ಮಹಾರಾಷ್ಟ್ರದಲ್ಲಿ ಎನ್‌ಸಿಪಿ-ಕಾಂಗ್ರೆಸ್ ಜೊತೆ ಸೇರಿ ಶಿವಸೇನೆ ಸರ್ಕಾರ ರಚಿಸಿದ್ರೂ ಆಯಸ್ಸು 6-8 ತಿಂಗಳಷ್ಟೆ: ನಿತಿನ್ ಗಡ್ಕರಿ

ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ರಚಿಸಲು ಶಿವಸೇನೆ ಶತ ಪ್ರಯತ್ನ ಮಾಡುತ್ತಿದ್ದು, ಎನ್‌ಸಿಪಿ-ಕಾಂಗ್ರೆಸ್ ಜೊತೆ ಸೇರಿ ಶಿವಸೇನೆ ಸರ್ಕಾರ ರಚಿಸಿದ್ರೂ ಅದರ ಆಯಸ್ಸು ಆರೆಂಟು ತಿಂಗಳಷ್ಟೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭವಿಷ್ಯ ನುಡಿದಿದ್ದಾರೆ.
ಶರದ್ ಪವಾರ್-ಸೋನಿಯಾ-ಉದ್ಧವ್
ಶರದ್ ಪವಾರ್-ಸೋನಿಯಾ-ಉದ್ಧವ್

ರಾಂಚಿ: ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ರಚಿಸಲು ಶಿವಸೇನೆ ಶತ ಪ್ರಯತ್ನ ಮಾಡುತ್ತಿದ್ದು, ಎನ್‌ಸಿಪಿ-ಕಾಂಗ್ರೆಸ್ ಜೊತೆ ಸೇರಿ ಶಿವಸೇನೆ ಸರ್ಕಾರ ರಚಿಸಿದ್ರೂ ಅದರ ಆಯಸ್ಸು ಆರೆಂಟು ತಿಂಗಳಷ್ಟೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭವಿಷ್ಯ ನುಡಿದಿದ್ದಾರೆ. 

ಜಾರ್ಖಂಡ್ ನಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ನಿತಿನ್ ಗಡ್ಕರಿ ಅವರು, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಸೈದ್ಧಾಂತಿಕವಾಗಿ ಎರಡು ವಿಭಿನ್ನ ಪಕ್ಷಗಳ ಜೊತೆ ಶಿವಸೇನೆ ಮೈತ್ರಿ ಮಾಡಿಕೊಂಡಿರುವುದು ದುರದೃಷ್ಟಕರ ಎಂದು ಹೇಳಿದರು. 

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಮೂರು ಪಕ್ಷಗಳು ಒಂದಾಗಿವೆ. ಆದರೆ ಸರ್ಕಾರ ರಚನೆ ಮಾಡಿದರೂ ಅದರ ಆಯಸ್ಸು 6 ರಿಂದ 8 ತಿಂಗಳು ಮಾತ್ರ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com