ಮಹದಾಯಿ ವಿವಾದ: ರಾಜ್ಯಕ್ಕೆ ಶಾಕ್ ನೀಡಿದ ಕೇಂದ್ರ!

ಕರ್ನಾಟಕ್ಕೆ ಬಳಸಾ-ಬಂಡೂರಿ (ಮಹದಾಯಿ) ಯೋಜನೆ ಕೈಗೆತ್ತಿಕೊಳ್ಳಲು ಇತ್ತೀಚೆಗಷ್ಟೇ ತಾನೇ ನೀಡಿದ್ದ ಅನುಮೋದನೆಯ ಮರುಪರೀಶೀಲನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಯೋಜನೆ ಕೈಗೆತ್ತಿಕೊಳ್ಳಲು ತಾನೇ ನೀಡಿದ್ದ ಅನುಮೋದನೆ ಮರುಪರಿಶೀಲನೆಗೆ ಮುಂದಾದ ಕೇಂದ್ರ 


ಪಣಜಿ: ಕರ್ನಾಟಕ್ಕೆ ಬಳಸಾ-ಬಂಡೂರಿ (ಮಹದಾಯಿ) ಯೋಜನೆ ಕೈಗೆತ್ತಿಕೊಳ್ಳಲು ಇತ್ತೀಚೆಗಷ್ಟೇ ತಾನೇ ನೀಡಿದ್ದ ಅನುಮೋದನೆಯ ಮರುಪರೀಶೀಲನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. 

ಈ ಸಂಬಂಧ ಗೋವಾ ಮುಖ್ಯಮಂತ್ರಿಗಳಿಗೆ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜವಡೇಕರ್ ಅವರು ಪತ್ರ ಬರೆದಿದ್ದು, ಪತ್ರದಲ್ಲಿ ಯೋಜನೆಗೆ ನೀಡಲಾಗಿದ್ದ ಅನುಮತಿಯನ್ನು ಮರುಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ಕಳಸಾ-ಬಂಡೂರಿ ಯೋಜನೆಗೆ ಪರಿಸರ ಅನುಮೋದನೆ ನೀಡಿದ ನಿರ್ಧಾರವನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಜವಡೇಕರ್ ಅವರು ತಿಳಿಸಿದ್ದಾರೆ. 

ಕಳಸಾ ಬಂಡೂರು ಕುಡಿಯುವ ನೀರಿನ ಯೋಜನೆಯಾಗಿದ್ದರಿಂದ ಯೋಜನೆ ಕೈಗೆತ್ತಿಕೊಳ್ಳಲು ಅಡ್ಡಿಯಿಲ್ಲ ಎಂದು ಕಳೆದ ತಿಂಗಳು ಕೇಂದ್ರ ಪರಿಸರ ಸಚಿವಾಲಯವು ಕರ್ನಾಟಕ ನೀರಾವರಿ ನಿಗಮಕ್ಕೆ ಪತ್ರ ಬರೆದಿತ್ತು ಹಾಗೂ ಯೋಜನೆ ಅನುಷ್ಠಾನಕ್ಕೆ ಕೆಲ ಷರತ್ತುಗಳನ್ನೂ ವಿಧಿಸಿತ್ತು. ಆದರೆ, ಇದನ್ನು ವಿರೋಧಿಸಿದ್ದ ಗೋವಾ ಸರ್ಕಾರ, ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ದು, ಅನುಮೋದನೆ ರದ್ದುಗೊಳಿಸಬೇಕೆಂದು ಜವಡೇಕರ್ ಅವರಿಗೆ ನ.4 ರಂದು ಮನವಿ ಮಾಡಿಕೊಂಡಿತ್ತು. ಇದಕ್ಕೆ 10 ದಿನಗಳಲ್ಲಿ ಪ್ರತಿಕ್ರಿಯೆ ನೀಡುವುದಾಗಿ ಜವಡೇಕರ್ ಭರವಸೆ ನೀಡಿದ್ದರು. 

ಆ ಪ್ರಕಾರ ನ.18ರಂದು ಗೋವಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಜವಡೇಕರ್ ಅವರು, ಕಳಸಾ-ಬಂಡೂರಿ ಎಂಬುದು ಕೇವಲ ಕುಡಿಯುವ ನೀರಿನ ಯೋಜನೆಯಲ್ಲ. ಹೀಗಾಗಿ ಪರಿಸರ ಸಚಿವಾಲಯವು ಹೆಚ್ಚಿನ ಮರುಪರಾಮರ್ಶೆ ನಡೆಸುವ ಅಗತ್ಯವಿದೆ ಎಂದು ನಿಮ್ಮ ಮನವಿಯಲ್ಲಿ ತಿಳಿಸಿದ್ದೀರಿ. ಹೀಗಾಗಿ ಈ ವಿಚಾರವನ್ನು ಮರುಪರಿಶೀಲಿಸಲು ಸಮಿತಿ ರಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com