ನಾಲ್ಕನೇ ತರಗತಿ ಪರೀಕ್ಷೆ ಬರೆಯುತ್ತಿರುವ 103 ವರ್ಷದ ಅಜ್ಜಿ!

ಓದುವುದಕ್ಕೆ ವಯಸ್ಸಿನ ಮಿತಿಯಿಲ್ಲ ಅನ್ನೋದಕ್ಕೆ ಈ ಸ್ಟೋರಿ ಒಂದು ಉತ್ತಮ ಉದಾಹರಣೆ. 103 ವರ್ಷದ ಅಜ್ಜಿ ನಾಲ್ಕನೇ ತರಗತಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. 
ಭಾಗೀರಥಿ
ಭಾಗೀರಥಿ

ಕೊಲ್ಲಂ: ಓದುವುದಕ್ಕೆ ವಯಸ್ಸಿನ ಮಿತಿಯಿಲ್ಲ ಅನ್ನೋದಕ್ಕೆ ಈ ಸ್ಟೋರಿ ಒಂದು ಉತ್ತಮ ಉದಾಹರಣೆ. 103 ವರ್ಷದ ಅಜ್ಜಿ ನಾಲ್ಕನೇ ತರಗತಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. 

ಕೇರಳ ಸರ್ಕಾರದ ಸಾಕ್ಷರತಾ ಮಿಷನ್ ಹಮ್ಮಿಕೊಂಡಿರುವ ಸಮಾನತೆ ಪರೀಕ್ಷೆಯ ನಾಲ್ಕನೇ ತರಗತಿ ಎಕ್ಸಾಂಗೆ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬದಿಗಿಟ್ಟು 103 ವರ್ಷದ ಭಾಗೀರತಿ ಅಮ್ಮ ಹಾಜರಾಗಿದ್ದಾರೆ. 

ಸದಾ ಅಧ್ಯಯನ ಮಾಡಲು ಮತ್ತು ಜ್ಞಾನವನ್ನು ಪಡೆಯಲು ಹಂಬಲಿಸುತ್ತಿದ್ದ ಭಾಗೀರಥಿ ಅಮ್ಮ, ತಾಯಿ ತೀರಿಕೊಂಡ ನಂತರ ತನ್ನ ಕಿರಿಯ ಸಹೋದರರನ್ನು ನೋಡಿಕೊಳ್ಳಬೇಕಾಗಿದ್ದ ಕಾರಣ ಶಿಕ್ಷಣ ಪಡೆಯುವ ಕನಸನ್ನು ತ್ಯಜಿಸಬೇಕಾಯಿತು. 

ಬಳಿಕ ಅಜ್ಜಿಗೆ 30ರ ವಯಸ್ಸಿನಲ್ಲಿ ತನ್ನ ಗಂಡನನ್ನು ಕಳೆದುಕೊಂಡಾಗ 4 ಹೆಣ್ಣುಮಕ್ಕಳು ಸೇರಿದಂತೆ ತನ್ನ ಆರು ಮಕ್ಕಳನ್ನು ಬೆಳೆಸುವ ಸಂಪೂರ್ಣ ಜವಾಬ್ದಾರಿ ಅವಳ ಹೆಗಲ ಮೇಲೆ ಬಿದ್ದಿತು. ಈ ಹಿನ್ನೆಲೆ ವಿಧಿ ಮತ್ತೊಮ್ಮೆ ಕೈ ಕೊಟ್ಟಿದ್ದು, ಓದುವ ಆಸೆ ಆಸೆಯಾಗಿಯೇ ಇತ್ತು. 

ಕೇರಳ ರಾಜ್ಯ ಸಾಕ್ಷರತಾ ಮಿಷನ್ ಕಾರ್ಯಕ್ರಮದ ಈವರೆಗಿನ ಭಾಗೀರಥಿ ಅಮ್ಮ ಅತ್ಯಂತ ಹಿರಿಯ ಸಮಾನತೆ ವಿದ್ಯಾರ್ಥಿ ಎಂದು ಮಿಷನ್ ನಿರ್ದೇಶಕ ಪಿ ಎಸ್ ಶ್ರೀಲಾ ಮಾಹಿತಿ ನೀಡಿದ್ದಾರೆ.

ಭಾಗೀರಥಿ ಅಮ್ಮನಿಗೆ ಬರವಣಿಗೆಯಲ್ಲಿ ತೊಂದರೆ ಇದ್ದುದರಿಂದ, ಪರಿಸರ, ಗಣಿತ ಮತ್ತು ಮಲಯಾಳಂ ಕುರಿತ 3 ಪ್ರಶ್ನೆಪತ್ರಿಕೆಗಳನ್ನು ಪೂರ್ಣಗೊಳಿಸಲು ಮೂರು ದಿನಗಳನ್ನು ತೆಗೆದುಕೊಂಡಿದ್ದಾರೆ ಹಾಗೂ ಕಿರಿಯ ಮಗಳು ಸಹಾಯ ಮಾಡಿದ್ದಾಳೆ ಎಂದೂ ಮಿಷನ್‌ನ ಸಂಪನ್ಮೂಲ ವ್ಯಕ್ತಿ ವಸಂತ್ ಕುಮಾರ್ ತಿಳಿಸಿದ್ದಾರೆ. 

ಅಜ್ಜಿಗೆ 105 ವರ್ಷ ಆಗಿದ್ದರೂ ಸಹ ಆಕೆ ತೀಕ್ಷ್ಣವಾದ ನೆನಪಿನ ಶಕ್ತಿ ಹೊಂದಿದ್ದು, ಕಣ್ಣಿನ ದೃಷ್ಟಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಲ್ಲ. ಅಮ್ಮ ಚೆನ್ನಾಗಿ ಹಾಡುತ್ತಾರೆ, ಪರೀಕ್ಷೆಗೆ ಹಾಜರಾಗಲು ತುಂಬಾ ಸಂತೋಷ ಪಟ್ಟಿದ್ದರು ಮತ್ತು 9 ನೇ ವಯಸ್ಸಿನಲ್ಲಿ ಮೂರನೇ ತರಗತಿಯಲ್ಲಿದ್ದಾಗ ಶಿಕ್ಷಣವನ್ನು ತೊರೆದ ಬಳಿಕ ಮೊದಲ ಬಾರಿ ಪರೀಕ್ಷೆ ಬರೆಯುತ್ತಿದ್ದ ಹಿನ್ನೆಲೆ ಉತ್ಸುಕರಾಗಿದ್ದಾರೆ ಎಂದು ವಸಂತ್ ಕುಮಾರ್ ಹೇಳಿದ್ದಾರೆ. 

ಅಜ್ಜಿಗೆ 5 ಮಕ್ಕಳಿದ್ದು, 12 ಮೊಮ್ಮಕ್ಕಳು ಮರಿ ಮೊಮ್ಮಕ್ಕಳನ್ನು ಹೊಂದಿದ್ದಾರೆ. ಕಳೆದ ವರ್ಷ ಕೇರಳದ 96 ವರ್ಷದ ಕಾರ್ತಿಯಾಯನಿ ಅಮ್ಮ 100 ಅಂಕಗಳ ಪೈಕಿ 98 ಅಂಕ ಗಳಿಸಿ ಸಾಧನೆ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com