3 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರಯಾಣ ವೆಚ್ಚ 255 ಕೋಟಿ ರೂ.!

ಕಳೆದ ಮೂರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರಯಾಣಗಳಿಗಾಗಿ ಸುಮಾರು 255 ಕೋಟಿ ರೂ ವೆಚ್ಚಮಾಡಲಾಗಿದೆ  ಎಂದು ಸರ್ಕಾರ ರಾಜ್ಯ ಸಭೆಗೆ ತಿಳಿಸಿದೆ.
ಮೋದಿ
ಮೋದಿ

ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರಯಾಣಗಳಿಗಾಗಿ ಸುಮಾರು 255 ಕೋಟಿ ರೂ ವೆಚ್ಚಮಾಡಲಾಗಿದೆ  ಎಂದು ಸರ್ಕಾರ ರಾಜ್ಯ ಸಭೆಗೆ ತಿಳಿಸಿದೆ.

2016-19ರ ನಡುವೆ ಪ್ರಧಾನಿ ಮೋದಿ ಅವರು ವಿದೇಶ ಪ್ರವಾಸಗಳಿಗೆ ಬಳಸಲಾಗಿರುವ ಚಾರ್ಟರ್ ವಿಮಾನಗಳಿಗಾಗಿ 255 ಕೋಟಿ ರೂ. ವೆಚ್ಚವಾಗಿದೆ  ಎಂದು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

2016-17 ಸಾಲಿನಲ್ಲಿ  76.27 ಕೋಟಿ ರೂ 2017-18ರಲ್ಲಿ .99.32 ಕೋಟಿರೂ  ಹಾಗೂ 2018-19ರಲ್ಲಿ ಈವರೆಗೆ  79.91 ಕೋಟಿ ರೂ. ಪ್ರಧಾನಿ ಅವರ  ವಿದೇಶಿ  ಪ್ರಯಾಣಕ್ಕೆ ವೆಚ್ಚವಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com