ಕರ್ನಾಟಕ ಚುನಾವಣೆಯಲ್ಲಿ ಬಾಂಡ್ ಗಳ ಮಾರಾಟಕ್ಕೆ ಮೋದಿ ಅವಕಾಶ - ಪ್ರಿಯಾಂಕಾ ಗಾಂಧಿ

ಬಿಜೆಪಿ ನೇತೃತ್ವದ ಕೇಂದ್ರಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಚುನಾವಣಾ ಬಾಂಡ್ ಗಳ ವಿವಾದ ಕುರಿತಂತೆ ಮತ್ತೆ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಚುನಾವಣಾ ಬಾಂಡ್ ಗಳ ವಿವಾದ ಕುರಿತಂತೆ ಮತ್ತೆ ಕಳವಳ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಬಾಂಡ್ ಗಳ ಮಾರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವಕಾಶ ಮಾಡಿಕೊಟ್ಟಿದ್ರಾ ಎಂದು ಕೇಳಿದ್ದಾರೆ.

ಚುನಾವಣಾ ಬಾಂಡ್ ಗಳ ಮೂಲಕ ದೇಣಿಗೆ ಬಗ್ಗೆ ನಾಲ್ಕು ಪ್ರಕರಣಗಳಲ್ಲಿ ಬೆಳಕಿಗೆ ಬಂದಿದೆ. ನಿನ್ನೆ ದಿನ ಬಿಜೆಪಿ ಸರ್ಕಾರದ ಸಚಿವರು ಮಾಧ್ಯಮಗಳ ಮುಂಭಾಗ ರದ್ದಿ ಕಾಗದವನ್ನು ಓದಿದ್ದಾರೆ. ಆದರೆ, ಈ ಪ್ರಶ್ನೆಗಳಿಗೆ ಏಲ್ಲಿ ಉತ್ತರ ಸಿಗುತ್ತದೆ ಎಂದು ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. 

ಆರ್ ಬಿಐ ಹಾಗೂ ಚುನಾವಣಾ ಆಯೋಗದ ಆಕ್ಷೇಪಗಳನ್ನು ತಿರಸ್ಕರಿಸಿರುವುದು ಸತ್ಯವಾಗಿದೆ. ಕರ್ನಾಟಕ ಚುನಾವಣೆ ಸಂದರ್ಭದಲ್ಲಿ ಬಾಂಡ್ ಗಳ ಅಕ್ರಮ ಮಾರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವಕಾಶ ನೀಡಿರುವ ಬಗ್ಗೆ ವರದಿಯಲ್ಲಿ ಬರೆಯಲಾಗಿದೆ, ಇದು ಸತ್ಯನಾ? ಎಂದು ಪ್ರಶ್ನಿಸಿದ್ದಾರೆ. ದಾನಿಗಳ ಕುರಿತಂತೆ ರಹಸ್ಯ ಕಾಪಾಡಲಾಗುತ್ತಿದೆ. ಈ ವಿಚಾರದಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ. 

ಚುನಾವಣಾ ಬಾಂಡ್ ಗಳ ವಿವಾದವನ್ನು ಸಂಸತ್ತಿನಲ್ಲಿ ಕಾಂಗ್ರೆಸ್ ಪ್ರಸ್ತಾಪಿಸಿದೆ. ಭೂಗತ ಪಾತಕಿ ದಾವೂದ್ ಇಬ್ರಾಹೀಂ ಆಪ್ತ ಇಕ್ಬಾಲ್ ಮಿರ್ಚಿ ಆಸ್ತಿ ಖರೀದಿಯ ಆರೋಪ ಎದುರಿಸುತ್ತಿರುವ ವ್ಯಕ್ತಿಯಿಂದ ಬಿಜೆಪಿ ಏಕೆ ದೇಣಿಗೆ ಸಂಗ್ರಹಿಸಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜಿವಾಲಾ ಪ್ರಶ್ನಿಸಿದ್ದಾರೆ. 

ಭಯೋತ್ಪಾದಕ ಚಟುವಟಿಗಳಿಗೆ ಹಣಕಾಸು ಪೂರೈಸುವ ಆರೋಪಿಗಳಿಂದ ದೇಣಿಗೆಗೆ ಚುನಾವಣಾ ಬಾಂಡ್ ಗಳ ಹಗರಣವಾಗಿದೆ.ಭೂಗತ ಪಾತಕಿ ದಾವೂದ್ ಇಬ್ರಾಹೀಂ ಆಪ್ತ ಇಕ್ಬಾಲ್ ಮಿರ್ಚಿ ಆಸ್ತಿ ಖರೀದಿಯ ಆರೋಪ ಎದುರಿಸುತ್ತಿರುವ ವ್ಯಕ್ತಿಯಿಂದ ಬಿಜೆಪಿ ಕೋಟ್ಯಂತರ ರೂಪಾಯಿ ದೇಣಿಗೆ ಸಂಗ್ರಹಿಸಿದೆ.  ಇದು ದೇಶದ್ರೋಹವಲ್ಲವೇ ಅಮಿತ್ ಶಾ? ಎಂದು ಸುರ್ಜಿವಾಲಾ ಟ್ವೀಟ್ ಮಾಡಿದ್ದಾರೆ.

ರಾಜ್ಯಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಲೋಕಸಭೆಯಲ್ಲಿ ಮತ್ತೆ ಧ್ವನಿ ಎತ್ತುವುದಾಗಿ ಪಕ್ಷದ ಹಿರಿಯ ಮುಖಂಡರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com