ಪಾಕಿಸ್ತಾನದಲ್ಲಿ ಭಯೋತ್ಪಾದನೆ ‘ಉದ್ಯೋಗ ದಂಧೆ ಆಗಿದೆ- ರಾಜನಾಥ್ ಸಿಂಗ್ 

ಪಾಕಿಸ್ತಾನ ಉಗ್ರರನ್ನು ರೂಪಿಸುತ್ತಿರುವ ನೆಲೆಯಾಗಿರುವುದನ್ನು ಖಂಡಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್,  ನೆರೆಯ ರಾಷ್ಟ್ರದಲ್ಲಿ ಭಯೋತ್ಪಾದನೆಯನ್ನು ಉದ್ಯೋಗ (ಉದ್ಯಮ)  ದಂಧೆಯನ್ನಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ 
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ಲಖನೌ: ಪಾಕಿಸ್ತಾನ ಉಗ್ರರನ್ನು ರೂಪಿಸುತ್ತಿರುವ ನೆಲೆಯಾಗಿರುವುದನ್ನು ಖಂಡಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್,  ನೆರೆಯ ರಾಷ್ಟ್ರದಲ್ಲಿ ಭಯೋತ್ಪಾದನೆಯನ್ನು ಉದ್ಯೋಗ (ಉದ್ಯಮ)  ದಂಧೆಯನ್ನಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ 

ಇತ್ತೀಚಿಗೆ ನಡೆದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ವಿಜಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಿನಬಳಕೆಯ ವಸ್ತುಗಳು ಪಾಕಿಸ್ತಾನದಲ್ಲಿ ಏರಿಕೆ ಆಗಿದ್ದು, ಆರ್ಥಿಕತೆ ಹದಗೆಟ್ಟಿದೆ.  ಇದಕ್ಕೆ ಬೆಂಬಲ ನೀಡುತ್ತಿದ್ದ ರಾಷ್ಟ್ರಗಳು ಇದೀಗ ಆರ್ಥಿಕವಾಗಿ ಸಹಕಾರ ನೀಡಲು ಸಿದ್ಧವಾಗಿಲ್ಲ ಎಂದರು. 

ಆದಾಗ್ಯೂ, ನರೇಂದ್ರ ಮೋದಿ ಪ್ರಧಾನಿಯಾಗಿರುವವರೆಗೂ ನೆರೆಯ ರಾಷ್ಟ್ರದಿಂದ ಯಾವುದೇ ರೀತಿಯ ತೊಂದರೆ ಆದರೆ ಅವರ ಭಾಷೆಯಲ್ಲಿಯೇ ಪ್ರತಿಕ್ರಿಯೆ ನೀಡಲಾಗುವುದು, ಇದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಅವರು ಎಚ್ಚರಿಸಿದರು. 

ಜಮ್ಮು- ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿರುವುದು ದೊಡ್ಡ  ಸಾಧನೆ ಬಿಜೆಪಿ ಸರ್ಕಾರ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸುವ ಮೂಲಕ ರಾಜಕೀಯ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಿದೆ ಎಂದು ಹೇಳಿದರು. 

ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುತ್ತೇವೆ ಎಂದು ನಾವು ಭರವಸೆ ನೀಡಿದ್ದೆವು. ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರದ ಎರಡನೇ ಅವಧಿಯಲ್ಲಿ ಅದನ್ನು ಸಾಕಾರಗೊಳಿಸಿದ್ದೇವೆ. ರಾಜಕೀಯ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸುವಲ್ಲಿ ನಮ್ಮ ನಂಬಿಕೆಯನ್ನು ಇದು ತೋರಿಸುತ್ತದೆ. ನಾವು ಯಾವ ಭರವಸೆ ನೀಡುತ್ತೇವೆಯೋ ಅದನ್ನು ಈಡೇರಿಸುತ್ತೇವೆ.’ ಎಂದು ತಿಳಿಸಿದರು. 

‘ಆಗಸ್ಟ್ 5 ರಂದು 370 ನೇ ವಿಧಿಯನ್ನು ರದ್ದುಪಡಿಸಿದಾಗಿನಿಂದ ಜಮ್ಮು-ಕಾಶ್ಮೀರದಲ್ಲಿ ಯಾವುದೇ ನಾಗರಿಕ ಕೊಲ್ಲಲ್ಪಟ್ಟಿಲ್ಲ. ಆದರೆ ಹಲವಾರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿವೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com