549 ಪೌರ ಕಾರ್ಮಿಕರ ಹುದ್ದೆಗೆ ಬಿಇ, ಎಂಎಸ್ಸಿ ಪದವೀಧರರು ಸೇರಿ 7000 ಮಂದಿ ಅರ್ಜಿ!

ತಮಿಳುನಾಡಿನ ಕೊಯಂಬತ್ತೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 549 ಪೌರ ಕಾರ್ಮಿಕರ ಹುದ್ದೆಗೆ ಬಿಎಸ್ಸಿ, ಎಂಎಸ್ಸಿ, ಬಿಕಾಂ, ಬಿಇ ಮತ್ತು ಎಂಕಾಂ ಪದವೀಧರರು ಸೇರಿದಂತೆ ಬರೋಬ್ಬರಿ 7000 ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಸಂದರ್ಶನಕ್ಕೆ ಆಗಮಿಸಿದ ಅಭ್ಯರ್ಥಿಗಳು
ಸಂದರ್ಶನಕ್ಕೆ ಆಗಮಿಸಿದ ಅಭ್ಯರ್ಥಿಗಳು

ಕೊಯಂಬತ್ತೂರು: ತಮಿಳುನಾಡಿನ ಕೊಯಂಬತ್ತೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 549 ಪೌರ ಕಾರ್ಮಿಕರ ಹುದ್ದೆಗೆ ಬಿಎಸ್ಸಿ, ಎಂಎಸ್ಸಿ, ಬಿಕಾಂ, ಬಿಇ ಮತ್ತು ಎಂಕಾಂ ಪದವೀಧರರು ಸೇರಿದಂತೆ ಬರೋಬ್ಬರಿ 7000 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಖಾಲಿ ಇರುವ 549 ಪೌರ ಕಾರ್ಮಿಕರ ಹುದ್ದೆಗೆ ಬುಧವಾರ ಸಂದರ್ಶನ ನಡೆದಿದ್ದು, ವಿಶೇಷವೆಂದರೆ ಈ ಕೆಲಸಕ್ಕೆ ಅರ್ಜಿ ಸಲ್ಲಿಸಿದವರಲ್ಲಿ ಬಹುತೇಕರೂ ಅತಿ ಹೆಚ್ಚು ವಿದ್ಯಾರ್ಹತೆ ಹೊಂದಿದವರು. ಇಂಜಿನಿಯರಿಂಗ್​ ಪದವೀಧರರು ಸೇರಿ ಹಲವು ವಿಭಾಗಗಳಲ್ಲಿ ಪದವಿ ಮಾಡಿದವರೇ ಅರ್ಜಿ​ ಹಾಕಿದ್ದಾರೆ.

ನಗರಪಾಲಿಕೆ ಕೆಲಸಕ್ಕೆ ಅರ್ಜಿ ಹಾಕಿದವರ ವಿದ್ಯಾರ್ಹತೆಯನ್ನು ಪರಿಶೀಲನೆ ಮಾಡಿದ್ದು ಒಟ್ಟು 7000 ಮಂದಿಯಲ್ಲಿ ಶೇ.70ಮಂದಿಯದ್ದು ಎಸ್ಸೆಸ್ಸೆಲ್ಸಿ ಪೂರ್ಣಗೊಂಡಿದೆ. ಉಳಿದ ಶೇ.30 ಮಂದಿ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿಲ್ಲ. ಆದರೆ ಎಸ್ಸೆಸ್ಸೆಲ್ಸಿ ಪೂರ್ತಿಯಾದ ಬಹುತೇಕರು ಇಂಜಿನಿಯರ್​ಗಳು, ಡಿಪ್ಲೊಮಾ ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರು ಇದ್ದಾರೆ.

ಸಂದರ್ಶನಕ್ಕೆ ಹಾಜರಾದವರ ಪೈಕಿ ಹಲವರಿಗೆ ಮೂಲ ವೇತನ ಎಷ್ಟು ಅಂತ ಗೊತ್ತಿಲ್ಲ. ಆದರೆ ಕೆಲಸ ಸಿಕ್ಕರೆ ಪೌರ ಕಾರ್ಮಿಕರಾಗಿ ಕೆಲಸ ಮಾಡಲು ಸಿದ್ಧ ಎಂದು ಹೇಳಿದ್ದಾರೆ.

ಹಲವು ಜನ ಈಗಾಗಲೇ ಕೆಲವು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದು ಕೇವಲ 6-7ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ. ಆದರೆ ಪ್ರಥಮ ದರ್ಜೆ ಸ್ವಚ್ಛತಾ ಕಾರ್ಮಿಕರಿಗೆ ಕೊಯಂಬತ್ತೂರು ಮಹಾನಗರ ಪಾಲಿಕೆ ಪ್ರಾರಂಭದಲ್ಲೇ 15,700 ರೂ.ನಿಗದಿಪಡಿಸಿದ್ದರಿಂದ ಹೇಗಾದರೂ ಸರ್ಕಾರಿ ಕೆಲಸ ಪಡೆಯಬೇಕು ಎಂಬ ಕಾರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈ ಸಂಬಳ ಬರುವ ವರ್ಷಗಳಲ್ಲಿ 20,000ಕ್ಕೆ ಏರುತ್ತದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com