ನಿಲ್ಲದ ಸರ್ಕಾರಿ ವಿರೋಧಿ ಪ್ರತಿಭಟನೆ: ರಾಜೀನಾಮೆಗೆ ಇರಾಕ್ ಪ್ರಧಾನಿ ನಿರ್ಧಾರ 

ದೇಶದಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಇರಾಕ್ ಪ್ರಧಾನಿ ಅಡೆಲ್ ಅಬ್ದುಲ್ ಮಹ್ದಿ ರಾಜೀನಾಮೆ ನೀಡುವ ತೀರ್ಮಾನಕ್ಕೆ ಬಂದಿದ್ದಾರೆ. 
ನಿಲ್ಲದ ಸರ್ಕಾರಿ ವಿರೋಧಿ ಪ್ರತಿಭಟನೆ: ರಾಜೀನಾಮೆಗೆ ಇರಾಕ್ ಪ್ರಧಾನಿ ನಿರ್ಧಾರ
ನಿಲ್ಲದ ಸರ್ಕಾರಿ ವಿರೋಧಿ ಪ್ರತಿಭಟನೆ: ರಾಜೀನಾಮೆಗೆ ಇರಾಕ್ ಪ್ರಧಾನಿ ನಿರ್ಧಾರ

ಬಾಗ್ದಾದ್: ದೇಶದಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಇರಾಕ್ ಪ್ರಧಾನಿ ಅಡೆಲ್ ಅಬ್ದುಲ್ ಮಹ್ದಿ ರಾಜೀನಾಮೆ ನೀಡುವ ತೀರ್ಮಾನಕ್ಕೆ ಬಂದಿದ್ದಾರೆ. 

ಸರ್ಕಾರದ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುವುದಾಗಿ ಸಂಸತ್‌ನ ಪ್ರತಿನಿಧಿ ಸಭೆಗೆ ಅಧಿಕೃತ ಪತ್ರವನ್ನು ಸಲ್ಲಿಸುತ್ತೇನೆ" ಎಂದು ಪ್ರಧಾನಿ ಅಬ್ದುಲ್ ಮಹ್ದಿ ಶುಕ್ರವಾರದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇರಾಕ್ನಲ್ಲಿ ಸರ್ಕಾರ ವಜಾಗೊಳಿಸಿ, ಆರ್ಥಿಕ ಬಿಕ್ಕಟ್ಟು ಕೊನೆಗೊಳಿಸಬೇಕೆಂದು ಆಗ್ರಹಿಸಿ, ಕಳೆದ ಅಕ್ಟೋಬರ್ ಆರಂಭವಾದ ಪ್ರತಿಘಟನೆ ಉಲ್ಬಣಗೊಳ್ಳುತ್ತಿದೆ.

ಸರ್ಕಾರ ವಜಾಗೊಳಿಸಲು ಮತ್ತು ಆರ್ಥಿಕ ಬಿಕ್ಕಟ್ಟನ್ನು ಕೊನೆಗೊಳಿಸಲು ಜನರು ಒತ್ತಾಯಿಸುತ್ತಿದ್ದಾರೆ. ಪ್ರತಿಭಟನಾಕಾರರ ವಿರುದ್ಧ ನವೆಂಬರ್ನಲ್ಲಿ, ಅತಿಯಾದ ಬಲ ಪ್ರಯೋಗ ಮಾಡಿದ ಹಿನ್ನೆಲೆಯಲ್ಲಿ 66 ಇರಾಕಿ ಅಧಿಕಾರಿಗಳನ್ನು ವಿಚಾರಣೆಗೆ ಗುರಿಪಡಿಸಲಾಗಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com