'ಇದು ಗೋವಾ ಅಲ್ಲ, ಮಹಾರಾಷ್ಟ್ರ': ವಿಶ್ವಾಸಮತ ಯಾಚನೆಗೆ ಸಿದ್ಧ- ಶರದ್ ಪವಾರ್ 

ಮಹಾರಾಷ್ಟ್ರ ರಾಜಕೀಯ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿರುವಂತೆಯೇ  ಶಿವಸೇನೆ, ಎನ್ ಸಿಪಿ ಹಾಗೂ ಕಾಂಗ್ರೆಸ್ ಮಾಧ್ಯಮಗಳ ಮುಂದೆ ಶಕ್ತಿ ಪ್ರದರ್ಶಿಸಿವೆ.

Published: 25th November 2019 08:40 PM  |   Last Updated: 25th November 2019 08:40 PM   |  A+A-


SharadPawar1

ಶರದ್ ಪವಾರ್

Posted By : Nagaraja AB
Source : PTI

ಮುಂಬೈ: ಮಹಾರಾಷ್ಟ್ರ ರಾಜಕೀಯ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿರುವಂತೆಯೇ  ಶಿವಸೇನೆ, ಎನ್ ಸಿಪಿ ಹಾಗೂ ಕಾಂಗ್ರೆಸ್ ಮಾಧ್ಯಮಗಳ ಮುಂದೆ ಶಕ್ತಿ ಪ್ರದರ್ಶಿಸಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, ಕರ್ನಾಟಕ, ಗೋವಾ, ಮಣಿಪುರ ಸೇರಿದಂತೆ ವಿವಿಧ ಕಡೆಗಳಲ್ಲಿ ಬಹುಮತ ಇಲ್ಲದಿದ್ದರೂ  ಕೇಂದ್ರ ಸರ್ಕಾರದ ನೆರವಿನಿಂದ ಸರ್ಕಾರ ರಚಿಸುವ ಮೂಲಕ ಅಧಿಕಾರವನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ಬಿಜೆಪಿ ತೋರಿಸಿದೆ.  ಸದನದ 288 ಸದಸ್ಯರ ಪೈಕಿ ಇಲ್ಲಿಯೇ 162 ಸದಸ್ಯರು ಇರುವುದಾಗಿ ತಿಳಿಸಿದ್ದಾರೆ.

ಇತರ ಅನೇಕ ಶಾಸಕರು ನಮಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಅವರ ಹೆಸರನ್ನು ಈಗ ಬಹಿರಂಗಪಡಿಸುವುದಿಲ್ಲ. ಸುಪ್ರೀಕೋರ್ಟ್ ವಿಶ್ವಾಸಮತಕ್ಕೆ ಆದೇಶ ಹೊರಡಿಸಿದಾಗ ನಾವು ಅದನ್ನು ಸಿದ್ಧಪಡಿಸುವುದಾಗಿ  ಹೇಳಿದರು.

ಬಹುಮತ ಸಾಬೀತುಪಡಿಸಲು ಯಾವುದೇ ತೊಂದರೆ ಇಲ್ಲ. ಪಕ್ಷದಿಂದ ಉಚ್ಚಾಟಿಸಲ್ಪಟ್ಟಿರುವ ಒಬ್ಬರಿಂದ ಯಾವುದೇ ಆದೇಶ ನೀಡುವಂತಿಲ್ಲ. ವಿಶ್ವಾಸ ಮತ ಯಾಚನೆ ದಿನ ಎಲ್ಲಾ 162 ಶಾಸಕರನ್ನು ಕರೆತರುತ್ತೇವೆ. ಇದು ಗೋವಾ ಅಲ್ಲ, ಮಹಾರಾಷ್ಟ್ರ ಎಂದು ತಿರುಗೇಟು ನೀಡಿದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp