ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಮನೆ ಕದ ತಟ್ಟಿದ ಪೊಲೀಸರು

ಚುನಾವಣೆ ಅಫಿಡವಿಟ್ಟು ಸಲ್ಲಿಸುವಾಗ ಎರಡು ಕ್ರಿಮಿನಲ್ ಕೇಸಿಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ನೀಡದೆ ಮರೆಮಾಚಿದ್ದಕ್ಕೆ ಸ್ಥಳೀಯ ನ್ಯಾಯಾಲಯದ ನಿರ್ದೇಶನ ಹೊರಡಿಸಿದ ಸಮ್ಮನ್ಸ್ ಗೆ ಸಂಬಂಧಿಸಿದಂತೆ ನಾಗ್ಪುರ ಪೊಲೀಸರು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕದ ತಟ್ಟಿದ್ದಾರೆ.
ದೇವೇಂದ್ರ ಫಡ್ನವಿಸ್
ದೇವೇಂದ್ರ ಫಡ್ನವಿಸ್

ಮುಂಬೈ: ಚುನಾವಣೆ ಅಫಿಡವಿಟ್ಟು ಸಲ್ಲಿಸುವಾಗ ಎರಡು ಕ್ರಿಮಿನಲ್ ಕೇಸಿಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ನೀಡದೆ ಮರೆಮಾಚಿದ್ದಕ್ಕೆ ಸ್ಥಳೀಯ ನ್ಯಾಯಾಲಯದ ನಿರ್ದೇಶನ ಹೊರಡಿಸಿದ ಸಮ್ಮನ್ಸ್ ಗೆ ಸಂಬಂಧಿಸಿದಂತೆ ನಾಗ್ಪುರ ಪೊಲೀಸರು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕದ ತಟ್ಟಿದ್ದಾರೆ.


ನಿನ್ನೆ ನಾಗ್ಪುರ ಪೊಲೀಸರು ಸಮ್ಮನ್ಸ್ ನೀಡಲಾಗಿದೆ ಎಂದು ನಾಗ್ಪುರ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಬನ್ಸೊಡೆ ತಿಳಿಸಿದ್ದಾರೆ. 2014ರಲ್ಲಿ ದೂರುದಾರ ಅಡ್ವೊಕೇಟ್ ಸತೀಶ್ ಉಕೆ ಫಡ್ನವಿಸ್ ವಿರುದ್ಧ ನಾಗ್ಪುರದ ಜೆಎಂಎಫ್ ಸಿ ಕೋರ್ಟ್ ನಲ್ಲಿ ಕ್ರಿಮಿನಲ್ ಕೇಸು ದಾಖಲಿಸಿದ್ದರು. ಆ ವರ್ಷ ಅವರು ಚುನಾವಣಾ ಆಯೋಗಕ್ಕೆ ವಿವರ ಸಲ್ಲಿಸುವಾಗ ತಮ್ಮ ಮೇಲಿನ ಎರಡು ಕ್ರಿಮಿನಲ್ ಕೇಸುಗಳಿಗೆ ಸಂಬಂಧಪಟ್ಟಂತೆ ಸರಿಯಾಗಿ ಮಾಹಿತಿ ನೀಡಲಿಲ್ಲ ಎಂದು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. 


ನಂತರ 2015ರಲ್ಲಿ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು. ಅದಕ್ಕೆ ನ್ಯಾಯವಾದಿ ಉಕೆ ಅವರು ಸೆಷನ್ಸ್ ಕೋರ್ಟ್ ಮೊರೆ ಹೋಗಿ ಕೇಸಿನ ತನಿಖೆ ನಡೆಸಬೇಕೆಂದು ಮನವಿ ಮಾಡಿಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com