ್  ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ದೆಹಲಿಯಲ್ಲಿ ಮಹಾರಾಷ್ಟ್ರದ ಬೆಳವಣಿಗೆಗಳ ಬಗ್ಗೆ ನಿರ್ಣಾಯಕ ಸಭೆ ನಡೆಸಿದರೆ, ಇತ್ತ... ಬಿಜೆಪಿ ಹಾಗೂ ಶಿವಸೇನೆ ನಡುವೆ ಸರ್ಕಾರ ರಚಿಸುವ ಸಂಬಂಧ ಮೂರು ವರ್ಷ ಬಿಜೆಪಿ, ಎರಡು ವರ್ಷ ಶಿವಸೇನೆ ಎಂಬ ಹೊಸ ಸೂತ್ರ ಹೊರಬಿದ್ದಿದೆ...!

ಕೇಂದ್ರ ಸಚಿವ ರಾಂದಾಸ್ ಅತಾವಳೆ ಈ ಕುರಿತು ತೀವ್ರ ಆಸಕ್ತಿದಾಯಕ ಅಂಶಗಳನ್ನು ಹೊರಗೆಡವಿದ್ದಾರೆ. ಬಿಜೆಪಿ- ಶಿವಸೇನ ನಡುವೆ ಮೈತ್ರಿಕೂಟ ಸರ್ಕಾರ ರಚಿಸುವ ತಮ್ಮ ಸೂತ್ರಕ್ಕೆ ಶಿವಸೇನಾ ನಾಯಕ ಸಂಜಯ್ ರಾವತ್ ಸಕಾರಾತ್ಮಕವಾಗಿ  ಸ್ಪಂದಿಸಿದ್ದು, ಈ ಪ್ರಸ್ತಾವನೆ ಸಂಬಂಧ ಬಿಜೆಪಿ ಜೊತೆ ಸಂಪರ್ಕ ಸಾಧಿಸುವುದಾಗಿ ಹೇಳಿದ್ದಾರೆ ಎಂದು ಕೇಂದ್ರ ಸಚಿವ ಅತಾವಳೆ ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ನಂತರ, ಶರದ್ ಪವಾರ್ ಮಾತನಾಡಿ, ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ತಾವು ಮಾತುಕತೆ ನಡೆಸಿದ್ದಾಗಿ, ಆದರೆ ಶಿವಸೇನೆಯೊಂದಿಗೆ ಸರ್ಕಾರ ರಚನೆಯ ವಿಷಯ ಮಾತುಕತೆಯ ವೇಳೆ  ಪ್ರಸ್ತಾಪವಾಗಲಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಎನ್ ಸಿಪಿ ಮುಖಂಡರು ಮಾತುಕತೆ ನಂತರದ ಪ್ರಗತಿಯನ್ನು ತಮಗೆ ವಿವರಿಸಲಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com