ದೇಶದ ಆರ್ಥಿಕತೆ, ಸಮಾಜ ಆತಂಕದಲ್ಲಿದೆ: ಮತ್ತೆ ಜಿಡಿಪಿ ಕುಸಿತಕ್ಕೆ ಮನಮೋಹನ್ ಸಿಂಗ್ ಕಳವಳ

ಪ್ರಸಕ್ತ ಸಾಲಿನ ಎರಡನೇ ತ್ರೈ ಮಾಸಿಕ ಅವಧಿಯಲ್ಲಿ ಜಿಡಿಪಿ ಶೇ. 4.5 ಕ್ಕೆ ಕುಸಿದಿದ್ದು, ಕೇಂದ್ರ ಸರ್ಕಾರ ಇದರ ಚೇತರಿಕೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರ್ಥಿಕ ತಜ್ಞರೂ ಆಗಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತೀವ್ರ ಆತಂಕ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Published: 30th November 2019 12:31 AM  |   Last Updated: 30th November 2019 12:31 AM   |  A+A-


manmohan singh

ಮನಮೋಹನ್ ಸಿಂಗ್

Posted By : Lingaraj Badiger
Source : UNI

ನವದೆಹಲಿ: ಪ್ರಸಕ್ತ ಸಾಲಿನ ಎರಡನೇ ತ್ರೈ ಮಾಸಿಕ ಅವಧಿಯಲ್ಲಿ ಜಿಡಿಪಿ ಶೇ. 4.5 ಕ್ಕೆ ಕುಸಿದಿದ್ದು, ಕೇಂದ್ರ ಸರ್ಕಾರ ಇದರ ಚೇತರಿಕೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರ್ಥಿಕ ತಜ್ಞರೂ ಆಗಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತೀವ್ರ ಆತಂಕ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೊದಲ ತ್ರೈಮಾಸಿಕದಲ್ಲಿ ಶೇ. 5 ರಷ್ಟಿದ್ದ ಜಿಡಿಪಿ ಎರಡನೇ ತ್ರೈಮಾಸಿಕದಲ್ಲಿ ಶೇ 4.5 ಕ್ಕೆ ಕುಸಿದಿರುವುದು ಆತಂಕ ಉಂಟು ಮಾಡಿದೆ ಮತ್ತು ದೇಶದ ಪ್ರಸ್ತುತ ಆರ್ಥಿಕತೆ ಸ್ವೀಕಾರಾರ್ಹವಲ್ಲ ಎಂದು ಮಾಜಿ ಪ್ರಧಾನಿ ಹೇಳಿದ್ದಾರೆ.

'ನಮ್ಮ ಆರ್ಥಿಕತೆಯ ಸ್ಥಿತಿ ಚಿಂತಾಜನಕವಾಗಿದೆ ಮತ್ತು ನಮ್ಮ ಸಮಾಜದ ಸ್ಥಿತಿ ಇನ್ನಷ್ಟು ಆತಂಕಕಾರಿಯಾಗಿದೆ ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕೇವಲ ಆರ್ಥಿಕ ನೀತಿಗಳಲ್ಲಿನ ಬದಲಾವಣೆಗಳು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುವುದಿಲ್ಲ. ನಮ್ಮ ಆರ್ಥಿಕತೆಯು ವಾರ್ಷಿಕ ಶೇ. 8 ಕ್ಕೆ ಬೆಳೆಯಲು ಪ್ರಾರಂಭಿಸಲು ನಾವು ನಮ್ಮ ಸಮಾಜದಲ್ಲಿನ ಪ್ರಸ್ತುತ ಹವಾಮಾನವನ್ನು ಭಯದಿಂದ ವಿಶ್ವಾಸದ ಹಂತಕ್ಕೆ ಬದಲಾಯಿಸಬೇಕಾಗಿದೆ. ಆರ್ಥಿಕತೆಯ ಸ್ಥಿತಿ ಅದರ ಸಮಾಜದ ಸ್ಥಿತಿಯ ಪ್ರತಿಬಿಂಬವಾಗಿದೆ. ನಮ್ಮ ಸಾಮಾಜಿಕ ನಂಬಿಕೆ ಮತ್ತು ವಿಶ್ವಾಸವು ಈಗ ಛಿದ್ರಗೊಂಡಿದೆ ಎಂದು ಮನಮೋಹನ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp