ಗಾಂಧಿ ಕುಟುಂಬದ ಎಸ್'ಪಿಜಿ ಭದ್ರತೆ ವಾಪಸ್ ಹಿಂದೆ ಯಾವುದೇ ರಾಜಕೀಯ ಇಲ್ಲ: ಕೇಂದ್ರ ಸ್ಪಷ್ಟನೆ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ವಿಶೇಷ ರಕ್ಷಣಾ ಪಡೆ (ಎಸ್'ಪಿಜಿ) ಒದಗಿಸುತ್ತಿದ್ದ ಭದ್ರತೆ ಹಿಂಪಡೆದರ ವಿರುದ್ಧ ಯಾವುದೇ ರಾಜಕೀಯ ಇಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ವಿಶೇಷ ರಕ್ಷಣಾ ಪಡೆ (ಎಸ್'ಪಿಜಿ) ಒದಗಿಸುತ್ತಿದ್ದ ಭದ್ರತೆ ಹಿಂಪಡೆದರ ವಿರುದ್ಧ ಯಾವುದೇ ರಾಜಕೀಯ ಇಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ. 

ಗಾಂಧಿ ಕುಟುಂಬಕ್ಕೆ ನೀಡಲಾಗುತ್ತಿದ್ದ ಭದ್ರತೆಯನ್ನು ಹಿಂಪಡೆದ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ರಾಜ್ಯಸಭೆಯಲ್ಲಿ ತೀವ್ರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. 

ಸದನದ ಬಾವಿಗೆ ಇಳಿದ ಕಾಂಗ್ರೆಸ್ ನಾಯಕರು ಪ್ರತೀಕಾರದ ರಾಜಕಾರಣವನ್ನು ದಯಮಾಡಿ ನಿಲ್ಲಿಸಿ. ಸರ್ವಾಧಿಕಾರ ಕೊನೆಗಾಣಿಸಿ, ನಮಗೆ ನ್ಯಾಯಬೇಕೆಂದು ಕೂಗುತ್ತಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಕ್ರಿಯೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. 

ಈ ಹಿನ್ನೆಲೆಯಲ್ಲಿ ಕಲಾಪದ ವೇಳೆ ಮಾತನಾಡಿರುವ ಬಿಜೆಪಿ ನಾಯಕ ಜೆಪಿ. ನಡ್ಡಾ ಅವರು, ಭದ್ರತೆ ಹಿಂಪಡೆದುದ್ದರಲ್ಲಿ ಯಾವುದೇ ರಾಜಕೀಯವಿಲ್ಲ. ಗೃಹ ಸಚಿವಾಲಯ ತನ್ನದ ಆದ ನಿಯಮ ಹಾಗೂ ಶಿಷ್ಟಾಚಾರವನ್ನು ಹೊಂದಿದೆ. ರಾಜಕೀಯವಾಗಿ ಏನನ್ನೂ ಮಾಡಿಲ್ಲ. ಗೃಹ ಸಚಿವಾಲಯದ ನಿಯಮಾವಳಿಗಳಂತೆ ಕ್ರಮ ಕೈಗ1ಳ್ಳಲಾಗಿದೆ. ಬೆದರಿಕೆಯ ಅನುಗುಣವಾಗಿ ಭದ್ರೆತೆಯನ್ನು ನೀಡುವುದು ಹಾಗೂ ಹಿಂಪಡೆಯುವುದನ್ನು ಮಾಡಲಾಗುತ್ತದೆ ಎಂದು ಹೇಳಿದ್ದಾರೆ. 

ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಲಂ (ಎಲ್'ಟಿಟಿಇ) 1991 ಮೇ.21 ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿತ್ತು. ಇದೀಗ ಎಲ್'ಟಿಟಿಇ ಅಂತ್ಯಗೊಂಡಿದ್ದು, ಗಾಂಧಿ ಕುಟುಂಬಕ್ಕಿದ್ದ ಬೆದರಿಕೆಗಳು ದೂರಾಗಿವೆ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿಯವರು ಹೇಳಿದ್ದಾರೆ. 

1991ರಿಂದ ನೆಹರು-ಗಾಂಧಿ ಕುಟುಂಬಕ್ಕೆ ದೊರೆಯುತ್ತಿದ್ದ ಎಸ್'ಪಿಜಿ ಭದ್ರತೆ ಹಿಂಪಡೆದಿದ್ದ ಕೇಂದ್ರ ಸರ್ಕಾರ, ಸಿಆರ್'ಪಿಎಫ್ 100 ಭದ್ರತಾ ಸಿಬ್ಬಂದಿ ಇರುವ ಝಡ್ ಪ್ಲಬ್ ಭದ್ರತೆ ಒದಗಿಸಿತ್ತು. ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com