ಇಬ್ಬರು ವ್ಯಕ್ತಿಗಳಿಗೆ ಒಂದೇ ಖಾತೆ! ಎಸ್‌ಬಿಐ ಬ್ಯಾಂಕ್ ಎಡವಟ್ಟಿಗೆ ಗ್ರಾಹಕ ಸುಸ್ತು

ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳಿಗೆ ಒಂದೇ ಖಾತೆ ಸಂಖ್ಯೆಯನ್ನು ಒಂದೇ ಬ್ಯಾಂಕ್ ಶಾಖೆಯಲ್ಲಿ ನೀಡಿದರೆ ಹೇಗಾಗಬಹುದು?! ಮಧ್ಯಪ್ರದೇಶದಲ್ಲಿ ಇಂತಹಾ ಒಂದು ವಿಚಿತ್ರ ಪ್ರಸಮ್ಗ ಬೆಳಕಿಗೆ ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭೋಪಾಲ್: ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳಿಗೆ ಒಂದೇ ಖಾತೆ ಸಂಖ್ಯೆಯನ್ನು ಒಂದೇ ಬ್ಯಾಂಕ್ ಶಾಖೆಯಲ್ಲಿ ನೀಡಿದರೆ ಹೇಗಾಗಬಹುದು?! ಮಧ್ಯಪ್ರದೇಶದಲ್ಲಿ ಇಂತಹಾ ಒಂದು ವಿಚಿತ್ರ ಪ್ರಸಮ್ಗ ಬೆಳಕಿಗೆ ಬಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳಿಗೆ ಒಂದೇ ಖಾತಾ ಸಂಖ್ಯೆಯಲ್ಲಿ ಅಕೌಂಟ್ ತೆರೆಯಲು ಅವಕಾಶ ನೀಡಿದ್ದು ಆ ಎರಡೂ ಅಕೌಂಟ್ ಗಳು ಒಂದೇ ಶಾಖೆಯಲ್ಲಿದೆ ಎನ್ನುವುದು ಗಮನಾರ್ಹ.

ಇಬ್ಬರು ವ್ಯಕ್ತಿಗಳಲ್ಲಿ ಒಬರು ತಾವು ಕಷ್ಟಪಟ್ಟು ಉಳಿತಾಯ ಮಾಡಿದ್ದ ಹಣ ನಾಪತ್ತೆಯಾಗುವವರೆಗೆ ಇದು ಪತ್ತೆಯಾಗಿರಲಿಲ್ಲ. ಇನ್ನು ಎರಡನೇ ವ್ಯಕ್ತಿ ತಾನು ಹಣ ಹಾಕದಿದ್ದರೂ ತನ್ನ ಖಾತೆಗೆ ಹಣ ಜಮೆಯಾಗಿರುವುದು ಕಂಡು ಇದು ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಭರವಸೆಯಾಗಿರಬೇಕೆಂದು ಭಾವಿಸಿದ್ದಾರೆ, ಮತ್ತು ಹೆಚ್ಚುವರಿ ಹಣವನ್ನು ಖಾತೆಯಿಂದ ವಿತ್ ಡ್ರಾ ಮಾಡಿಕೊಂಡಿದ್ದಾನೆ!

ಇದು ಪ್ರಾರಂಬವಾಗಿದ್ದು 2018ರಲ್ಲಿ ಹುಕುಮ್ ಸಿಂಗ್ ಬಾಗೆಲ್ ಆಲಂಪುರ್ ಪಟ್ಟಣ ಶಾಖೆಯಲ್ಲಿ ಎಸ್‌ಬಿಐ ಖಾತೆ ತೆರೆದಿದ್ದಾರೆ. ಆಗ ಶಾಖಾ ವ್ಯವಸ್ಥಾಪಕರು ಬಾಗೆಲ್ ಗೆ ಈ ಮುನ್ನ ಖಾತೆ ಹೊಂದಿದ್ದ ಹುಕುಮ್ ಸಿಂಗ್ ಕುಶ್ವಾ ಅವರ ಖಾತಾ ಸಂಖ್ಯಯನ್ನು ನಿಗದಿಪಡಿಸಿದ್ದಾರೆ, ಕುಶ್ವಾ ತಮ್ಮ ಖಾತೆಯನ್ನು 2016ರಿಂದ ನಿರ್ವಹಿಸುತ್ತಿದ್ದರು.

ಹರಿಯಾಣದಲ್ಲಿ ಸ್ನ್ಯಾಕ್ಸ್ ಸ್ಟಾಲ್ ನಡೆಸುತ್ತಾ ಜೀವನ ನಿರ್ವಹಿಸುತ್ತಿದ್ದ ಕುಶ್ವಾ ಖಾತೆಯಲ್ಲಿ ಮಾಸಿಕ ಠೇವಣಿ ಇಟ್ಟಿದ್ದರು.ಬಾಗೇಲ್ ಕೂಡ ಅದೇ ಖಾತೆ ಸಂಖ್ಯೆಯನ್ನು ಹೊಂದಿದ್ದರಿಂದ, ಅವರು ಮಾಸಿಕ ಹಣ ಜಮಾವಣೆಯಿಂದ ಅಚ್ಚರಿಗೊಂಡಿದ್ದಾರೆ.ಜತೆಗೆ ಹೆಚ್ಚುವರಿ ಹಣವನ್ನು ವಿತ್ ಡ್ರಾ ಮಾಡಿಕೊಳ್ಳುವುದಕ್ಕೆ ಪ್ರಾರಂಭಿಸಿದ್ದಾರೆ. ಘಟನೆ ಬೆಳಕಿಗೆ ಬರುವ ಮುನ್ನ  1.40 ಲಕ್ಷ ರೂ.ಗಳಲ್ಲಿ 89,000  ರು. ವಿತ್ ಡ್ರಾ ಆಗಿತ್ತು.

“ನಾನು ಹಿಂತೆಗೆದುಕೊಂಡ ಮೊತ್ತವನ್ನು ಮರುಪಾವತಿಸಲು ಈಗ ನನ್ನನ್ನು ಕೇಳಲಾಗುತ್ತಿದೆ. ಇದು ಬ್ಯಾಂಕಿನ ತಪ್ಪು ಹೊರತು ನನ್ನದಲ್ಲ,  ನನ್ನ ಖಾತೆಯಲ್ಲಿ ಹಣವನ್ನು ಠೇವಣಿ ಇರಿಸುವ ಮೂಲಕ ಮೋದಿಜಿ ತನ್ನ ಭರವಸೆಯನ್ನು ಉಳಿಸಿಕೊಂಡಿದ್ದಾನೆ ಎಂದು ನಾನು ಭಾವಿಸಿದೆ ” ಕಾರ್ಮಿಕನಾಗಿರುವ ಬಾಗೆಲ್  ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com