ಮಹಾರಾಷ್ಟ್ರ ಸರ್ಕಾರದ ಮುಂದಿನ ಬಹುದೊಡ್ಡ ಸವಾಲು ಸ್ಪೀಕರ್ ಆಯ್ಕೆ 

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಂಬಂಧ ಮುಕ್ತವಾಗಿ ರಾಜಕೀಯ ಪಕ್ಷಗಳ ಮಧ್ಯೆ ಕದನಗಳು ಮುಂದುವರಿಯುತ್ತಿರುವ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ, ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ನಡುವೆ ಇರುವ ಮತ್ತೊಂದು ದೊಡ್ಡ ಸಮಸ್ಯೆ ವಿಧಾನಸಭೆ ಅಧಿವೇಶನ. 
ಮಹಾರಾಷ್ಟ್ರ ವಿಧಾನ ಭವನ
ಮಹಾರಾಷ್ಟ್ರ ವಿಧಾನ ಭವನ

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಂಬಂಧ ಮುಕ್ತವಾಗಿ ರಾಜಕೀಯ ಪಕ್ಷಗಳ ಮಧ್ಯೆ ಕದನಗಳು ಮುಂದುವರಿಯುತ್ತಿರುವ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ, ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ನಡುವೆ ಇರುವ ಮತ್ತೊಂದು ದೊಡ್ಡ ಸಮಸ್ಯೆ ವಿಧಾನಸಭೆ ಅಧಿವೇಶನ. ಈ ವಾರಾಂತ್ಯಕ್ಕೆ ಮಹಾರಾಷ್ಟ್ರ ವಿಧಾನಸಭೆಯ ಅಧಿವೇಶನ ನಡೆಯಲಿದ್ದು ಅದರಲ್ಲಿ ಹಲವು ತೊಡಕುಗಳು ವಿವಿಧ ರಾಜಕೀಯ ಪಕ್ಷಗಳಿಗೆ ಉಂಟಾಗಲಿವೆ ಎನ್ನುತ್ತಾರೆ ಕಾನೂನು ಮತ್ತು ರಾಜಕೀಯ ತಜ್ಞರು.


ಮೊನ್ನೆ ಶನಿವಾರ ಎನ್ ಸಿಪಿ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಪ್ರಸ್ತುತ ಡಿಸಿಎಂ ಆಗಿರುವ ಅಜಿತ್ ಪವಾರ್ ಅವರನ್ನು ಉಚ್ಛಾಟಿಸಿ ಅವರ ಸ್ಥಾನಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಅವರನ್ನು ನೇಮಿಸಲಾಯಿತು. ಅಜಿತ್ ಪವಾರ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವುದನ್ನು ಎನ್ ಸಿಪಿ ರಾಜ್ಯಪಾಲರಿಗೆ ತಿಳಿಸಿದೆ. ಅಜಿತ್ ಪವಾರ್ ಇನ್ನು ಮುಂದೆ ಎನ್ ಸಿಪಿಯ ಶಾಸಕಾಂಗ ಪಕ್ಷದ ನಾಯಕರಾಗುವುದಿಲ್ಲ. ಹೀಗಾಗಿ ಅವರು ಯಾವುದೇ ನಡೆ ತೆಗೆದುಕೊಂಡರೂ ಸಹ ರಾಜಕೀಯವಾಗಿ ಮಹತ್ವ ಸಿಗುವುದಿಲ್ಲ ಎನ್ನುತ್ತಾರೆ ಸಾಂವಿಧಾನಿಕ ಕಾನೂನು ತಜ್ಞರು.


ಚುನಾಯಿತ ಶಾಸಕರಲ್ಲಿ ಅತ್ಯಂತ ಹಿರಿಯರು ಸಾಮಾನ್ಯವಾಗಿ ಸದನಕ್ಕೆ ಸ್ಪೀಕರ್ ಆಗುತ್ತಾರೆ. ಸ್ಪೀಕರ್ ನೇತೃತ್ವದಲ್ಲಿ ರಾಜ್ಯಪಾಲ ಬಿ ಎಸ್ ಕೊಶ್ಯಾರಿ ಅವರು ಎಲ್ಲಾ ಚುನಾಯಿತ 287 ಶಾಸಕರ ಪ್ರತಿಜ್ಞಾ ವಿಧಿಯನ್ನು ಸದನದಲ್ಲಿ ತೆಗೆದುಕೊಳ್ಳುತ್ತಾರೆ.


ಇನ್ನು ಬಿಜೆಪಿಯವರು ಹೇಳುವ ಪ್ರಕಾರ ತಮ್ಮ 105 ಶಾಸಕರು, ಅಜಿತ್ ಪವಾರ್ ಬೆಂಬಲಿತ ಶಾಸಕರು ಮತ್ತು ಸ್ವತಂತ್ರ, ಸಣ್ಣ ಪಕ್ಷಗಳ ಶಾಸಕರು ಸೇರಿ 170 ಶಾಸಕರ ಬೆಂಬಲವಿದೆ ಎನ್ನುತ್ತಾರೆ. ಇನ್ನೊಂದೆಡೆ ಶರದ್ ಪವಾರ್ ನೇತೃತ್ವದ ಎನ್ ಸಿಪಿ ಶಾಸಕರು, ಶಿವಸೇನೆ ಮತ್ತು ಕಾಂಗ್ರೆಸ್ ಶಾಸಕರು ಸೇರಿ 165 ಮಂದಿಯಿದ್ದು ಶಿವಸೇನೆ ಹೇಳುವ ಪ್ರಕಾರ ಅವರಿಗೂ ಸರ್ಕಾರ ರಚಿಸುವ ತಾಕತ್ತು ಇದೆ. ಮಹಾರಾಷ್ಟ್ರ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ 288, ಅದು ಸ್ಪೀಕರ್ ಅವರನ್ನು ಸಹ ಒಳಗೊಂಡು.


ಈಗ ಎರಡೂ ಕಡೆಯವರು ತಮಗೆ ಸರ್ಕಾರ ರಚನೆ ಮಾಡಲು ಸದಸ್ಯರ ಬೆಂಬಲವಿದೆ, ತಮಗೆ ಅವಕಾಶ ಕೊಡಬೇಕೆಂದು ಬೇಡಿಕೆಯಿಟ್ಟರೆ ಕಾನೂನಾತ್ಮಕವಾಗಿ ಸಮಸ್ಯೆ ಎದುರಾಗಬಹುದು. ಸ್ಪೀಕರ್ ಆಯ್ಕೆಯಲ್ಲಿ ಕೂಡ ಸಮಸ್ಯೆ ಉಂಟಾಗಬಹುದು ಎನ್ನುತ್ತಾರೆ ತಜ್ಞರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com