ಛತ್ತೀಸ್ಗಢ: ಐಇಡಿ ಸ್ಫೋಟ, ಸಿಆರ್"ಪಿಎಫ್ ಯೋಧನಿಗೆ ಗಾಯ

ಛತ್ತೀಸ್ಗಢದ ಬಿಜಾಪುರ ಜಿಲ್ಲೆಯ ತರ್ರೆಮ್ ಗ್ರಾಮದಲ್ಲಿ ಐಇಡಿ ಸ್ಫೋಟಗೊಂಡಿದ್ದು, ಓರ್ವ ಸಿಆರ್'ಪಿಎಫ್ ಯೋಧನಿಗೆ ಗಾಯವಾಗಿರುವ ಘಟನೆ ಶುಕ್ರವಾರ ನಡೆದಿದೆ.  
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಿಜಾಪುರ: ಛತ್ತೀಸ್ಗಢದ ಬಿಜಾಪುರ ಜಿಲ್ಲೆಯ ತರ್ರೆಮ್ ಗ್ರಾಮದಲ್ಲಿ ಐಇಡಿ ಸ್ಫೋಟಗೊಂಡಿದ್ದು, ಓರ್ವ ಸಿಆರ್'ಪಿಎಫ್ ಯೋಧನಿಗೆ ಗಾಯವಾಗಿರುವ ಘಟನೆ ಶುಕ್ರವಾರ ನಡೆದಿದೆ. 

ನಕ್ಸಲ್ ಪೀಡಿದ ಪ್ರದೇಶವಾಗಿರುವ ತೆರ್ರೆಮ್ ಗ್ರಾಮದ ಬಸಗುಡ ಪೊಲೀಸ್ ಠಾಣಾ ಪ್ರದೇಶದಲ್ಲಿ ಸಿಆರ್'ಪಿಎಫ್'ನ 168 ಬೆಟಾಲಿಯನ್ ಪಡೆ ಕಾರ್ಯಾಚರಣೆ ನಡೆಸುತ್ತಿತ್ತು. ಈ ವೇಳೆ ನಕ್ಸಲು ಹುದುಗಿಸಿಟ್ಟ ಐಇಡಿ ಬಾಂಬ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಸಿಆರ್'ಪಿಎಫ್ ಯೋಧರೊಬ್ಬರು ಗಾಯಗೊಂಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಗಾಯಗೊಂಡಿರುವ ಯೋಧ ಮುನ್ನಾ ಕುಮಾರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com