ಭದ್ರತಾ ಪಡೆಯನ್ನು ಹಿಂಪಡೆದ ಬಳಿಕವೇ ಜಾಮಿಯಾ ಮಸೀದಿಯಲ್ಲಿ ನಮಾಜ್ ಪುನಾರಂಭ: ಆಡಳಿತ ಮಂಡಳಿ

ಭದ್ರತಾ ಪಡೆಯ ಎಲ್ಲಾ ಸಿಬ್ಬಂದಿಯನ್ನು ಈ ಪ್ರದೇಶದಿಂದ ಹಿಂಪಡೆಯುವವರೆಗೆ ಐತಿಹಾಸಿಕ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಪುನಾರಂಭಗೊಳ್ಳುವುದಿಲ್ಲ ಎಂದು ಮಸೀದಿಯ ಆಡಳಿತ ಮಂಡಳಿ ಗುರುವಾರ ಸ್ಪಷ್ಟಪಡಿಸಿದೆ.
ಭದ್ರತಾ ಪಡೆಯನ್ನು ಹಿಂಪಡೆದ ಬಳಿಕವೇ ಜಾಮಿಯಾ ಮಸೀದಿಯಲ್ಲಿ ನಮಾಜ್ ಪುನಾರಂಭ: ಆಡಳಿತ ಮಂಡಳಿ
ಭದ್ರತಾ ಪಡೆಯನ್ನು ಹಿಂಪಡೆದ ಬಳಿಕವೇ ಜಾಮಿಯಾ ಮಸೀದಿಯಲ್ಲಿ ನಮಾಜ್ ಪುನಾರಂಭ: ಆಡಳಿತ ಮಂಡಳಿ

ಶ್ರೀನಗರ: ಭದ್ರತಾ ಪಡೆಯ ಎಲ್ಲಾ ಸಿಬ್ಬಂದಿಯನ್ನು ಈ ಪ್ರದೇಶದಿಂದ ಹಿಂಪಡೆಯುವವರೆಗೆ ಐತಿಹಾಸಿಕ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಪುನಾರಂಭಗೊಳ್ಳುವುದಿಲ್ಲ ಎಂದು ಮಸೀದಿಯ ಆಡಳಿತ ಮಂಡಳಿ ಗುರುವಾರ ಸ್ಪಷ್ಟಪಡಿಸಿದೆ.

ಹುರಿಯತ್ ಕಾನ್ಫರೆನ್ಸ್ (ಎಚ್‌ಸಿ) ಅಧ್ಯಕ್ಷ ಮಿರ್ವಾಯಿಜ್ ಮೌಲ್ವಿ ಉಮರ್ ಫಾರೂಕ್ ಅವರ ಕೆಳಪಟ್ಟಣದಲ್ಲಿರುವ ಭದ್ರಕೋಟೆಯಾದ ಐತಿಹಾಸಿಕ ಮಸೀದಿಯ ಎಲ್ಲಾ ದ್ವಾರಗಳನ್ನು ಆಗಸ್ಟ್ 5ರಿಂದ ಮುಚ್ಚಲಾಗಿದ್ದು, ಇಲ್ಲಿ ಜನರು ಸೇರುವುದನ್ನು ತಡೆಯಲು ಹೆಚ್ಚಿನ ಸಂಖ್ಯೆಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಆದರೆ, ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆಗೆ ಯಾವುದೇ ನಿರ್ಬಂಧಗಳಿಲ್ಲ ಎಂದು ಜಿಲ್ಲಾಡಳಿತ ಮತ್ತು ಪೊಲೀಸರು ಕಳೆದ ವಾರ ತಿಳಿಸಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com